ಬ್ರೇಕಿಂಗ್ ನ್ಯೂಸ್
17-02-22 11:10 pm Bengaluru Correspondent ಕ್ರೈಂ
ಬೆಂಗಳೂರು, ಫೆ.17 : ಏಳು ವರ್ಷಗಳ ಹಿಂದೆ ಸಿನಿಮಾ ಮಾದರಿಯಲ್ಲಿ ವ್ಯಕ್ತಿಯೊಬ್ಬನ ಕೊಲೆಗೈದು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಆಂಧ್ರಪ್ರದೇಶದಲ್ಲಿ ಶವ ಬಿಸಾಕಿ ತಲೆಮರೆಸಿಕೊಂಡಿದ್ದ ದಂಪತಿಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಸೆರೆಹಿಡಿದ್ದಾರೆ.
ಏಳು ವರ್ಷಗಳ ಹಿಂದೆ ವಜೀರ್ ಪಾಷಾ ಎಂಬಾತನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಮೊಹಮ್ಮದ್ ಗೌಸ್ ಹಾಗೂ ಹೀನಾ ಕೌಸರ್ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. 2012ರಲ್ಲಿ ದಂಪತಿ ಮದುವೆಯಾಗಿದ್ದು ಆಂಧ್ರಪ್ರದೇಶದಿಂದ ಬಂದು ಬೆಂಗಳೂರಿನ ಹೆಗ್ಗನಹಳ್ಳಿಯಲ್ಲಿ ವಾಸವಾಗಿದ್ದರು. ಜೀವನಕ್ಕಾಗಿ ಗೌಸ್ ಟೈಲರಿಂಗ್ ಕೆಲಸ ಮಾಡುತ್ತಿದ್ದ.
ವ್ಯವಹಾರದಲ್ಲಿ ನಷ್ಟ ಉಂಟಾಗಿದ್ದರಿಂದ ಪರಿಚಯಸ್ಥರಿಂದ ಸಾಲ ಪಡೆದಿದ್ದ. ಆದರೆ, ಸಾಲ ತೀರಿಸಲಾಗದೇ ಸಂಕಷ್ಟಕ್ಕೆ ಒಳಗಾಗಿದ್ದರು. ಈ ವೇಳೆ ಹೀನಾ ಕೌಸರ್ ಸಂಬಂಧಿಕರಾಗಿದ್ದ ಮೃತ ವಜೀರ್ ಪಾಷಾ ಸಾಲ ತೀರಿಸಲು ಹಣಕಾಸಿನ ಸಹಾಯ ಮಾಡಿದ್ದ. ಇದಕ್ಕೆ ಪ್ರತಿಯಾಗಿ ಕೌಸರ್ ಜೊತೆಗೆ ಬಲವಂತವಾಗಿ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದ. ಇಬ್ಬರ ಸಂಬಂಧದ ವಿಷ್ಯ ತಿಳಿದ ಗಂಡ ಗೌಸ್, ಹೆಂಡತಿಗೆ ಬುದ್ದಿ ಹೇಳಿದ್ದ. ಇದಾದ ಬಳಿಕ ವಜೀರ್ ನೊಂದಿಗೆ ಕೌಸರ್ ಅಂತರ ಕಾಯ್ದುಕೊಂಡಿದ್ದಳು. ಇದರಿಂದ ಅಸಮಾಧಾನಗೊಂಡಿದ್ದ ವಜೀರ್ ಪಾಷಾ ತನ್ನ ಹಣ ನೀಡುವಂತೆ ವಜೀರ್ ಒತ್ತಾಯಿಸುತ್ತಿದ್ದ.
ವಜೀರ್ ಕಿರುಕುಳದ ಬಗ್ಗೆ ತಿಳಿದ ಮಹಮ್ಮದ್ ಗೌಸ್, ಆತನ ಹತ್ಯೆಗೆ ಪ್ಲ್ಯಾನ್ ಹಾಕಿದ್ದ. ಪಕ್ಕಾ ಪ್ಲ್ಯಾನ್ ಮಾಡಿಕೊಂಡ ಗೌಸ್, ಹೆಂಡತಿ ಮೂಲಕ ವಜೀರ್ನನ್ನ ಮನೆಗೆ ಕರೆಸಿಕೊಂಡು ಮಂಚದ ಕೆಳಗೆ ಅವಿತುಕೊಂಡಿದ್ದ. ಕೌಸರ್ ಜೊತೆ ವಜೀರ್ ಸರಸದಲ್ಲಿ ತೊಡಗಿದ್ದಾಗಲೇ ಮೊಹಮ್ಮದ್ ಗೌಸ್ ಪತ್ನಿಯ ಜೊತೆ ಸೇರಿ ಕೊರಳಿಗೆ ಸೀರೆ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ.

ಬಳಿಕ ಶವವನ್ನ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಕಟ್ಟಿದ್ದರು. ಅದೇ ದಿನ ಸಂಜೆ ವಜೀರ್ ತಂದಿದ್ದ ಬೈಕಿನಲ್ಲಿಯೇ ಶವ ಇರಿಸಿಕೊಂಡು ಯಲಹಂಕ - ಜಾಲಹಳ್ಳಿ ಮಾರ್ಗವಾಗಿ 500 ಕಿಮೀ ದೂರಕ್ಕೆ ಸಾಗಿ, ಆಂಧ್ರಪ್ರದೇಶದ ಹಿಂದೂಪುರ ರಸ್ತೆಯ ಕಾವೇಟಿನಾಗೇಪಲ್ಲಿಯ ಮೋರಿ ಬಳಿ ಎಸೆದಿದ್ದರು. ಕೆಲ ದಿನಗಳ ಬಳಿಕ ಅನಂತಪುರದ ಸೋಮೆಂದುಪಲ್ಲಿ ಪೊಲೀಸರಿಗೆ ಶವ ಪತ್ತೆಯಾಗಿದ್ದು, ಯುಡಿಆರ್ ಪ್ರಕರಣ ದಾಖಲಿಸಿಕೊಂಡಿದ್ದಲ್ಲದೆ ವ್ಯಕ್ತಿಯ ಗುರುತು ಸಿಗದೆ ಪತ್ತೆಯಾಗದ ಪ್ರಕರಣವೆಂದು ಕೋರ್ಟ್ಗೆ ವರದಿ ಸಲ್ಲಿಸಿದ್ದರು.
ಏಳು ವರ್ಷಗಳ ಬಳಿಕ ರಾಜಧಾನಿಗೆ ಆಗಮಿಸಿದ್ದ ದಂಪತಿ ಲಾಕ್ !
ಕೃತ್ಯವೆಸಗಿ ಏಳು ವರ್ಷಗಳ ಕಾಲ ಆಂಧ್ರದಲ್ಲೇ ದಂಪತಿ ವಾಸವಾಗಿದ್ದರು. ಇತ್ತೀಚೆಗೆ ಹೀನಾ ಕೌಸರ್ ತಾತ ಬೆಂಗಳೂರಿನಲ್ಲಿ ಮೃತಪಟ್ಟಿದ್ದರಿಂದ ಅಂತಿಮ ದರ್ಶನಕ್ಕಾಗಿ ನಗರಕ್ಕೆ ಆಗಮಿಸಿದ್ದರು. ಮೃತ ವಜೀರ್ ಪತ್ನಿ ಆಯೇಷಾಗೆ ಕೊಲೆಗಡುಕ ದಂಪತಿ ಬಗ್ಗೆ ಸಂಶಯ ಇದ್ದುದರಿಂದ ಕಾಮಾಕ್ಷಿಪಾಳ್ಯ ಪೊಲೀಸರಿಗೆ ದೂರು ನೀಡಿದ್ದರು. ಕೂಡಲೇ ಕಾರ್ಯ ಪ್ರವೃತ್ತರಾದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಪೊಲೀಸರು ದಂಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾರೆ.
Bangalore Couple arrested for murder that was committed seven years ago. The couple was said to be absorbing.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
12-01-26 01:31 pm
Bengaluru Staffer
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm