ಬ್ರೇಕಿಂಗ್ ನ್ಯೂಸ್
20-02-22 01:11 pm Bengaluru Correspondent ಕ್ರೈಂ
ಬೆಂಗಳೂರು, ಫೆ.20 : ಕಾಂಗ್ರೆಸ್ ಮುಖಂಡ, ಶಾಸಕ ಪ್ರಿಯಾಂಕ ಖರ್ಗೆ ಪತ್ನಿ ಶ್ರುತಿ ಖರ್ಗೆ ಅವರ ಮೊಬೈಲ್ ಸುಲಿಗೆ ಮಾಡಿದ ಪ್ರಕರಣದಲ್ಲಿ ಸದಾಶಿವ ನಗರ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ.
ಮೋಯಿನ್ @ ಕಾಜಾ ಮೋಯಿನ್, ತೋಹಿದ್, ಜಬೀ ಅಲಿಯಾಸ್ ಕಾಲಾ ಹಾಗೂ ಇಲಿಯಾಸ್ ಬಂಧಿತ ಆರೋಪಿಗಳು. ಪೊಲೀಸರ ವಿಚಾರಣೆ ವೇಳೆ ಆರೋಪಿಗಳ ಸಾಲು ಸಾಲು ಸುಲಿಗೆ ಕಹಾನಿಯೂ ಬಯಲಿಗೆ ಬಂದಿದೆ. ಆರೋಪಿಗಳು 180ಕ್ಕೂ ಹೆಚ್ಚು ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಅನ್ನುವ ಮಾಹಿತಿ ಸಿಕ್ಕಿದೆ.
ವ್ಯವಸ್ಥಿತವಾಗಿ ಸುಲಿಗೆ ಮಾಡುತ್ತಿದ್ದ ಆರೋಪಿಗಳು ದಿನದಲ್ಲಿ ಬೆಳಗ್ಗೆ ಮತ್ತು ಸಂಜೆ ಮಾತ್ರ ತಮ್ಮ ಕೃತ್ಯಕ್ಕೆ ಸಮಯ ಮಾಡಿಕೊಂಡಿದ್ದರು. ಬೆಳಿಗ್ಗೆ 5 ರಿಂದ 8 ಮತ್ತು ರಾತ್ರಿ 8 ರಿಂದ 10ರ ವರೆಗೆ ಮಾತ್ರ ಸುಲಿಗೆ ಮಾಡುತ್ತಿದ್ದರು. ಅದರಲ್ಲೂ ಶನಿವಾರ- ಭಾನುವಾರವೇ ಈ ಗ್ಯಾಂಗ್ ಫುಲ್ ಆಕ್ಟಿವ್ ಆಗುತ್ತಿತ್ತು. ಬೈಕ್ ಕಳ್ಳತನ ಮಾಡಿ ಅದನ್ನೇ ಬಳಸಿಕೊಂಡು ತಮ್ಮ ಕೃತ್ಯ ನಡೆಸುತ್ತಿದ್ದರು.

ಇದೇ ತಂಡ ರಾಜ್ಯದ ಹಲವೆಡೆಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೃತ್ಯವೆಸಗಿದ್ದು ಬೆಂಗಳೂರಿನ ಹೈಗ್ರೌಂಡ್, ಕಮರ್ಷಿಯಲ್ ಸ್ಟ್ರೀಟ್, ಶಿವಾಜಿನಗರ, ಸರ್ಜಾಪುರ, ಮಂಡ್ಯ, ಹೊಸಕೋಟೆ, ನೆಲಮಂಗಲ ಸೇರಿ ಹಲವು ಠಾಣೆಗಳಲ್ಲಿ ವಾಂಟೆಡ್ ಲಿಸ್ಟ್ ನಲ್ಲಿದ್ದಾರೆ. ಹಲವು ಠಾಣೆಗಳಲ್ಲಿ ಇವರ ವಿರುದ್ಧ ಸುಲಿಗೆ ಪ್ರಕರಣ ದಾಖಲಾಗಿದೆ. ಎಚ್.ಎಸ್ ಆರ್ ಲೇಔಟ್ ನಲ್ಲಿ ಹಣ ಕೊಡದ ಕಾರಣಕ್ಕೆ ಕ್ಯಾಬ್ ಚಾಲಕನಿಗೆ ಚಾಕು ಇರಿದಿದ್ದರು ಅನ್ನುವ ಮಾಹಿತಿಯೂ ಲಭಿಸಿದೆ. ಸದ್ಯ ಸದಾಶಿವನಗರ ಪೊಲೀಸರಿಂದ ಆರೋಪಿಗಳ ಬಂಧನವಾಗಿದೆ. ಇತ್ತೀಚೆಗೆ ಶ್ರುತಿ ಖರ್ಗೆ ಮೊಬೈಲ್ ದೋಚಿದ ಬಗ್ಗೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.
Four accused have been arrested in connection with the mobile extortion case of Shruti Kharge(Shruthi Kharge), wife of MLA Priyank Kharge (Priyank Kharge). Sadashivanagar police, who managed to nab Khatarnak Khadimar, exposed a line of extortion and extortion of the accused during interrogation
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
12-01-26 01:31 pm
Bengaluru Staffer
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm