ಅಣ್ಣನ ಜೊತೆಗೇ ತಂಗಿಯ ಲವ್ವಿಡವ್ವಿ ; ಕಾಮದಾಟಕ್ಕೆ ಅಡ್ಡಿಯಾದ ತಾಯಿಯನ್ನೇ ಮುಗಿಸಿಬಿಟ್ಟ ಮಗಳು ! ದಾಹಕ್ಕೆ ಬಿದ್ದು ಜೈಲು ಸೇರಿದ ಅಣ್ಣ- ತಂಗಿ ! 

18-02-22 03:02 pm       HK Desk news   ಕ್ರೈಂ

ಪ್ರೀತಿ ನೆಪದಲ್ಲಿ ಅಣ್ಣನ ಜೊತೆಗೇ ಸರಸವಾಡುತ್ತಿದ್ದ 21 ವರ್ಷದ ಹುಡುಗಿಯೊಬ್ಬಳು, ತನ್ನ ಕಾಮದಾಟಕ್ಕೆ ಅಡ್ಡಿಯಾದ ತಾಯಿಯನ್ನೇ ನೀರಿನ ಸಂಪ್‌ಗೆ ದೂಡಿ ಹಾಕಿ ಕೊಲೆಗೈದ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ನಡೆದಿದ್ದು ಪೊಲೀಸರು ಅಣ್ಣ- ತಂಗಿಯನ್ನು ಜೈಲಿಗೆ ತಳ್ಳಿದ್ದಾರೆ.

ತುಮಕೂರು, ಫೆ.18 : ಪ್ರೀತಿ ನೆಪದಲ್ಲಿ ಅಣ್ಣನ ಜೊತೆಗೇ ಸರಸವಾಡುತ್ತಿದ್ದ 21 ವರ್ಷದ ಹುಡುಗಿಯೊಬ್ಬಳು, ತನ್ನ ಕಾಮದಾಟಕ್ಕೆ ಅಡ್ಡಿಯಾದ ತಾಯಿಯನ್ನೇ ನೀರಿನ ಸಂಪ್‌ಗೆ ದೂಡಿ ಹಾಕಿ ಕೊಲೆಗೈದ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ನಡೆದಿದ್ದು ಪೊಲೀಸರು ಅಣ್ಣ- ತಂಗಿಯನ್ನು ಜೈಲಿಗೆ ತಳ್ಳಿದ್ದಾರೆ.

ಪುನೀತ್ (26) ಮತ್ತು ಶೈಲಜಾ (21) ಬಂಧಿತ ಅಣ್ಣ-ತಂಗಿ.‌ ಇವರು ಇಬ್ಬರೂ ಚಿಕ್ಕಮ್ಮ ಮತ್ತು ದೊಡ್ಡಮ್ಮನ ಮಕ್ಕಳಾಗಿದ್ದು ಸಂಬಂಧದಲ್ಲಿ ಶೈಲಜಾಗೆ ಪುನೀತ್ ಅಣ್ಣನಾಗಿದ್ದ. ಹೊರ ಜಗತ್ತಿಗೆ ಇಬ್ಬರೂ ಅಣ್ಣ ತಂಗಿಯಂತೆ ವರ್ತನೆ ಮಾಡ್ತಿದ್ದರು. ಆದರೆ ಮನೆಯೊಳಗೆ ಇಬ್ಬರೂ ಲವ್ವಿಡವ್ವಿಯಲ್ಲಿ ತೊಡಗುತ್ತಿದ್ದರು. ಒಂದು ಬಾರಿ ರೆಡ್‌ ಹ್ಯಾಂಡ್‌ ಆಗಿ ತಾಯಿ ಸಾವಿತ್ರಮ್ಮನ ಕೈಗೆ ಸಿಕ್ಕಿ ಬಿದ್ದಿದ್ದು ಬುದ್ದಿ ಹೇಳಿ ಇಬ್ಬರನ್ನೂ ದೂರ ಮಾಡಿದ್ದರು. 

ನಂತರ ಮೆಸೇಜ್ ಅಥವಾ ಕರೆ ಮಾಡದಂತೆ ಇಬ್ಬರಿಗೂ ಎಚ್ಚರಿಕೆ ಕೊಟ್ಟಿದ್ದರು. ಆದರೆ ಇವರ ಕಾಮದಾಟಕ್ಕೆ ಬ್ರೇಕ್‌ ಬಿದ್ದಿರಲಿಲ್ಲ. ಇದೇ ವೇಳೆ ತಾಯಿಯನ್ನು ಮಗಳು ಹಾಗೂ ಪುನೀತ್ ಸೇರಿ ಕತ್ತು ಹಿಸುಕಿ ಕೊಲೆಗೈದು ಸಂಪ್‌ಗೆ ಹಾಕಿದ್ದಾರೆ.

ಬಳಿಕ, ಸಾವಿತ್ರಮ್ಮ ಕಾಲು ಜಾರಿ ಸಂಪ್ ಗೆ ಬಿದ್ದು ಸಾವನ್ನಪ್ಪಿರುವುದಾಗಿ ಶೈಲಜಾ ಹಾಗೂ ಪುನೀತ್ ಬಿಂಬಿಸಿದ್ದರು.  ಆದರೆ ಸಂಬಂಧಿಕರು, ಸ್ಥಳೀಯರು ನೀಡಿದ ಮಾಹಿತಿಯಂತೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ.

Tumkuru Brother and sister have sex with each other, kill own mother for warning. The 21-year-old daughter joined hands with her brother to kill their own mother.