ಬ್ರೇಕಿಂಗ್ ನ್ಯೂಸ್
14-02-22 09:25 pm Bengaluru Correspondent ಕ್ರೈಂ
ಬೆಂಗಳೂರು, ಫೆ.14 : 100 ಕೋಟಿ ಲೋನ್ ಕೊಡಿಸುವುದಾಗಿ ಹೇಳಿ ಉದ್ಯಮಿಗಳನ್ನು ವಂಚಿಸುತ್ತಿದ್ದ ಅಂತರಾಜ್ಯ ಗ್ಯಾಂಗ್ ಒಂದನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮುಂಬೈ ಹಾಗೂ ಮಧ್ಯಪ್ರದೇಶ ಮೂಲದ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಮುಂಬೈ ಮೂಲದ ಸಂತೋಷ್, (36), ಸಂದೇಶ್ (45) ಸೇರಿ ಐವರ ಬಂಧಿತರು. ನೂರು ಕೋಟಿ ಲೋನ್ ಕೊಡಿಸೋದಾಗಿ ಹೇಳಿ ಉದ್ಯಮಿ ವಿನ್ಸನ್ ಎಂಬವರಿಂದ ಒಂದು ಕೋಟಿ ಪಡೆದು ವಂಚನೆ ಮಾಡಿದ್ದ ಬಗ್ಗೆ ದೂರು ದಾಖಲಾಗಿತ್ತು. ಈ ಕುರಿತು ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು.
ಸೂಟ್ಕೇಸ್‌ನಲ್ಲಿ ತುಂಬಿಸಿದ ಹಣವನ್ನು ತೋರಿಸಿ ಖದೀಮರು ಗಾಳ ಹಾಕುತ್ತಿದ್ದರು. ಎರಡು ಸಾವಿರ ಮುಖಬೆಲೆಯ ಕೋಟ್ಯಾಂತರ ರೂ. ನಗದು ತೋರಿಸಿ ವಂಚನೆ ಎಸಗಿದ್ದಾರೆ ಎನ್ನಲಾಗಿತ್ತು. ವಿನ್ಸನ್, ಮೈಸೂರಿನ ಗಾರ್ಮೆಂಟ್ ಫ್ಯಾಕ್ಟರಿ ಉದ್ಯಮಿಯಾಗಿದ್ದು ವ್ಯಾಪಾರ ಅಭಿವೃದ್ಧಿ ಮಾಡಲು ಲೋನ್ ಪಡೆಯಲು ತಿರುಗಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಆರೋಪಿಗಳಾದ ಸಂತೋಷ್ ಹಾಗೂ ಸಂದೇಶ್, ನೂರು ಕೋಟಿ ಲೋನ್ ತೆಗೆಸಿಕೊಡುವುದಾಗಿ ಹೇಳಿ ಸ್ನೇಹ ಸಂಪಾದಿಸಿದ್ದರು. ಆನಂತರ, ಹಲವು ಫೈವ್ ಸ್ಟಾರ್ ಹೊಟೇಲ್ ಗಳಲ್ಲಿ ಮೀಟಿಂಗ್ ನಡೆಸಿದ್ದು ಈ ಬಗ್ಗೆ ಚರ್ಚೆ ನಡೆಸಿದ್ದರು.
ಸಾವಿರಾರು ಕೋಟಿ ಹಣ ತಮ್ಮ ಬಳಿ ಇರೋದಾಗಿ ಹೇಳಿದ್ದಲ್ಲದೆ, ನಂಬಿಕೆ ಬರಲು ಸೂಟ್ ಕೇಸ್ ಗಳಲ್ಲಿ ತುಂಬಿದ ಹಣವನ್ನು ತೋರಿಸಿ ಆಮಿಷ ಒಡ್ಡಿದ್ದರು. ಇದೆಲ್ಲಾ ಹಣ ನಿಮಗೂ ಸಿಗುತ್ತೆ. ಆದರೆ, ಹಣ ಸಿಗಬೇಕಾದ್ರೆ ಇಂತಿಷ್ಟು ಖರ್ಚಾಗುತ್ತೆ. ಅದಕ್ಕಾಗಿ ಒಂದು ಕೋಟಿ ಬೇಕೆಂದು ಹೇಳಿ ಉದ್ಯಮಿಯಿಂದಲೇ ಹಣವನ್ನು ಪಡೆದಿದ್ದರು. ಆದರೆ ನೂರು ಕೋಟಿಗಾಗಿ ಒಂದು ಕೋಟಿ ಹೋದರೆ ಹೋಗಲಿ ಎಂದು ಹಣ ಕೊಟ್ಟಿದ್ದ ಉದ್ಯಮಿ ತನಗೆ ಹಣ ಬರದಿದ್ದಾಗ ಮೋಸ ಆಗಿರುವ ಬಗ್ಗೆ ತಿಳಿದು ಪೊಲೀಸರತ್ತ ಬಂದಿದ್ದರು. ಸದ್ಯ ಐವರನ್ನ ಬಂಧಿಸಿ 87 ಲಕ್ಷ 73 ಸಾವಿರ ಹಣವನ್ನು ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ.
The Electronics City police on Monday arrested a five-member gang allegedly for cheating several businessmen in the city offering huge amounts of loan and escaping with the 1% commission. This amount sums up to at least ₹1 crore. Based on a complaint filed by Vincent, a garment businessman, a team of police tracked down the gang and arrested them from Mumbai and Madhya Pradesh.
26-05-26 11:03 pm
HK News Desk
ದೈವಕ್ಕೆ ಅಪಮಾನ; ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ...
26-05-26 08:51 pm
ಬರೆದಿಟ್ಕೊಳ್ಳಿ , ಮುಂದೇನೂ ನಮ್ದೇ ಸರ್ಕಾರ ಇರ್ತದೆ ;...
25-05-26 09:38 pm
Student Suicide: ನೀಟ್ ಪರೀಕ್ಷೆ ಪಜೀತಿ ; ಪಿಯುಸಿಯ...
24-05-26 09:03 pm
ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು...
24-05-26 05:36 pm
26-05-26 12:54 pm
HK News Staffer
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ಸ್ಥಾನಕ್ಕೆ ರಾಜಿನಾ...
25-05-26 08:18 pm
ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಸಿಬಿಐ ತನಿಖೆಗೆ ಸು...
25-05-26 05:29 pm
ಮತ್ತೆ ಇಂಧನ ಶಾಕ್..! 11 ದಿನದಲ್ಲಿ 4ನೇ ಬಾರಿ ಪೆಟ್ರ...
25-05-26 10:19 am
26-05-26 09:02 pm
HK News Staffer
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
ಎಂಆರ್ ಪಿಎಲ್ ಕೋಕ್ ಸಲ್ಫರ್ ಮಾಲಿನ್ಯ ; ಆರು ತಿಂಗಳಲ್...
25-05-26 09:57 pm
‘ಲ್ಯಾಂಡ್ ಲಿಂಕ್ಸ್’ ಸಂಸ್ಥೆಯ ನಾಲ್ಕು ಸಭಾಭವನ ಏಕಕಾ...
25-05-26 04:23 pm
ಅಮೆರಿಕದಲ್ಲಿ ಧರ್ಮಗುರು, ಹುಟ್ಟೂರು ಮಂಗಳೂರಿನಲ್ಲಿ ಸ...
25-05-26 01:08 pm
26-05-26 02:43 pm
HK News Staffer
ಪಿಯುಸಿ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣ ;...
26-05-26 11:56 am
Tablet Arif Murder: ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರ...
25-05-26 11:00 pm
ಭಟ್ಕಳದಲ್ಲಿ ಮುರಿದ ಕೋಮು ಸಾಮರಸ್ಯದ ಕಟ್ಟೆ; ರಸ್ತೆ ನ...
25-05-26 09:40 pm
ಮುಸ್ಲಿಂ ಲೀಗ್ ಶಾಸಕನ ಬಗ್ಗೆ ವಾಟ್ಸಾಪ್ ಗ್ರೂಪಿನಲ್ಲಿ...
25-05-26 04:26 pm