ಆಹಾರ ಹುಡುಕಿ ಬಂದ 7 ನವಿಲುಗಳನ್ನು ವಿಷ ಬೆರೆಸಿ ಕೊಂದ ರಾಕ್ಷಸ ! 

31-01-22 06:42 pm       HK Desk news   ಕ್ರೈಂ

ಆಹಾರ ಹುಡುಕಿಕೊಂಡು ಬಂದ ನವಿಲುಗಳಿಗೆ ವ್ಯಕ್ತಿಯೋರ್ವ ವಿಷವಿಟ್ಟು ಕೊಂದ ಘಟನೆ ತಿರುಪತ್ತೂರು ಬಳಿ ನಡೆದಿದ್ದು, ಪೊಲೀಸರು ವ್ಯಕ್ತಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ತಮಿಳುನಾಡು, ಜ 31: ಆಹಾರ ಹುಡುಕಿಕೊಂಡು ಬಂದ ನವಿಲುಗಳಿಗೆ ವ್ಯಕ್ತಿಯೋರ್ವ ವಿಷವಿಟ್ಟು ಕೊಂದ ಘಟನೆ ತಿರುಪತ್ತೂರು ಬಳಿ ನಡೆದಿದ್ದು, ಪೊಲೀಸರು ವ್ಯಕ್ತಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಇರುನಪಟ್ಟು ಗ್ರಾಮದವನಾದ ಮೇಘನಾಥನ್ (38) ಬಂಧಿತ ವ್ಯಕ್ತಿಯಾಗಿದ್ದು, ತಮ್ಮ ಎರಡು ಎಕರೆ ಜಮೀನಿಗೆ ಆಹಾರ ಅರಸಿ ಬಂದಿದ್ದ ಏಳು ನವಿಲುಗಳಿಗೆ ವಿಷಪೂರಿತ ಆಹಾರ ನೀಡಿ ಕೊಂದಿದ್ದಾನೆ.

ಮೇಘನಾಥನ್ ನವಿಲುಗಳ ಕಾಟ ತಪ್ಪಿಸಲು ಇಲಿ ಪಾಷಾಣ ಬೆರೆಸಿದ ಕಾಳುಗಳನ್ನು ಜಮೀನನಲ್ಲಿ ಚೆಲ್ಲಿದ್ದು, ಈ ಕಾಳುಗಳನ್ನು ತಿಂದ ನವಿಲುಗಳು ಸಾವನ್ನಪ್ಪಿದ್ದವು. ಈ ಬಗ್ಗೆ ಅಕ್ಕಪಕ್ಕದವರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ವೆಲ್ಲೂರು ಪೊಲೀಸರು ಆತನನ್ನು ಬಂಧಿಸಿದ್ದಾರೆ. ರಾಷ್ಟ್ರೀಯ ಪಕ್ಷಿಯಾದ ನವಿಲನ್ನು ಕೊಂದವರು 7 ವರ್ಷಗಳ ಕಾಲ ಜೈಲುವಾಸ ಅನುಭವಿಸುತ್ತಾರೆ ಎಂದು ಅರಣ್ಯಾಧಿಕಾರಿಯೊಬ್ಬರು ಜನರಿಗೆ ಎಚ್ಚರಿಕೆ ನೀಡಿದ್ದಾರೆ.

Seven peacocks were poisoned to death in Tamilnadu as they came to land seeking food, one arrested.