ಬ್ರೇಕಿಂಗ್ ನ್ಯೂಸ್
15-02-22 10:11 pm HK Desk news ಕ್ರೈಂ
ವಿಜಯಪುರ, ಫೆ.15 : ಮನೆಯವರ ವಿರೋಧ ಲೆಕ್ಕಿಸದೆ ಪ್ರೀತಿಸಿ ಮದ್ವೆಯಾಗಿದ್ದ ಮಾಜಿ ಕಾರ್ಪೋರೇಟರ್ ಒಬ್ಬರ ಮಗಳು ಮತ್ತು ಪಿಎಸ್ಐ ಪುತ್ರನ ಲವ್ ಸ್ಟೋರಿ ದುರಂತ ಅಂತ್ಯ ಕಂಡಿದೆ. ವಿಜಯಪುರ ನಗರದಲ್ಲಿ ಹಾಡಹಗಲೇ ಅಳಿಯನನ್ನೇ ಮಾವನ ಕಡೆಯವರು ಹತ್ಯೆ ಮಾಡಿದ್ದು, ಐದು ತಿಂಗಳ ಗರ್ಭಿಣಿ ಪತ್ನಿಯ ಆಕ್ರಂದನ ಮುಗಿಲು ಮುಟ್ಟಿದೆ.
ಮುಸ್ತಾಕಿನ್ ಕೂಡಗಿ(28) ಮೃತ ದುರ್ದೈವಿ. ಇವರ ತಂದೆ ಗಾಂಧಿಚೌಕ್ ಪೊಲೀಸ್ ಠಾಣೆಯ ಕ್ರೈಂ ವಿಭಾಗದ ಪಿಎಸ್ಐ ರಿಯಾಜ್ ಅಹಮದ್. ಇವರ ಸಂಬಂಧಿಯೂ ಆಗಿರುವ ವಿಜಯಪುರ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ರೌಫ್ ಶೇಖ್ ಎಂಬವರ ಮಗಳು ಅತೀಕಾಳನ್ನು ಮುಸ್ತಕಿನ್ ಕೂಡಗಿ ಪ್ರೀತಿಸುತ್ತಿದ್ದ. ಇಬ್ಬರೂ ಎರಡೂವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದು ಯುವತಿಯ ತಂದೆ ಒಪ್ಪಿರಲಿಲ್ಲ. ವಿರೋಧದ ನಡುವೆಯೂ ಪ್ರೇಮಿಗಳಿಬ್ಬರೂ 6 ತಿಂಗಳ ಹಿಂದೆ ಮದ್ವೆಯಾಗಿದ್ದು ಮಹಾರಾಷ್ಟ್ರ ತೆರಳಿ ನೆಲೆಸಿದ್ದರು. ಬಳಿಕ ಗರ್ಭಿಣಿಯಾದ ಪತ್ನಿಯ ಜೊತೆ ಮುಸ್ತಕಿನ್, ಇತ್ತೀಚೆಗೆ ಊರಿಗೆ ಬಂದಿದ್ದು ತನ್ನ ಮನೆಯಲ್ಲೇ ವಾಸವಿದ್ದ.
ಆದರೆ ಮುಸ್ತಕಿನ್ ಊರಿಗೆ ಬಂದಿದ್ದನ್ನು ತಿಳಿದ ರೌಫ್ ಶೇಖ್ ಕಡೆಯವರು ಕೊಲೆಗೆ ಪ್ಲಾನ್ ಹಾಕಿದ್ದರು. ಮಂಗಳವಾರ ಮಧ್ಯಾಹ್ನ ವಿಜಯಪುರ ಹೊರವಲಯದ ರೇಡಿಯೋ ಕೇಂದ್ರದ ಬಳಿ ಸಾಗುತ್ತಿದ್ದ ಮುಸ್ತಕಿನ್ ಕೂಡಗಿ ಅವರನ್ನ ದುಷ್ಕರ್ಮಿಗಳು ಕೊಂದು ಮುಗಿಸಿದ್ದಾರೆ. ತನ್ನ ವಿರೋಧ ಮಧ್ಯೆಯೂ ಮಗಳನ್ನು ಮದುವೆಯಾಗಿದ್ದಕ್ಕೆ ಕೋಪಗೊಂಡಿದ್ದ ಮಾವನೇ ಅಳಿಯನನ್ನು ಕೊಂದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ನಿರ್ಮಾಣ ಹಂತದ ಮನೆ ಬಳಿಗೆ ಬೈಕ್ನಲ್ಲಿ ತೆರಳುತ್ತಿದ್ದ ಮುಸ್ತಕಿನ್ ಮೇಲೆ ಬೊಲೆರೋ ವಾಹನ ಡಿಕ್ಕಿಯಾಗಿಸಿದ್ದು ಬಳಿಕ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದಾರೆ. ಮುಸ್ತಕಿನ್ ಕೊಲೆಗೆ ಈ ಹಿಂದೆಯೂ ಹಲವು ಬಾರಿ ಯತ್ನ ನಡೆದಿತ್ತು ಎನ್ನಲಾಗಿದೆ. ಮದ್ವೆಯಾದ ಹೊಸತರಲ್ಲಿ ವಿಡಿಯೋ ಮಾಡಿದ್ದ ಅತೀಕಾ, ನನ್ನ ತಂದೆ ಹಾಗೂ ಸಹೋದರರಿಂದ ನನ್ನ ಪ್ರಿಯಕರ ಮುಸ್ತಕಿನ್ ಮತ್ತು ಅವರ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ನನಗೂ, ಮುಸ್ತಕಿನ್ ಮತ್ತು ನನ್ನ ಮಾವನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಅಳಲು ತೋಡಿಕೊಂಡಿದ್ದರು. ದಯವಿಟ್ಟು ನಮ್ಮನ್ನು ಬದುಕಲು ಬಿಡಿ ಎಂದು ಅಪ್ಪನನ್ನ ಮಗಳು ಅತೀಕಾ ಬೇಡಿಕೊಂಡಿದ್ದಳು. ಆದರೆ ಪ್ರೀತಿಸಿ ಮದುವೆ ಆಗಿದ್ದನ್ನು ಸಹಿಸದ ತಂದೆಯೇ ಮಗಳ ಬಾಳಿಗೆ ಕೊಳ್ಳಿ ಇಟ್ಟಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಗಾಂಧಿ ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರಂಭದಲ್ಲಿ ಇದೊಂದು ಅಪಘಾತ ಎಂದೇ ತಿಳಿಯಲಾಗಿತ್ತು. ಆದರೆ, ಕೂಲಂಕಷವಾಗಿ ತನಿಖೆ ನಡೆಸಲಾಗಿ ಇದೊಂದು ಪೂರ್ವಯೋಜಿತ ಕೃತ್ಯ ಎಂಬುದು ಕಂಡುಬಂದಿದೆ. ಆರೋಪಿಗಳ ಪತ್ತೆಗೆ ಪೊಲೀಸರ ತಂಡ ರಚಿಸಲಾಗಿದೆ.
Vijayapura Angry Father-in -law kills Son-in-law for marrying his daughter.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm