ಬ್ರೇಕಿಂಗ್ ನ್ಯೂಸ್
10-02-22 04:05 pm HK Desk news ಕ್ರೈಂ
ಬಂಟ್ವಾಳ, ಫೆ.10 : ವಿದ್ಯುತ್ ಬಿಲ್ ತಪಾಸಣೆ ಹೆಸರಲ್ಲಿ ಮನೆಯಂಗಳಕ್ಕೆ ಬಂದಿದ್ದ ಅದೇ ನೆಪದಲ್ಲಿ ಮನೆ ಒಳಗೆ ಬಂದು ಮಹಿಳೆಯನ್ನು ಥಳಿಸಿ ದರೋಡೆಗೈದ ಘಟನೆ ವಿಟ್ಲ ಪೇಟೆಯ ಅಡ್ಡದ ಬೀದಿಯಲ್ಲಿ ನಡೆದಿದೆ. ಬುಧವಾರ ಸಂಜೆ ವೇಳೆಗೆ ಮನೆಗೆ ಆಗಮಿಸಿದ್ದ ಇಬ್ಬರು ಆಗಂತುಕರು ಬೀಫಾತುಮ್ಮ ಎಂಬ ಮಹಿಳೆಯ ಮೇಲೆ ಹಲ್ಲೆಗೈದು, ಆಕೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ವಿಟ್ಲ ಕಸಬಾ ಗ್ರಾಮದ ನಿವಾಸಿ ಬೀಫಾತುಮ್ಮ (50) ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೀಫಾತುಮ್ಮ ಅವರ ಪತಿ ಸುಲೈಮಾನ್, ವಿಟ್ಲದ ಅಡ್ಡದ ಬೀದಿಯ ಸಮೀಪದಲ್ಲೇ ರಸ್ತೆ ಬದಿ ಎಳನೀರು ಮಾರುವ ವ್ಯಾಪಾರ ಮಾಡುತ್ತಿದ್ದು, ಮಧ್ಯಾಹ್ನ ಊಟಕ್ಕೆ ಬಂದು ಆನಂತರ ಹಿಂತಿರುಗಿದ್ದರು. ಕೆಲಹೊತ್ತಿನಲ್ಲಿಯೇ ಬೈಕಿನಲ್ಲಿ ಇಬ್ಬರು ಬಂದಿದ್ದು, ಹೆಲ್ಮೆಟ್ ಹಾಕ್ಕೊಂಡಿದ್ದರು.
ಮಹಿಳೆಯ ಬಳಿ ಕರೆಂಟ್ ಬಿಲ್ ಕಟ್ಟಿಲ್ಲವಾ ಎಂದು ವಿಚಾರಿಸಿದ್ದಾರೆ. ಬಿಲ್ ಇದೆಯೆಂದು ಒಳಗೆ ಹೋದ ಮಹಿಳೆಯನ್ನು ಯುವಕರು ಹಿಂಬಾಲಿಸಿ ಒಳಗೆ ಬಂದಿದ್ದು, ಕೈಯಲ್ಲಿದ್ದ ಚೂರಿಯಿಂದ ಕೈ, ಹೊಟ್ಟೆ, ಕುತ್ತಿಗೆಗೆ ಹಲ್ಲೆ ಮಾಡಿದ್ದಾರೆ. ಆನಂತರ ಮಹಿಳೆ ಧರಿಸಿದ್ದ ಚಿನ್ನದ ಒಡವೆಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಆನಂತರ ಮನೆಯ ಹೊರಗೆ ಬಂದ ಮಹಿಳೆ ಸ್ಥಳೀಯರಿಗೆ ಹೇಳಿದ್ದಾರೆ. ಮಹಿಳೆಯನ್ನು ವಿಟ್ಲ ಸಮುದಾಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಿ, ಮಂಗಳೂರಿಗೆ ಒಯ್ಯಲಾಗಿದೆ.
ಮನೆಯ ಕೊಠಡಿಯ ಕಪಾಟು ಒಡೆದ ರೀತಿಯಲ್ಲಿ ಕಂಡುಬಂದಿದ್ದು ಹಣ ಅಥವಾ ಇನ್ನಿತರ ವಸ್ತುಗಳು ಕಳವಾಗಿದೆಯೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಂಟ್ವಾಳ ಸರ್ಕಲ್ ಇನ್ಸ್ ಪೆಕ್ಟರ್ ನಾಗರಾಜ್ ಸೇರಿದಂತೆ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸಿದ್ದಾರೆ. ಮಂಗಳೂರಿನ ಬೆರಳಚ್ಚು ತಜ್ಞರು ತೆರಳಿ, ತಪಾಸಣೆ ನಡೆಸಿದ್ದಾರೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Mangalore Miscreants flee with good and cash in the name of collecting electricity bill at Vitla.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm