ಬ್ರೇಕಿಂಗ್ ನ್ಯೂಸ್
10-02-22 03:06 pm HK Desk news ಕ್ರೈಂ
ಬೆಂಗಳೂರು, ಫೆ.10 : ಗಂಡ ಹೃದಯಾಘಾತದಿಂದ ತೀರಿಕೊಂಡಿದ್ದಾನೆಂದು ಸುಳ್ಳು ಹೇಳಿ ಇನ್ ಶೂರೆನ್ಸ್ ಕಂಪನಿಯಿಂದ ಮೂರು ಕೋಟಿ ರೂಪಾಯಿ ವಿಮೆ ಪಡೆದು ವಂಚನೆ ನಡೆಸಿರುವ ಬಗ್ಗೆ ಮಹಿಳೆಯೊಬ್ಬರ ವಿರುದ್ಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಟ್ಟಸಂದ್ರ ನಿವಾಸಿ ಸುಪ್ರಿಯಾ ಲಾಕಾಕುಲ ಎಂಬ ಮಹಿಳೆಯ ವಿರುದ್ಧ ಇನ್ ಶೂರೆನ್ಸ್ ಕಂಪನಿಯ ಲೀಗಲ್ ಅಡ್ವೈಸರ್ ಪಿ.ಎಸ್.ಗಣಪತಿ ದೂರು ನೀಡಿದ್ದಾರೆ. ಆಂಧ್ರಪ್ರದೇಶ ಮೂಲದ, ಬೆಂಗಳೂರಿನಲ್ಲಿ ನೆಲೆಸಿದ್ದ ಕೃಷ್ಣಪ್ರಸಾದ್ ಗರಳಪಟ್ಟಿ(31) ಎಂಬವರು ಎರಡು ವರ್ಷಗಳ ಹಿಂದೆ ಖಾಸಗಿ ಇನ್ಶೂರೆನ್ಸ್ ಕಂಪನಿಯಿಂದ ಮೂರು ಕೋಟಿ ರೂಪಾಯಿ ಮೊತ್ತದ ಲೈಫ್ ಇನ್ಶೂರೆನ್ಸ್ ವಿಮೆ ಮಾಡಿಸಿದ್ದರು. ಈ ವೇಳೆ, ತನ್ನ ಪತ್ನಿ ಸುಪ್ರಿಯಾಳನ್ನು ನಾಮಿನಿ ಆಗಿ ತೋರಿಸಿದ್ದರು. ವರ್ಷಕ್ಕೆ 50 ಸಾವಿರ ಪ್ರೀಮಿಯಂ ಕಟ್ಟಲು ಬರುತ್ತಿತ್ತು. ಆನ್ಲೈನಲ್ಲೇ ವಿಮೆಯನ್ನು ಮಾಡಿಸಿಕೊಂಡಿದ್ದರು.
ಆದರೆ, 2021ರ ಮೇ 14ರಂದು ಕೃಷ್ಣಪ್ರಸಾದ್ ಮೃತಪಟ್ಟಿದ್ದು, ಪತ್ನಿ ಸುಪ್ರಿಯಾ ಗಂಡ ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ಹೇಳಿ ಇನ್ಶೂರೆನ್ಸ್ ಕಂಪನಿಯಿಂದ ಕ್ಲೈಮ್ ಮಾಡಿಕೊಂಡಿದ್ದರು. ವೈದ್ಯಕೀಯ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ ಕಂಪನಿ, 3.2 ಕೋಟಿ ರೂಪಾಯಿ ವಿಮಾ ಹಣವನ್ನು ಸುಪ್ರಿಯಾ ಬ್ಯಾಂಕ್ ಖಾತೆಗೆ ಹಾಕಿತ್ತು. ಆದರೆ ಈ ನಡುವೆ, ರವಿ ಎಂಬ ವ್ಯಕ್ತಿ ಈ ಬಗ್ಗೆ ಇನ್ಶೂರೆನ್ಸ್ ಕಂಪನಿಗೆ ದೂರು ನೀಡಿದ್ದು, ಕೃಷ್ಣಪ್ರಸಾದ್ ಕ್ಯಾನ್ಸರ್ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿದ್ದಲ್ಲ. ವಿಮೆ ಪಡೆಯುವಾಗಲೇ ಅವರಿಗೆ ಕ್ಯಾನ್ಸರ್ ಕಾಯಿಲೆ ಇತ್ತು. ಸುಪ್ರಿಯಾ ಅವರು ನಕಲಿ ದಾಖಲೆ ಪತ್ರಗಳನ್ನು ಸಿದ್ಧಪಡಿಸಿ ವಿಮಾ ಹಣವನ್ನು ಪಡೆದಿದ್ದಾರೆಂದು ದೂರಿದ್ದರು.
ಇದರಂತೆ, ಪರಿಶೀಲನೆ ನಡೆಸಿದ ವಿಮಾ ಕಂಪನಿ ಅಧಿಕಾರಿಗಳು ದೂರಿನಲ್ಲಿ ನಿಜಾಂಶ ಇರುವುದನ್ನು ಪತ್ತೆಹಚ್ಚಿದ್ದು, ಮಹಿಳೆ ಕಂಪನಿಗೆ ವಂಚನೆ ಎಸಗಿದ್ದಾಳೆಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸ್ ದೂರು ದಾಖಲಾಗುತ್ತಿದ್ದಂತೆ ಮಹಿಳೆ ನಾಪತ್ತೆಯಾಗಿದ್ದಾಳೆ.
A private insurance company has realised with delay that the wife of a policyholder had falsely claimed that her husband died of heart attack with an eye on claiming the insurance amount of three crore rupees. The company has now filed a complaint against her.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm