ಬ್ರೇಕಿಂಗ್ ನ್ಯೂಸ್
20-02-22 12:40 pm HK Desk news ಕ್ರೈಂ
ಮುಂಬೈ, ಫೆ.20 : ಮುಂಬೈನಲ್ಲಿ ಪ್ರಸಿದ್ಧಿ ಪಡೆದಿರುವ, ಗ್ರೋಸರಿ ಸಾಮಾನುಗಳ ಚೈನ್ ಲಿಂಕ್ ಬಿಸಿನೆಸ್ ಕಂಪನಿ ನೂತನ್ ದಾಲ್ ಮಿಲ್ ಹೆಸರಲ್ಲಿ ಹೂಡಿಕೆ ಮಾಡುವ ನೆಪದಲ್ಲಿ ನೂರಾರು ಮಂದಿಯಿಂದ ಹೂಡಿಕೆ ಮಾಡಿಸಿ 40 ಕೋಟಿಗೂ ಹೆಚ್ಚು ಹಣ ಮೋಸ ಮಾಡಿರುವ ಆರೋಪದಲ್ಲಿ ಕಂಪನಿ ಮಾಲೀಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
34 ವರ್ಷದ ಮಹಿಳೆ ಅನಿತಾ ರೂಪ್ ಸಿಂಗ್ ಕಡೇಚಾ, ತನಗೆ 15 ಪರ್ಸೆಂಟ್ ಕಮಿಷನ್ ನೀಡುವುದಾಗಿ ಹೇಳಿ 41.5 ಲಕ್ಷ ಹೂಡಿಕೆ ಮಾಡಿಸಿ, ವಂಚನೆ ಎಸಗಿದ್ದಾಗಿ ಗೋರೆಗಾಂವ್ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ವೇಳೆ ಇದೇ ಮಾದರಿಯಲ್ಲಿ ಹಲವಾರು ಮಂದಿಗೆ ಮೋಸ ಎಸಗಿರುವುದು ಪತ್ತೆಯಾಗಿದೆ. ಅನಿತಾಗೆ ತನ್ನ ಗೆಳೆಯನ ಮೂಲಕ ಆರೋಪಿ ಕೇತನ್ ರಂಭಿಯಾ ಪರಿಚಯ ಆಗಿತ್ತು. ಗೆಳೆಯನೂ ಇದೇ ಮಾದರಿಯಲ್ಲಿ ಹಣ ಹೂಡಿಕೆ ಮಾಡಿದ್ದ. 2019ರ ಜೂನ್ ತಿಂಗಳಿಂದ 2020 ಡಿಸೆಂಬರ್ ನಡುವೆ 41.5 ಲಕ್ಷ ರೂ. ಹಣವನ್ನು ಅನಿತಾ ಹೂಡಿಕೆ ಮಾಡಿದ್ದರು. ಹಣ ಕೇಳಿದಾಗ, ಒಂದು ವರ್ಷ ನನ್ನಲ್ಲಿ ಇರಲಿ, ಮುಂದೆ 16 ಶೇಕಡಾ ಬಡ್ಡಿ ಸಹಿತ ನೀಡುವುದಾಗಿ ನಂಬಿಸಿದ್ದ. ಆನಂತರವೂ ಹಣ ಕೊಡದೇ ಇದ್ದಾಗ ತನಗೆ ಕೊಟ್ಟಿದ್ದ ಸ್ಟಾಂಪ್ ಪೇಪರ್ ಬಗ್ಗೆ ಚೆಕ್ ಮಾಡಿದ್ದಾರೆ. ಅದರಲ್ಲಿ ಸೀರಿಯಲ್ ನಂಬರ್ ಸೇಮ್ ಇರುವುದು ಕಂಡುಬಂದಿದ್ದು ಲಾಯರ್ ಮೂಲಕ ಪೊಲೀಸರಿಗೆ ದೂರು ನೀಡಿದ್ದರು.

ಹಲವಾರು ವರ್ಷಗಳಿಂದ ಗ್ರಾಹಕರಾಗಿರುವ ಮಂದಿಯನ್ನು ನಂಬಿಸಿ ಮೋಸ ಮಾಡಿದ್ದಾರೆ. ವರ್ಷಕ್ಕೆ 15 ರಿಂದ 16 ಪರ್ಸೆಂಟ್ ಲಾಭಾಂಶ ನೀಡುವುದಾಗಿ ಹೇಳಿ ಹಣ ಪಡೆದಿದ್ದರು. ಹಣ ಪಡೆಯುವಾಗ ನೂರು ರುಪಾಯಿ ಸ್ಟಾಂಪ್ ಪೇಪರಿನಲ್ಲಿ ಅಗ್ರಿಮೆಂಟ್ ಮಾಡಿಸುತ್ತಿದ್ದರು. ನೂರಕ್ಕೂ ಹೆಚ್ಚು ಮಂದಿಯನ್ನು ವಂಚಿಸಿದ್ದು 40 ಕೋಟಿಯಷ್ಟು ವಂಚನೆ ಮಾಡಿದ್ದಾರೆ ಎಂದು ಅನಿತಾ ಕಡೇಚಾ ಹೇಳಿದ್ದಾರೆ. ದೂರು ಆಧರಿಸಿ ಪೊಲೀಸರು ಆರೋಪಿ ರಂಭಿಯಾನನ್ನು ಬಂಧಿಸಿದ್ದಾರೆ.
The owner of Nutan Dal Mill, a chain of grocery stores and one of the leading businesses in the sector in Mumbai, has been arrested by Goregaon police for allegedly cheating a 34-year-old woman to the tune of Rs 41.5 lakh by promising her 15 per cent returns. Police said he duped a number of his customers using this modus operandi.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 12:50 pm
HK News Staffer
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
15-09-26 12:55 pm
HK News Staffer
ಗಣೇಶ ಹಬ್ಬದ ಮುಗಿಸಿ ಬೆಂಗಳೂರಿಗೆ ತೆರಳುತ್ತಿದ್ದ ವೇಳ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm