ಬ್ರೇಕಿಂಗ್ ನ್ಯೂಸ್
15-02-22 07:53 pm Mangalore Correspondent ಕ್ರೈಂ
Photo credits : Headline Karnataka
ಮಂಗಳೂರು, ಫೆ.15 : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬರೋಬ್ಬರಿ ಎರಡು ಕೋಟಿ 20 ಲಕ್ಷ ಮೌಲ್ಯ ಬೆಲೆಬಾಳುವ ತಿಮಿಂಗಿಲ ಮೀನಿನ ವಾಂತಿ (ಅಂಬರ್ ಗ್ರೀಸ್) ಅನ್ನು ಮಂಗಳೂರಿನಲ್ಲಿ ಅಕ್ರಮವಾಗಿ ಮಾರಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣವನ್ನು ಪೊಲೀಸರು ಪತ್ತೆ ಮಾಡಿದ್ದು, ನಾಲ್ವರನ್ನು ಬಂಧಿಸಿದ್ದಾರೆ.
ಕೊಡಗು ಜಿಲ್ಲೆಯ ಭಾಗಮಂಡಲ ಸಮೀಪದ ಕರಿಕೆ ಗ್ರಾಮದ ನಿವಾಸಿಗಳಾದ ಜಾಬೀರ್ (35) ಮತ್ತು ಶಬಾದ್ ಎಲ್.ಕೆ.(27), ಕಾಞಂಗಾಡು ಸಮೀಪದ ಪಡನ್ನಕ್ಕಾಡ್ ನಿವಾಸಿಗಳಾದ ಆಸೀರ್ (36), ಶರೀಫ್ (32) ಎಂಬ ನಾಲ್ವರು ಬಂಧಿತರಾಗಿದ್ದು, ಇವರು ಕೇರಳದ ಕ್ಯಾಲಿಕಟ್ ಜಿಲ್ಲೆಯಿಂದ ಮಂಗಳೂರಿಗೆ ತರುತ್ತಿದ್ದರು. ಅಂಬರ್ ಗ್ರೀಸನ್ನು ಮಾರಾಟ ಮಾಡುವ ಉದ್ದೇಶದಿಂದ ಕಾರಿನಲ್ಲಿ ತರುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಎರಡು ಕೇಜಿ 200 ಗ್ರಾಮ್ ಇದ್ದ ಅಂಬರ್ ಗ್ರೀಸ್ ಮಾಲನ್ನು ಮಂಗಳೂರಿನಲ್ಲಿ ಗಿರಾಕಿ ಕುದುರಿಸಲು ತರುತ್ತಿದ್ದಾರೆಂಬ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದರು.
ಮಂಗಳೂರಿನ ಜಪ್ಪಿನಮೊಗರಿನಲ್ಲಿ ಇಡಲಾಗಿದ್ದ ಮಾಲನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ 5 ಮೊಬೈಲ್ ಫೋನ್, ಒಂದು ಸ್ವಿಫ್ಟ್ ಕಾರು, 1070 ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ವಶಕ್ಕೆ ಪಡೆದ ಸೊತ್ತುಗಳ ಮೌಲ್ಯ 2.25 ಕೋಟಿ ಆಗಿರುತ್ತದೆ.
ಆಳ ಸಮುದ್ರದಲ್ಲಿ ಜೀವಿಸುವ ನೀಲ ತಿಮಿಂಗಿಲ ವರ್ಷದಲ್ಲಿ ಒಂದು ಬಾರಿ ವಾಂತಿ ಮಾಡುತ್ತಿದ್ದು, ಸಮುದ್ರ ಮಧ್ಯೆ ತೇಲುತ್ತಿರುತ್ತದೆ. ಅದನ್ನು ವಿದೇಶದಲ್ಲಿ ಸುಗಂಧ ದ್ರವ್ಯಗಳ ಉತ್ಪಾದನೆಯ ಉದ್ದೇಶಕ್ಕೆ ಬಳಸಲಾಗುತ್ತಿದೆ. ಹೀಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಮೌಲ್ಯ ಹೊಂದಿದೆ ಎನ್ನಲಾಗುತ್ತಿದೆ. ಮೀನುಗಾರಿಕೆ ವೇಳೆ ಪತ್ತೆಯಾಗುವ ಈ ಪದಾರ್ಥವನ್ನು ಮೀನುಗಾರರಿಂದ ಕನಿಷ್ಠ ದರಕ್ಕೆ ಪಡೆದು ಅಕ್ರಮವಾಗಿ ಗರಿಷ್ಠ ದರಕ್ಕೆ ವಿಕ್ರಯಿಸಲು ಕೆಲವರು ಯತ್ನಿಸುತ್ತಾರೆ. ಒಬ್ಬರಿಂದ ಇನ್ನೊಬ್ಬರು ಪಡೆದು ಹೆಚ್ಚಿನ ಬೆಲೆಗೆ ಮಾರಾಟಕ್ಕೆ ಯತ್ನಿಸುವ ಸಂದರ್ಭದಲ್ಲಿ ಸಿಕ್ಕಿಬೀಳುತ್ತಿದ್ದಾರೆ. ಅಂಬರ್ ಗ್ರೀಸ್ ಮಾರಾಟ ಮತ್ತು ಬಳಕೆ ಭಾರತದಲ್ಲಿ ನಿಷೇಧ ಇರುವುದರಿಂದ ಕಾನೂನು ವ್ಯಾಪ್ತಿಯಲ್ಲಿ ಮಾರಾಟಕ್ಕೆ ಅವಕಾಶ ಇರುವುದಿಲ್ಲ.
Mangaluru city police have arrested four interstate peddlers for attempting to sell ambergris worth Rs 2.2 crore at Jeppinamogaru under the limits of Kankanady town police station limits. The arrested have been identified as Jabir M A (35) and Shabad L K (27) from Kodagu, and Asir V P (36) and Sharief N (32) from Kanhangad. Police have seized five mobile phones, a Swift car, Rs 1,070 in cash, altogether totalling Rs 2,25,92,070 including ambergris.
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
27-11-24 12:31 pm
Mangalore Correspondent
Brahmavara Police Station, Udupi: ಪೊಲೀಸರ ವಶದ...
26-11-24 11:23 pm
Mangalore, Suicide, Belthangady: ಬೆಳ್ತಂಗಡಿ ;...
26-11-24 10:58 pm
Mangalore Baby, Lady goschen Hospital: ಲೇಡಿಗೋ...
26-11-24 10:50 pm
Tamil Actor Surya, Jyothika, Udupi temple: ಕೊ...
26-11-24 08:23 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm