ಬ್ರೇಕಿಂಗ್ ನ್ಯೂಸ್
21-02-22 09:49 am Shivamogga Reporter ಕ್ರೈಂ
ಶಿವಮೊಗ್ಗ, ಫೆ.21: ಹಿಜಾಬ್ ಬೆಂಕಿಯಿಂದ ಉರಿಯುತ್ತಿದ್ದ ಶಿವಮೊಗ್ಗ ನಗರದಲ್ಲಿ ಹಿಂದು ಸಂಘಟನೆಯ ಕಾರ್ಯಕರ್ತನ ಕೊಲೆಯಾಗಿದ್ದು ಮತ್ತೆ ಉದ್ವಿಗ್ನ ಸ್ಥಿತಿಗೆ ತಲುಪಿದೆ. ಭಾನುವಾರ ರಾತ್ರಿ ಏಕಾಏಕಿ ಕಾರಿನಲ್ಲಿ ಬಂದಿದ್ದ ತಂಡ ಯುವಕನನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದೆ.
ಹಿಂದು ಸಂಘಟನೆ ಕಾರ್ಯಕರ್ತ ಹರ್ಷ (28) ಕೊಲೆಯಾದವರು. ಹತ್ಯೆಯಾದ ಬೆನ್ನಲ್ಲೇ ಶಿವಮೊಗ್ಗ ನಗರ ಉದ್ವಿಗ್ನ ಆಗಿದ್ದು ಕ್ಲರ್ಕ್ ಪೇಟೆ, ಎಂಕೆಕೆ ರಸ್ತೆ , ಸೀಗೆಹಟ್ಟಿ , ಇಮಾಮ್ ಬಡಾವಣೆಗಳಲ್ಲಿ ರಾತ್ರಿ ಕಲ್ಲು ತೂರಾಟ ಆಗಿದೆ. ಆಕ್ರೋಶಿತ ಪುಂಡರು ಪ್ರತಿಭಟನೆ ನೆಪದಲ್ಲಿ ಬೈಕ್ ಇನ್ನಿತರ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.



ಕೂಡಲೇ ಪೊಲೀಸರು ಲಾಠಿ ಬೀಸಿದ್ದು , ಜನರನ್ನು ಚದುರಿಸಲು ಯತ್ನಿಸಿದ್ದಾರೆ. ಕಲ್ಲು ತೂರಾಟ ಆಗುತ್ತಲೇ ಜನರು ಮನೆಯಿಂದ ಹೊರಬಂದು ಉದ್ವಿಗ್ನ ಸ್ಥಿತಿಗೆ ಮತ್ತಷ್ಟು ತುಪ್ಪ ಸುರಿದಂತಾಗಿತ್ತು. ಪೊಲೀಸರು ಬಳಿಕ ಅವರನ್ನು ಮನೆಯ ಒಳಗೆ ಕಳಿಸಲು ಹರಸಾಹಸ ಪಟ್ಟಿದ್ದಾರೆ. ಮಕ್ಕಳು, ಮಹಿಳೆಯರು ಹೊರಬಂದು ಪೊಲೀಸರ ರಕ್ಷಣೆ ಕೋರಿದ್ದಾರೆ. ಪೊಲೀಸರು ಆಕ್ರೋಶಿತರನ್ನು ವಶಕ್ಕೆ ಪಡೆದು ಪರಿಸ್ಥಿತಿ ಸಹಜ ಸ್ಥಿತಿಗೆ ತಂದಿದ್ದಾರೆ. ಹಿಂದು ಸಂಘಟನೆ ಮುಖಂಡರು ಪೊಲೀಸರ ವಿರುದ್ಧ ತೀವ್ರ ಆಕ್ರೋಶಗೊಂಡಿದ್ದಾರೆ.
ಈ ಬಗ್ಗೆ ಗೃಹ ಸಚಿವ ಆರಗ ಜ್ನಾನೇಂದ್ರ ಪ್ರತಿಕ್ರಿಯೆ ನೀಡಿದ್ದು ಮೃತನ ಮನೆಯವರಿಗೆ ಸಾಂತ್ವನ ನೀಡಲಾಗಿದೆ. ಆರೋಪಿಗಳ ಸುಳಿವು ಪತ್ತೆಯಾಗಿದೆ. ತನಿಖೆ ಹಂತದಲ್ಲಿರುವಾಗ ಬಹಿರಂಗ ಪಡಿಸಲು ಸಾಧ್ಯವಿಲ್ಲ. ಶೀಘ್ರದಲ್ಲೇ ಆರೋಪಿಗಳ ಹೆಡೆಮುರಿ ಕಟ್ಟುತ್ತೇವೆ. ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಬಂದೋಬಸ್ತ್ ಮಾಡಲಾಗಿದೆ. ನಗರ ಭಾಗದಲ್ಲಿ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೊಷಿಸಲಾಗಿದೆ ಎಂದು ತಿಳಿಸಿದ್ದಾರೆ.
Section 144 was imposed in the Shivamogga district of Karnataka after a 23-year-old Bajrang Dal activist was murdered on Sunday night. He was taken to the Mc Gann district hospital where he passed away. Karnataka Home Minister Araga Jnanendra said that the matter was not related to the ongoing hijab row in the state. “But we need to wait for further investigations before arriving at a conclusion,” he said. Araga Jnanendra spoke to the family of the deceased, who was a tailor, in Shivamogga.
28-06-26 06:30 pm
HK News Staffer
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗಲಾಟೆ ; ಪ್ರದೀಪ್...
27-06-26 08:31 pm
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
28-06-26 04:03 pm
HK News Staffer
ದೇಶಾದ್ಯಂತ ಕಿಡ್ನಿ ಕಸಿ ಪ್ರಕ್ರಿಯೆ ಫಲಿತಾಂಶಗಳ ಬಹಿರ...
27-06-26 09:10 pm
40 ಸೆಕೆಂಡ್ ನಲ್ಲಿ ಎರಡು ಬಾರಿ ಭೂಕಂಪ ; ತತ್ತರಿಸಿ ಹ...
25-06-26 12:13 pm
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
28-06-26 09:38 pm
HK News Staffer
Derlakatte Accident, Mangalore: ದೇರಳಕಟ್ಟೆ ಬಳಿ...
27-06-26 08:01 pm
ಬೆಂಗಳೂರಿನಿಂದ ಪ್ರಿಯತಮೆಯ ಅಪಹರಣ ; ಅಂಕೋಲಾಕ್ಕೆ ಹೋಗ...
27-06-26 04:23 pm
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am