ಸಿಸಿಬಿ ಪೊಲೀಸ್ ಎಂದು ಹೇಳಿಕೊಂಡು ವಂಚನೆ ; ಠಾಣೆ ಮುಂದಿರುತ್ತಿದ್ದ ವಾಹನ ತೋರಿಸಿ ಯಾಮಾರಿಸ್ತಿದ್ದ ಖದೀಮ ! 

02-02-22 01:41 pm       HK Desk news   ಕ್ರೈಂ

ಸಿಸಿಬಿ ಪೊಲೀಸ್ ಎಂದು ತನ್ನನ್ನು ಪರಿಚಯಿಸಿಕೊಂಡು ಠಾಣೆ ಮುಂದೆ ಇರುತ್ತಿದ್ದ ವಾಹನಗಳನ್ನು ತೋರಿಸಿ ಮಾರಾಟ ಮಾಡುವ ನೆಪದಲ್ಲಿ ವಂಚಿಸ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 

Photo credits : Headline Karnataka

ಬೆಂಗಳೂರು, ಫೆ.2 : ಸಿಸಿಬಿ ಪೊಲೀಸ್ ಎಂದು ತನ್ನನ್ನು ಪರಿಚಯಿಸಿಕೊಂಡು ಠಾಣೆ ಮುಂದೆ ಇರುತ್ತಿದ್ದ ವಾಹನಗಳನ್ನು ತೋರಿಸಿ ಮಾರಾಟ ಮಾಡುವ ನೆಪದಲ್ಲಿ ವಂಚಿಸ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು ಸಂಪಿಗೆಹಳ್ಳಿ ಪೊಲೀಸರು ಆರೋಪಿ ಲೂರ್ದ್ ನಾಥನ್ ಎಂಬಾತನನ್ನು ಬಂಧಿಸಿದ್ದಾರೆ. ‌ಆರೋಪಿ, ದೇವನಹಳ್ಳಿಯ ಬೂದಿಗೆರೆಯ ನಿವಾಸಿಯಾಗಿದ್ದು ಜನರ ಮುಂದೆ ತನ್ನನ್ನು ಸಿಸಿಬಿ ಪೊಲೀಸ್ ಎಂದು ಪರಿಚಯ ಮಾಡಿಕೊಳ್ತಿದ್ದ. ನಂತರ ಠಾಣೆಯಲ್ಲಿ ಆಕ್ಷನ್ ಹಾಕೋ ವೆಹಿಕಲ್ ಕೊಡಿಸೋದಾಗಿ ನಂಬಿಸ್ತಿದ್ದ. ಠಾಣೆ ಬಳಿ ಕರೆದೊಯ್ದು ಹರಾಜು ಹಾಕೋ ವೆಹಿಕಲನ್ನ ತೋರಿಸಿ ಯಾಮಾರಿಸ್ತಿದ್ದ.

ಅಲ್ಲಿಯೇ ಜನರಿಂದ ಹಣ ಪಡೆದು ಸ್ವಲ್ಪ ದಿನದಲ್ಲೇ ವಾಹನ ಕೊಡಿಸುವುದಾಗಿ ಹೇಳಿ ಭರವಸೆ ನೀಡುತ್ತಿದ್ದ.‌ ಆದರೆ ಅಡ್ವಾನ್ಸ್ ಹಣವೆಂದು ಸ್ವಲ್ಪಾಂಶ ಮಾತ್ರ ಕೊಡುತ್ತಿದ್ದುದರಿಂದ ಮೋಸ ಹೋದವರು ದೂರು ನೀಡುತ್ತಿರಲಿಲ್ಲ. ಹೀಗಾಗಿ ಮತ್ತೆ ಮತ್ತೆ ಕೆಲವರನ್ನು ವಂಚಿಸಿ ಹಣ ಕೀಳುತ್ತಿದ್ದ. ಈ ಬಗ್ಗೆ ಸಂಪಿಗೆಹಳ್ಳಿ ಠಾಣೆಯಲ್ಲಿ ಒಬ್ಬರು ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಉಪಾಯದಿಂದ ಆರೋಪಿಯನ್ನು ಬಂಧಿಸಿದ್ದಾರೆ. ‌

Bangalore Man held for looting people stating himself as CCB police. The arrested has been identified as Lourd Nathan.