ಬ್ರೇಕಿಂಗ್ ನ್ಯೂಸ್
02-02-22 03:13 pm HK Desk news ಕ್ರೈಂ
ಬೆಂಗಳೂರು, ಫೆ.2 : ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯಕ್ಕೆ ಭಾರೀ ಪ್ರಮಾಣದಲ್ಲಿ ಗಾಂಜಾ ಪೂರೈಕೆ ಮಾಡುತ್ತಿದ್ದ ಖದೀಮರ ಜಾಲವನ್ನು ಬೆಂಗಳೂರಿನ ತ್ಯಾಮಗೊಂಡ್ಲು ಪೊಲೀಸರು ಪತ್ತೆ ಮಾಡಿದ್ದಾರೆ.
ಗಾಂಜಾ ಪೂರೈಕೆದಾರನ ಮಾಹಿತಿ ಹಿಡಿದು ಬೆಂಗಳೂರು ಪೊಲೀಸರು ಗಾಂಜಾ ಬೆಳೆಯುವ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಗೆ ತೆರಳಿದ್ದು, ಅಲ್ಲಿನ ನಿವಾಸಿಗಳು ಬೆಳೆಯುತ್ತಿದ್ದ ಅಪಾರ ಪ್ರಮಾಣದ ಗಾಂಜಾ ಗದ್ದೆಯನ್ನು ನೋಡಿ ಶಾಕ್ ಆಗಿದ್ದಾರೆ. ಗೋದಾವರಿ ನದಿ ತೀರದ ಗುಡ್ಡಗಾಡು ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಗಾಂಜಾ ಬೆಳೆಯುತ್ತಿದ್ದು, ಅಲ್ಲಿನ ಜನರು ಅದನ್ನೇ ಮುಖ್ಯ ಕಸುಬಾಗಿಸಿಕೊಂಡಿದ್ದಾರೆ.
ತಮ್ಮ ಹೊಲಗಳಲ್ಲಿ ರಾಜಾರೋಷವಾಗಿ ಗಾಂಜಾವನ್ನು ಬೆಳೆದು ಮನೆ ಅಂಗಳದಲ್ಲಿ ಒಣಗಿಸಿ, ಪಾರ್ಸೆಲ್ ಮಾಡುತ್ತಿದ್ದರು. ನೆಲಮಂಗಲ ಸರ್ಕಲ್ ಇನ್ ಸ್ಪೆಕ್ಟರ್ ರಾಜೀವ ಮತ್ತವರ ತಂಡ ಗೋದಾವರಿ ಜಿಲ್ಲೆಗೆ ತೆರಳಿದ್ದು ಅಲ್ಲಿ ಬೆಳೆಯುತ್ತಿರುವ ಗಾಂಜಾ ಗದ್ದೆಗಳು, ಗಾಂಜಾವನ್ನು ಮೂಟೆ ಕಟ್ಟಿ ದಾಸ್ತಾನು ಮಾಡಿರುವುದು, ಬೆಳೆಯನ್ನು ಕೊಯ್ಲು ಮಾಡಿ ಒಣಗಿಸಿ ದಾಸ್ತಾನು ಕೇಂದ್ರಕ್ಕೆ ಸಾಗಿಸುತ್ತಿರುವ ದೃಶ್ಯವನ್ನು ಸೆರೆಹಿಡಿದಿದ್ದಾರೆ.
ರೈತರು ಬೆಳೆಯುವ ಗಾಂಜಾವನ್ನು ಪ್ಯಾಕೆಟ್ ಮೂಲಕ ಅಲ್ಲಿಂದ ಗುಪ್ತವಾಗಿ ಸರಬರಾಜು ಮಾಡಲಾಗುತ್ತಿದೆ. ತ್ಯಾಮಗೊಂಡ್ಲು ಪೊಲೀಸರು ಗಾಂಜಾ ಕಿಂಗ್ ಪಿನ್ ಎನ್ನಲಾಗಿರುವ ಆಂಧ್ರಪ್ರದೇಶ ಮೂಲದ ರಾಮಪ್ರಸಾದ್ ಮತ್ತು ನೆಲಮಂಗಲ ನಿವಾಸಿ ಉಮೇಶ್ ನನ್ನು ಬಂಧಿಸಿದ್ದಾರೆ. ಇವರ ನಡುವೆ ಕೊಂಡಿಯಾಗಿದ್ದ ಸೈಯದ್ ಎಂಬ ಆರೋಪಿ ಪೊಲೀಸರ ಕಾರ್ಯಾಚರಣೆ ತಿಳಿದು ಎಸ್ಕೇಪ್ ಆಗಿದ್ದಾನೆ. ಆರೋಪಿಗಳು ಕಾರಿನಲ್ಲಿ ಸಾಗಿಸುತ್ತಿದ್ದ 53 ಕೇಜಿ ಗಾಂಜಾ, ಎರಡು ಮೊಬೈಲ್, ಮಾರುತಿ 800 ಕಾರು ಜಪ್ತಿ ಮಾಡಿದ್ದಾರೆ.
ಆರೋಪಿಗಳು ಗೋದಾವರಿ ಜಿಲ್ಲೆಯಿಂದ ರಹಸ್ಯವಾಗಿ ಗಾಂಜಾವನ್ನು ತಂದು ಬೆಂಗಳೂರು ಹೊರವಲಯದಲ್ಲಿ ವಹಿವಾಟು ನಡೆಸುತ್ತಿದ್ದರು. ಚಿಕ್ಕಬಳ್ಳಾಪುರ ಸೇರಿ ಹೊರ ಜಿಲ್ಲೆಗಳಿಗೂ ಗಾಂಜಾ ಪೂರೈಕೆ ಮಾಡುತ್ತಿದ್ದರು. ಇಲ್ಲಿಂದಲೇ ಪೆಡ್ಲರ್ ಗಳು ಗಾಂಜಾವನ್ನು ಪಡೆದು ವಿವಿಧ ಕಡೆಗಳಿಗೆ ಪೂರೈಸುತ್ತಿದ್ದರು. ಗೋದಾವರಿ ಜಿಲ್ಲೆಯಲ್ಲಿ ಪತ್ತೆಯಾಗಿರುವ ಗಾಂಜಾ ಬೆಳೆಯ ಬಗ್ಗೆ ಅಲ್ಲಿನ ಸ್ಥಳೀಯ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
53 kilo Ganja seized, illegal supply to Mangalore and Bangalore found by Police in Godavari. Peddlers pick Ganja from here and supply it to Mangalore and Bangalore has been revealed by the Police.
30-07-25 11:40 am
Bangalore Correspondent
Durgaamba Bus Accident, Shivamogga: ಮಂಗಳೂರಿನಿ...
30-07-25 10:33 am
Kerala Nurse Nimisha Priya: ಕೇರಳ ನರ್ಸ್ ನಿಮಿಷ...
29-07-25 01:31 pm
Nikhil Kumaraswamy: ಸಿಎಂ ಮತ್ತು ಡಿಸಿಎಂ ಮ್ಯೂಸಿಕ...
28-07-25 11:07 am
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
30-07-25 09:06 am
HK News Desk
ಜಾರ್ಖಂಡ್ ನಲ್ಲಿ ಭೀಕರ ರಸ್ತೆ ಅಪಘಾತ ; ಸಿಲಿಂಡರ್...
29-07-25 11:58 am
ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಆಪರೇಶನ್ ಮಹಾದೇವ್,...
28-07-25 11:07 pm
ಮತಾಂತರ ಇಲ್ಲದೆ ಅಂತರ್ ಧರ್ಮೀಯ ವಿವಾಹ ಕಾನೂನು ಬಾಹಿರ...
28-07-25 12:28 pm
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
30-07-25 09:04 am
Mangalore Correspondent
No Evidence, Dharmasthala Burial, SIT: ಹೆಣ ಹೂ...
29-07-25 09:56 pm
Dharmasthala case, SIT Begins Excavation, Upd...
29-07-25 02:20 pm
Dharmasthala Burial Case, 13 Suspected Grave...
28-07-25 10:41 pm
Mangalore Remona Pereira, Golden Book of Wor...
28-07-25 09:40 pm
30-07-25 11:37 am
HK News Desk
ಮಕ್ಕಳಾಗಿಲ್ಲ ಅಂತ ಗಂಡನ ಮೇಲೆ ಸಿಟ್ಟು ; ಪ್ರಿಯಕರನಿಂ...
29-07-25 08:54 pm
Honor Killing in Chitradurga: ತಮ್ಮನಿಗೆ ಎಚ್ಐವ...
29-07-25 07:17 pm
ಕೌನ್ ಬನೇಗಾ ಕರೋಡ್ ಪತಿ ಸ್ಪರ್ಧೆಯಲ್ಲಿ 8 ಲಕ್ಷ ಗೆಲು...
28-07-25 11:20 pm
Mangalore Roshan Saldanha; Fraud Case, High c...
27-07-25 08:39 pm