ಬ್ರೇಕಿಂಗ್ ನ್ಯೂಸ್
04-02-22 03:51 pm HK Desk news ಕ್ರೈಂ
ಕೋಯಿಕ್ಕೋಡ್, ಫೆ.4 : ಕೇರಳದ ಕೋಯಿಕ್ಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದೇ ದಿನ ಗಲ್ಫ್ ರಾಷ್ಟ್ರದಿಂದ ತರುತ್ತಿದ್ದ 23 ಕೇಜಿ ಅಕ್ರಮ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಖಚಿತ ಮಾಹಿತಿಯಂತೆ ಡಿಆರ್ ಐ ಮತ್ತು ಕಸ್ಟಮ್ಸ್ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಫೆ.3ರಂದು ಕಾರ್ಯಾಚರಣೆ ನಡೆಸಿದ್ದರು.
ಗಲ್ಫ್ ರಾಷ್ಟ್ರಗಳಿಂದ ಬಂದಿದ್ದ ಏಳು ವಿಮಾನಗಳಲ್ಲಿ 22 ಮಂದಿ ಆಗಮಿಸಿದ್ದು, ವಿವಿಧ ರೀತಿಯಲ್ಲಿ ಚಿನ್ನವನ್ನು ಅಡಗಿಸಿಟ್ಟು ತಂದಿದ್ದರು. ಯೋಜನಾ ಬದ್ಧವಾಗಿ ಚಿನ್ನವನ್ನು ತರುತ್ತಿರುವ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ತಪಾಸಣೆ ಆರಂಭಿಸಿದ್ದರು. ಈ ವೇಳೆ, 22 ಮಂದಿ ಸಿಕ್ಕಿಬಿದ್ದಿದ್ದು, ಇವರಿಂದ ಚಿನ್ನವನ್ನು ಪಡೆಯಲು ಬಂದಿದ್ದ ಮಂಗಳೂರು ಮೂಲದ ವ್ಯಕ್ತಿಯನ್ನು ಕೂಡ ಬಂಧಿಸಿದ್ದಾರೆ. ಆತನ ಜೊತೆಗೆ ಎರಡು ಕಾರುಗಳು ಬಂದಿದ್ದು, ಅದನ್ನು ಕೂಡ ವಶಕ್ಕೆ ಪಡೆಯಲಾಗಿದೆ.
ಅಕ್ರಮ ಚಿನ್ನದ ವಹಿವಾಟಿಗೆ ಕೇರಳ ರಹದಾರಿ
ಕೇರಳ ಅಕ್ರಮ ಚಿನ್ನ ಕಳ್ಳಸಾಗಣೆದಾರರಿಗೆ ರಹದಾರಿಯಾಗಿದ್ದು, ಭಾರೀ ಪ್ರಮಾಣದಲ್ಲಿ ಅಕ್ರಮ ವಹಿವಾಟು ನಡೆಯುತ್ತಿದೆ. ಇತ್ತೀಚಿನ ಕೆಲವು ತಿಂಗಳಲ್ಲಿ ಕೇರಳದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಬರೋಬ್ಬರಿ 232 ಕೇಜಿ ಅಕ್ರಮ ಚಿನ್ನ ಸಾಗಣೆಯನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಮಹಿಳೆಯರು, ಯುವಕರು, ಮಕ್ಕಳು ಹೀಗೆ ವಿದೇಶದಿಂದ ಬರುವ ಸಂದರ್ಭದಲ್ಲಿ ಚಿನ್ನವನ್ನು ವಿವಿಧ ರೂಪದಲ್ಲಿ ಅಡಗಿಸಿ ತರುತ್ತಿದ್ದಾರೆ. ಹೀಗೆ ತರಲಾಗುವ ಚಿನ್ನವನ್ನು ವ್ಯವಸ್ಥಿತವಾಗಿ ಪಡೆಯುವ ಜಾಲ ಇದ್ದು, ಅದರ ಬಗ್ಗೆ ತನಿಖೆಗೆ ಕೇರಳದ ಕಸ್ಟಮ್ಸ್ ಇಲಾಖೆ ಮುಂದಾಗಿದೆ.
ಕಳೆದ ಆಗಸ್ಟ್ ನಲ್ಲಿ ಕಣ್ಣೂರು ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಡಬಲ್ ಲೇಯರ್ ಜೀನ್ಸ್ ಪ್ಯಾಂಟ್ ಧರಿಸಿ ಸಿಕ್ಕಿಬಿದ್ದಿದ್ದ. ತಪಾಸಣೆ ಸಂದರ್ಭದಲ್ಲಿ 14 ಲಕ್ಷ ರೂ. ಮೌಲ್ಯದ ಚಿನ್ನವನ್ನು ತೆಳು ಪದರವಾಗಿಸಿ ಜೀನ್ಸ್ ಪ್ಯಾಂಟಿನಲ್ಲಿ ಅಡಗಿಸಿದ್ದು ಪತ್ತೆಯಾಗಿತ್ತು. ಜೀನ್ಸ್ ಪ್ಯಾಂಟ್, ಬೆಲ್ಟ್ ಪಟ್ಟಿ, ಬಟನ್ ಹೀಗೆ ವಿವಿಧ ಮಾದರಿಯಲ್ಲಿ ಚಿನ್ನದ ಕಳ್ಳಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ. ಇದಲ್ಲದೆ, ಇತ್ತೀಚೆಗೆ ಮುಖದ ಮಾಸ್ಕ್ ನಲ್ಲಿಯೂ ಚಿನ್ನವನ್ನು ಅಡಗಿಸಿದ್ದು ಕಂಡುಬಂದಿತ್ತು. ಗುದ ದ್ವಾರದಲ್ಲಿ ಚಿನ್ನವನ್ನು ಉಂಡೆಯಾಗಿಸಿ ತರುವುದು ಮಹಿಳೆಯರು, ಪುರುಷರೆನ್ನದೆ ಕಾಮನ್ ಫ್ಯಾಷನ್ ಆಗಿಬಿಟ್ಟಿದೆ.
ಇತ್ತೀಚೆಗೆ ಸಂಸತ್ತಿನಲ್ಲಿ ಮಂಡನೆಯಾದ ವರದಿ ಪ್ರಕಾರ, ದೇಶದಲ್ಲಿ ಅತಿ ಹೆಚ್ಚು ಗೋಲ್ಡ್ ಸ್ಮಗ್ಲಿಂಗ್ ನಡೆಯುವ ವಿಮಾನ ನಿಲ್ದಾಣಗಳಲ್ಲಿ ಕೋಜಿಕ್ಕೋಡ್ ಎರಡನೇ ಸ್ಥಾನದಲ್ಲಿದೆ. ಕಳೆದ ನವೆಂಬರ್ ವರೆಗೆ ಕೋಯಿಕ್ಕೋಡ್ ಏರ್ಪೋರ್ಟ್ ನಲ್ಲಿ 128 ಕೇಜಿ ಚಿನ್ನ ವಶಕ್ಕೆ ಪಡೆಯಲಾಗಿತ್ತು. ಇದೇ ವೇಳೆ, ಚೆನ್ನೈ ವಿಮಾನ ನಿಲ್ದಾಣದಲ್ಲಿ 130 ಕೇಜಿ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಕೊಚ್ಚಿ ಏರ್ಪೋರ್ಟ್ ನಲ್ಲಿ 62 ಕೇಜಿ ಚಿನ್ನ ಪತ್ತೆಯಾದರೆ, ಕಣ್ಣೂರು ವಿಮಾನ ನಿಲ್ದಾಣದಲ್ಲಿ 28 ಕೇಜಿ ಚಿನ್ನ ಪತ್ತೆಯಾಗಿತ್ತು. ಇಡೀ ದೇಶದಲ್ಲಿ ಅಕ್ರಮ ಚಿನ್ನದ ವಹಿವಾಟು ಕೇರಳದಲ್ಲಿಯೇ ಅತಿ ಹೆಚ್ಚು ನಡೆಯುತ್ತಿದೆ.
On Wednesday, the Customs Preventive department seized 23 kg of smuggled gold at Karipur international airport in Kozhikode, Kerala. According to a report in Hindustan Times, a team of the Directorate of Revenue Intelligence (DRI) and the customs department carried out a joint operation named ‘Desert Storm’ to seize the yellow metal on Thursday.
09-01-25 07:04 pm
HK News Desk
S T Somashekar, Yatnal, DK Shivakumar temple:...
09-01-25 04:54 pm
Hassan, Lokayukta Arrest: ಹಾಸನಾಂಬ ಜಾತ್ರಾ ಮಹೋತ...
09-01-25 04:21 pm
Six Naxals Surrender, CM Siddaramaiah: ಕಾಡಿನ...
08-01-25 09:26 pm
ಬೆಂಗಳೂರು, ಬೆಳಗಾವಿ, ಚಿಕ್ಕಮಗಳೂರು ಸೇರಿ ರಾಜ್ಯದಾದ್...
08-01-25 03:39 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
09-01-25 07:50 pm
Mangalore Correspondent
ಜನವರಿ 11-12 ; 'ಮಂಗಳೂರು ಲಿಟ್ ಫೆಸ್ಟ್' ಏಳನೇ ಆವೃತ...
08-01-25 09:51 pm
Surathkal Beach, Drowning, Mangalore; ಸುರತ್ಕಲ...
08-01-25 06:13 pm
Naxal, Vikram Gowda, Surrender: ಶರಣಾಗುವವರಿಗೆ...
08-01-25 11:53 am
MCC Bank Anil Lobo, Bail Reject, Mangalore; ಎ...
07-01-25 11:13 pm
09-01-25 10:43 pm
Mangalore Correspondent
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm
Old Coin Scam, Mangalore Fraud: ಎಲ್ಲ ಆಯ್ತು.....
09-01-25 01:26 pm
Vamanjoor Misfire, Mangalore Crime, Police; ಪ...
09-01-25 11:27 am
Fraud, Mangalore, QR Scan; ಪೆಟ್ರೋಲ್ ಪಂಪ್ ನಲ್ಲ...
08-01-25 10:57 pm