ಬ್ರೇಕಿಂಗ್ ನ್ಯೂಸ್
21-02-22 11:18 pm Mangaluru Correspondent ಕ್ರೈಂ
ಮಂಗಳೂರು, ಫೆ.21: ಕಾವೂರು ಠಾಣೆ ವ್ಯಾಪ್ತಿಯ ಪಂಜಿಮೊಗರಿನ ಉರುಂದಾಡಿ ಗುಡ್ಡೆ ಎಂಬಲ್ಲಿ ಹೋಲಿ ಕ್ರಾಸ್ ಚರ್ಚ್ ಮತ್ತು ಅಂಗನವಾಡಿ ಕಟ್ಟಡವನ್ನು ಕೆಡವಿದ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಉರುಂದಾಡಿ ಗುಡ್ಡೆ ನಿವಾಸಿ ಧನಂಜಯ(36) ಮತ್ತು ಬಜ್ಪೆ ನಿವಾಸಿ ಲತೀಶ್ (25) ಬಂಧಿತರು. ಈ ಬಗ್ಗೆ ಶಿಶು ಕಲ್ಯಾಣ ಇಲಾಖೆಯ ಅಧಿಕಾರಿ ಹರೀಶ್ ಕಾವೂರು ಠಾಣೆಗೆ ದೂರು ನೀಡಿದ್ದರು.
ಸದ್ರಿ ಜಾಗದಲ್ಲಿ ಅಂಗನವಾಡಿ ನಿರ್ಮಾಣಕ್ಕೆ 16.5 ಲಕ್ಷ ರೂ. ಮಂಜೂರು ಆಗಿತ್ತು. ಆದರೆ ತಹಸೀಲ್ದಾರ್ ಗೊತ್ತು ಪಡಿಸಿದ ಜಾಗದಲ್ಲಿ ಹೋಲಿ ಕ್ರಾಸ್ ಚರ್ಚ್ ಕಟ್ಟಡ ಇರುವ ಬಗ್ಗೆ ಶಿಶು ಕಲ್ಯಾಣ ಅಧಿಕಾರಿ ಮತ್ತೆ ತಹಸೀಲ್ದಾರ್ ಗೆ ಪತ್ರ ಬರೆದು ಆ ಕಟ್ಟಡವನ್ನು ತೆರವುಗೊಳಿಸಿ ಕೊಡುವಂತೆ ಕೇಳಿಕೊಂಡಿದ್ದರು. ಈ ನಡುವೆ, ಫೆ.5 ರಂದು ಏಕಾಏಕಿ ಯಾರೋ ಬಂದು ಕಟ್ಟಡವನ್ನು ಒಡೆದು ಹಾಕಿದ್ದರು. ಈ ಬಗ್ಗೆ ಅಧಿಕಾರಿ ಹರೀಶ್, ಕಾವೂರು ಠಾಣೆಗೆ ದೂರು ನೀಡಿ ಕಟ್ಟಡವನ್ನು ಒಡೆದು ಹಾಕಲು ಯಾವುದೇ ಆದೇಶ ಆಗಿರುವುದಿಲ್ಲ. ಇದರ ಮಧ್ಯೆ ಯಾರೋ ಕಟ್ಟಡ ಒಡೆದು ಹಾಕಿದ್ದು ಕ್ರಮ ಕೈಗೊಳ್ಳಲು ದೂರಿನಲ್ಲಿ ತಿಳಿಸಿದ್ದರು. ತನಿಖೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಆರೋಪಿ ಧನಂಜಯ ಅದೇ ಪರಿಸರದ ನಿವಾಸಿಯಾಗಿದ್ದು ಮಾಧ್ಯಮದ ಮುಂದೆ ಕಟ್ಟಡ ಒಡೆದ ಬಗ್ಗೆ ತಮಗೇನು ಗೊತ್ತಿಲ್ಲ ಎಂದು ಹೇಳಿಕೊಂಡಿದ್ದ. ಈಗ ಅದೇ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕ್ರಿಸ್ತಿಯನ್ ಬಾಂಧವರು ಘಟನೆ ಖಂಡಿಸಿ ಕುಳೂರಿನಲ್ಲಿ ಪ್ರತಿಭಟನೆ ನಡೆಸಿದ್ದರು.
The Kavoor police on February 21, arrested two persons in connection with the demolition of St Antony Prayer centre in Urandady Gudde-Panjimogaru. The arrested have been identified as Lathish (25) from Bajpe and Dhananjay (36) from Panjimogeru.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm