ಬ್ರೇಕಿಂಗ್ ನ್ಯೂಸ್
18-02-22 01:02 pm HK Desk news ಕ್ರೈಂ
ನವದೆಹಲಿ, ಫೆ.18 : ಅಹ್ಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾಗಿರುವ ಯಾಸಿನ್ ಭಟ್ಕಳ್ ಸೇರಿ 38 ಮಂದಿ ಅಪರಾಧಿಗಳಿಗೆ ಗುಜರಾತ್ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ದೇಶದಲ್ಲಿ ಒಂದು ಪ್ರಕರಣಕ್ಕೆ ಸಂಬಂಧಿಸಿ ಅತಿ ಹೆಚ್ಚು ಮಂದಿಗೆ ಗಲ್ಲು ಶಿಕ್ಷೆ ವಿಧಿಸಿದ್ದು ಇದೇ ಮೊದಲಾಗಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.
ಕಳೆದ ಫೆ.8ರಂದು ಗುಜರಾತ್ ವಿಶೇಷ ನ್ಯಾಯಾಲಯ ಪ್ರಕರಣದ ಒಟ್ಟು 78 ಮಂದಿ ಆರೋಪಿಗಳಲ್ಲಿ 49 ಮಂದಿಯನ್ನು ಅಪರಾಧಿಗಳೆಂದು ಘೋಷಣೆ ಮಾಡಿತ್ತು. ಶಿಕ್ಷೆಯ ಪ್ರಮಾಣವನ್ನು ಇಂದು ಘೋಷಣೆ ಮಾಡಲಾಗಿದೆ. 38 ಮಂದಿಗೆ ಗಲ್ಲು ಶಿಕ್ಷೆ ವಿಧಿಸಿದರೆ, 11 ಮಂದಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಪ್ರಕರಣದಲ್ಲಿ 29 ಮಂದಿಯನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ. ಎಲ್ಲ 78 ಆರೋಪಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿತ್ತು.
2008ರ ಜುಲೈ 26ರಂದು ಕೇವಲ 70 ನಿಮಿಷಗಳ ಅಂತರದಲ್ಲಿ ಗುಜರಾತಿನ ಅಹ್ಮದಾಬಾದ್ ನಗರದ 21 ಕಡೆ ಬಾಂಬ್ ಸ್ಫೋಟ ಆಗಿತ್ತು. ನೋಡ ನೋಡುತ್ತಲೇ ಅಲ್ಲಲ್ಲಿ ಬಾಂಬ್ ಬ್ಲಾಸ್ಟ್ ಆಗಿದ್ದು ಘಟನೆಯಲ್ಲಿ 56 ಮಂದಿ ಮೃತಪಟ್ಟಿದ್ದರು. 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಆನಂತರ ಸುದೀರ್ಘ ಕಾಲ ಪೊಲೀಸ್ ತನಿಖೆ ನಡೆದು 80ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿತ್ತು. ಅಹ್ಮದಾಬಾದ್ ನಗರದಲ್ಲಿ 20 ಎಫ್ಐಆರ್ ದಾಖಲಾಗಿದ್ದರೆ, ಇದೇ ವೇಳೆ, ತನಿಖೆಯ ಸಂದರ್ಭ ಸೂರತ್ ನಗರದಲ್ಲೂ ಸಜೀವ ಬಾಂಬ್ ಪತ್ತೆಯಾಗಿ ಅಲ್ಲಿಯೂ 15 ಎಫ್ಐಆರ್ ದಾಖಲಾಗಿತ್ತು. ಸೂರತ್ ನಗರದ ಆಸುಪಾಸಿನಲ್ಲಿ 29 ಕಡೆ ಬಾಂಬ್ ಇರಿಸಲಾಗಿತ್ತು. ಆದರೆ ಅಲ್ಲಿ ಡಿಟೋನೇಟರ್ ಮತ್ತು ಅದರ ಸಂಪರ್ಕದಲ್ಲಿ ಆಗಿದ್ದ ಸಮಸ್ಯೆಯಿಂದಾಗಿ ಸ್ಫೋಟ ಆಗಿರಲಿಲ್ಲ. ಜುಲೈ 28ರಿಂದ 31ರ ಮಧ್ಯೆ ಎರಡು ದಿನಗಳಲ್ಲಿ ಸೂರತ್ ನಗರದ ಆಸುಪಾಸಿನ 29 ಕಡೆ ಇರಿಸಿದ್ದ ಸಜೀವ ಬಾಂಬ್ ಪತ್ತೆಯಾಗಿತ್ತು.
ಗೋಧ್ರಾ ಹತ್ಯಾಕಾಂಡ ಘಟನೆಗೆ ಪ್ರತೀಕಾರ
2002ರ ಗೋಧ್ರಾ ಹತ್ಯಾಕಾಂಡದ ಪ್ರತೀಕಾರದ ರೂಪದಲ್ಲಿ ಇಂಡಿಯನ್ ಮುಜಾಹಿದೀನ್ ಮತ್ತು ಸಿಮಿ ಉಗ್ರರು ಈ ಸಂಚನ್ನು ಹೆಣೆದಿದ್ದರು. ಜುಲೈ 26ರಂದು ಬಾಂಬ್ ಬ್ಲಾಸ್ಟ್ ಆಗುವುದಕ್ಕೂ ಕೆಲವೇ ಕ್ಷಣಗಳ ಹಿಂದೆ ಇಂಡಿಯನ್ ಮುಜಾಹಿದೀನ್ ಸಂಘಟನೆ ಬಾಂಬ್ ಸ್ಫೋಟದ ಬಗ್ಗೆ ಸುಳಿವು ನೀಡಿತ್ತು. ವಿವಿಧ ಮಾಧ್ಯಮ ಕೇಂದ್ರಗಳು, ಸುದ್ದಿ ವಾಹಿನಿಗಳ ಕಚೇರಿಗೆ ಇ-ಮೇಲ್ ಸಂದೇಶ ರವಾನಿಸಲಾಗಿತ್ತು. ಆದರೆ ಅದನ್ನು ನೋಡುವುದಕ್ಕೂ ಮುನ್ನ ಅಹ್ಮದಾಬಾದ್ ನಗರದಲ್ಲಿ ಸರಣಿಯಾಗಿ ಬಾಂಬ್ ಬ್ಲಾಸ್ಟ್ ಆಗಿತ್ತು.
ಜೈಪುರ್, ಸೂರತ್ ನಲ್ಲೂ ಸ್ಫೋಟಕ್ಕೆ ಸಂಚು
ಬಾಂಬ್ ಬ್ಲಾಸ್ಟ್ ಪ್ರಕರಣದ ಬಗ್ಗೆ ತನಿಖೆ ನಡೆಸಲು ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸರಕಾರ, ಡಿಜಿಪಿ ಆಶಿಷ್ ಭಾಟಿಯಾ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಕೇವಲ 19 ದಿನಗಳಲ್ಲಿ 30 ಮಂದಿ ಇಂಡಿಯನ್ ಮುಜಾಹಿದೀನ್ ಉಗ್ರರನ್ನು ಪೊಲೀಸರು ಸೆರೆಹಿಡಿದಿದ್ದರು. ಆನಂತರ ದೇಶದ ವಿವಿಧೆಡೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು. ಅಹ್ಮದಾಬಾದ್ ಸರಣಿ ಬ್ಲಾಸ್ಟ್ ಸಂದರ್ಭದಲ್ಲಿಯೇ ಸೂರತ್, ವಾರಣಾಸಿ, ಜೈಪುರ್ ನಗರದಲ್ಲಿಯೂ ಸರಣಿ ಬ್ಲಾಸ್ಟ್ ನಡೆಸಲು ಯೋಜನೆ ಹಾಕಲಾಗಿತ್ತು. ಸೂರತ್ ನಲ್ಲಿ ಟೈಮರ್ ಅಳವಡಿಸಿದ್ದರಲ್ಲಿ ಆಗಿದ್ದ ಲೋಪದಿಂದಾಗಿ ಬ್ಲಾಸ್ಟ್ ಆಗಿರಲಿಲ್ಲ. ಉಳಿದ ಕಡೆಯೂ ಬಾಂಬ್ ಇರಿಸುವ ಸಂಚು ನಡೆದಿತ್ತಾದರೂ, ಅದನ್ನು ಪೊಲೀಸರು ವಿಫಲಗೊಳಿಸಿದ್ದರು.
ಆಬಳಿಕ ಒಟ್ಟು 35 ಎಫ್ಆರ್ ಗಳನ್ನು ಜೊತೆಯಾಗಿಸಿ 78 ಆರೋಪಿಗಳ ವಿರುದ್ಧ ಒಂದೇ ವರ್ಷದಲ್ಲಿ ಚಾರ್ಜ್ ಶೀಟ್ ಹಾಕಲಾಗಿತ್ತು. ಅಹ್ಮದಾಬಾದ್ ನಗರದ ವಿಶೇಷ ಕೋರ್ಟಿನಲ್ಲಿ 2009ರಿಂದ 2022ರ ವರೆಗೂ ಸುದೀರ್ಘ ವಿಚಾರಣೆ ನಡೆದಿದ್ದು, 1100 ಸಾಕ್ಷ್ಯಗಳನ್ನು ಕೋರ್ಟಿನಲ್ಲಿ ಪರಿಗಣಿಸಲಾಗಿದೆ. ಸರಕಾರದ ಪರವಾಗಿ ನಾಲ್ವರು ಸರಕಾರಿ ವಕೀಲರು ವಾದ ಮಂಡಿಸಿದ್ದರು. ಸರಣಿ ಬ್ಲಾಸ್ಟ್ ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾಗಿರುವ ಯಾಸಿನ್ ಭಟ್ಕಳ್ ದೆಹಲಿ ಜೈಲಿನಲ್ಲಿದ್ದಾನೆ. ಇನ್ನೊಬ್ಬ ಪ್ರಮುಖ ಆರೋಪಿ ಅಬ್ದುಲ್ ಸುಭಾನ್ ಅಲಿಯಾಸ್ ತೌಕೀರ್ ನನ್ನು ಕೊಚ್ಚಿನ್ ಜೈಲಿನಲ್ಲಿ ಇರಿಸಲಾಗಿದೆ. ಪ್ರಕರಣದಲ್ಲಿ ಇನ್ನೂ ಎಂಟು ಮಂದಿ ಆರೋಪಿಗಳ ಪತ್ತೆ ಆಗಿಲ್ಲ. ಅವರ ಪತ್ತೆಗೆ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎಂದು ತನಿಖಾ ತಂಡ ಹೇಳಿತ್ತು.
ಯಾಸಿನ್ ಭಟ್ಕಳ್, ರಿಯಾಜ್ ಭಟ್ಕಳ್, ಇಕ್ಬಾಲ್ ಭಟ್ಕಳ್ ಸೋದರರು ಈ ಸರಣಿ ಬ್ಲಾಸ್ಟ್ ಪ್ರಕರಣದ ಸೂತ್ರಧಾರಿಗಳಾಗಿದ್ದರು. ಆನಂತರ ಯಾಸಿನ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದರೆ, ರಿಯಾಜ್ ಮತ್ತು ಇಕ್ಬಾಲ್ ಪಾಕಿಸ್ಥಾನಕ್ಕೆ ಪಲಾಯನಗೈದಿದ್ದರು.
A special court in Gujarat on Friday pronounced the death sentence to 38 out of 49 convicts in the 2008 Ahmedabad serial bomb blast case. 11 others have been sentenced to life imprisonment by the court. Earlier on February 8, a Gujarat court convicted 49 accused and acquitted 28 others in the 2008 Ahmedabad serial bomb blast case. Within a span of 70 minutes as many as 21 bomb blasts had taken place in Ahmedabad on July 26, 2008.
09-01-25 07:04 pm
HK News Desk
S T Somashekar, Yatnal, DK Shivakumar temple:...
09-01-25 04:54 pm
Hassan, Lokayukta Arrest: ಹಾಸನಾಂಬ ಜಾತ್ರಾ ಮಹೋತ...
09-01-25 04:21 pm
Six Naxals Surrender, CM Siddaramaiah: ಕಾಡಿನ...
08-01-25 09:26 pm
ಬೆಂಗಳೂರು, ಬೆಳಗಾವಿ, ಚಿಕ್ಕಮಗಳೂರು ಸೇರಿ ರಾಜ್ಯದಾದ್...
08-01-25 03:39 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
09-01-25 07:50 pm
Mangalore Correspondent
ಜನವರಿ 11-12 ; 'ಮಂಗಳೂರು ಲಿಟ್ ಫೆಸ್ಟ್' ಏಳನೇ ಆವೃತ...
08-01-25 09:51 pm
Surathkal Beach, Drowning, Mangalore; ಸುರತ್ಕಲ...
08-01-25 06:13 pm
Naxal, Vikram Gowda, Surrender: ಶರಣಾಗುವವರಿಗೆ...
08-01-25 11:53 am
MCC Bank Anil Lobo, Bail Reject, Mangalore; ಎ...
07-01-25 11:13 pm
10-01-25 10:11 am
Mangalore Correspondent
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm
Old Coin Scam, Mangalore Fraud: ಎಲ್ಲ ಆಯ್ತು.....
09-01-25 01:26 pm
Vamanjoor Misfire, Mangalore Crime, Police; ಪ...
09-01-25 11:27 am