ಶ್ರೀಗಂಧ ಕಳ್ಳತನ ಪ್ರಕರಣ ; ಮೂವರನ್ನು ಬಂಧಿಸಿದ ಕೊಣಾಜೆ ಪೊಲೀಸರು 

07-02-22 11:06 pm       Mangalore Correspondent   ಕ್ರೈಂ

ಶ್ರೀಗಂಧದ ಮರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 25 ಸಾವಿರ ರೂ. ಮೌಲ್ಯದ ಶ್ರೀಗಂಧವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಂಗಳೂರು, ಫೆ.7 : ಶ್ರೀಗಂಧದ ಮರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 25 ಸಾವಿರ ರೂ. ಮೌಲ್ಯದ ಶ್ರೀಗಂಧವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬೆಳುವಾಯಿ ನಿವಾಸಿ ಪ್ರಸಕ್ತ ಕೆ.ಸಿ. ನಗರದಲ್ಲಿ ವಾಸವಿರುವ ಮಜೀದ್ ಯಾನೆ ನವಾಝ್, ಬಂಟ್ವಾಳದ ಶರೀಫ್ ಯಾನೆ ದುನಿಯಾ ಶರೀಫ್ ಹಾಗೂ ವರ್ಕಾಡಿಯ ಲಕ್ಷ್ಮಣ ಶೆಟ್ಟಿ ಬಂಧಿತ ಆರೋಪಿಗಳು. ಆರೋಪಿಗಳನ್ನು ಮಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಫೆ.4ರಂದು ರಾತ್ರಿ ಬಂಧಿಸಲಾಗಿದೆ. ಇವರಿಂದ ಸುಮಾರು 25,000 ರೂ. ಮೌಲ್ಯದ 41.1 ಕೆಜಿ ತೂಕದ 14 ಶ್ರೀಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.

2020 ಮತ್ತು 2021ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಗಂಧದ ಮರ ಕಳವು ಪ್ರಕರಣಗಳಿಗೆ ಸಂಬಂಧಿಸಿ ಇವರನ್ನು ವಿಚಾರಣೆಗೊಳಪಡಿಸಲಾಗಿದೆ.  ಕೆಸಿ ರೋಡ್ ನ ಹಸೈನಾರ್ ಎಂಬಾತನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Konaje police in the city arrested accused related to the theft of sandalwood tree from the university campus on February 4. A case in this regard is registered with Konaje police station. The arrested accused are identified as Majid alias Nawaz, resident of K C Nagar, Sharif alias Duniya Sharif, resident of Bantwal and Laxman Shetty, resident of Varkady.