ಪುಷ್ಪ ಸಿನಿಮಾ ಮಾದರಿಯಲ್ಲೇ ರಕ್ತಚಂದನ ಸಾಗಣೆ ; ಕೋವಿಡ್ ಸೇವೆ ಬೋರ್ಡ್ ಹಾಕಿ ಕೋಟ್ಯಂತರ ವಹಿವಾಟು ! ಸಿಕ್ಕಿಬಿದ್ದ ಕತರ್ನಾಕ್ ಕಬೀರ 

31-01-22 05:51 pm       HK Desk news   ಕ್ರೈಂ

ಮಹಾಮಾರಿ ಕರೊನಾವನ್ನೇ ಬಂಡವಾಳ ಮಾಡಿಕೊಂಡ ಖತರ್ನಾಕ್​ ಕಳ್ಳನೊಬ್ಬ ಕೋಟ್ಯಂತರ ರೂ. ಮೌಲ್ಯದ ರಕ್ತಚಂದನ ಸಾಗಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ.

ಬೆಳಗಾವಿ, ಜ.31 : ಮಹಾಮಾರಿ ಕರೊನಾವನ್ನೇ ಬಂಡವಾಳ ಮಾಡಿಕೊಂಡ ಖತರ್ನಾಕ್​ ಕಳ್ಳನೊಬ್ಬ ಕೋಟ್ಯಂತರ ರೂ. ಮೌಲ್ಯದ ರಕ್ತಚಂದನ ಸಾಗಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ. ವಾಹನದ ಮೇಲೆ 'ಕೋವಿಡ್-19 ಸೇವೆಗಾಗಿ ಹಣ್ಣು ಮಾರಾಟ ವಾಹನ' ಎಂದು ಬೋರ್ಡ್ ಹಾಕಿಕೊಂಡು ಅದರಲ್ಲಿ ರಕ್ತಚಂದನ ತುಂಬಿ ಕರ್ನಾಟಕ- ಆಂಧ್ರ ರಾಜ್ಯ ಗಡಿ ದಾಟಿ ಮಹಾರಾಷ್ಟ್ರ ಗಡಿ ತಲುಪಿದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಈ ಪ್ರಕರಣ ತೆಲುಗಿನ ಸೂಪರ್ ಹಿಟ್ ಪುಷ್ಪ ಸಿನಿಮಾ ಸ್ಟೈಲ್​ನಲ್ಲೇ ನಡೆದಿದೆ. ಯಾಸೀನ್ ಇನಾಯತ್ ಉಲ್ಲಾ ಬಂಧಿತ ಆರೋಪಿ. ಈತ ಬೆಂಗಳೂರು ಸಮೀಪದ ಆನೇಕಲ್ ಮೂಲದ ನಿವಾಸಿ. ಸುಮಾರು ಎರಡೂವರೆ ಕೋಟಿ ಮೌಲ್ಯದ ರಕ್ತಚಂದನ ಮತ್ತು ಕೃತ್ಯಕ್ಕೆ ಬಳಸಿದ ವಾಹನವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಪುಷ್ಟಾ ಸಿನಿಮಾದಲ್ಲಿ ಕಳ್ಳರು ರಕ್ತಚಂದನ ಸಾಗಿಸುವಾಗ ಪೊಲೀಸರಿಗೆ ಅನುಮಾನ ಬಾರದಿರಲೆಂದು ಹಾಲಿನ ವಾಹನ ಬಳಸಿಕೊಂಡ ದೃಶ್ಯವಿದೆ. ಇದನ್ನೇ ಹೋಲುವಂತೆ ಯಾಸೀನ್ ಇನಾಯತ್ ಉಲ್ಲಾ ವಾಹನಕ್ಕೆ 'ಕೋವಿಡ್-19 ಸೇವೆಗಾಗಿ ಹಣ್ಣು ಮಾರಾಟ ವಾಹನ' ಎಂಬ ಬೋರ್ಡ್​ ಹಾಕಿಕೊಂಡು ಒಳಗಡೆ ರಕ್ತಚಂದನ ಸಾಗಿಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅರಣ್ಯ ಅಧಿಕಾರಿಗಳು ಮತ್ತು ಪೊಲೀಸರು, ಮಹಾರಾಷ್ಟ್ರದ ಮೀರಜ್ ನಲ್ಲಿ ರಕ್ತಚಂದನ ವಶಪಡಿಸಿಕೊಂಡು ಆರೋಪಿಯನ್ನ ಬಂಧಿಸಿದ್ದಾರೆ.

Belagavi Sandalwood tree smuggling in truck using Covid Emergency board, one arrested.