ಶಿವಮೊಗ್ಗ ನಗರದಲ್ಲಿ ಕರ್ಫ್ಯೂ ಜಾರಿ ; ಇಬ್ಬರ ಬಂಧನ, ಹತ್ತಕ್ಕೂ ಹೆಚ್ಚು ಮಂದಿ ವಶಕ್ಕೆ ! ಪೊಲೀಸ್, ಆರ್ ಎಎಫ್ ಪಡೆ ಸರ್ಪಗಾವಲು 

22-02-22 11:52 am       HK Desk news   ಕ್ರೈಂ

ಹಿಂದು ಸಂಘಟನೆ ಕಾರ್ಯಕರ್ತನ ಹತ್ಯೆಯಿಂದ ಉದ್ವಿಗ್ನಗೊಂಡಿದ್ದ ಶಿವಮೊಗ್ಗ ನಗರ ಸ್ವಲ್ಪಮಟ್ಟಿಗೆ ಶಾಂತವಾಗಿದೆ. ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಗಲಭೆ ನಿಯಂತ್ರಣಕ್ಕಾಗಿ ಕರ್ಫ್ಯೂ ಜಾರಿ ಮಾಡಲಾಗಿದೆ. 

ಶಿವಮೊಗ್ಗ, ಫೆ.22 : ಹಿಂದು ಸಂಘಟನೆ ಕಾರ್ಯಕರ್ತನ ಹತ್ಯೆಯಿಂದ ಉದ್ವಿಗ್ನಗೊಂಡಿದ್ದ ಶಿವಮೊಗ್ಗ ನಗರ ಸ್ವಲ್ಪಮಟ್ಟಿಗೆ ಶಾಂತವಾಗಿದೆ. ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಗಲಭೆ ನಿಯಂತ್ರಣಕ್ಕಾಗಿ ಕರ್ಫ್ಯೂ ಜಾರಿ ಮಾಡಲಾಗಿದೆ. 

ನಿನ್ನೆ ಕೊಲೆಯಾದ ಯುವಕ ಹರ್ಷನ ಶವ ಮೆರವಣಿಗೆ ವೇಳೆ ವ್ಯಾಪಕ ಕಲ್ಲು ತೂರಾಟ ನಡೆದು ಹಿಂಸಾಚಾರ ಆಗಿತ್ತು. ಹೀಗಾಗಿ ಶಿವಮೊಗ್ಗ ನಗರದ ಆಯಕಟ್ಟಿನ ಜಾಗಗಳಲ್ಲಿ ಆರ್ ಎಎಫ್ ಸೇರಿದಂತೆ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜನೆ ಮಾಡಲಾಗಿದೆ. ಪೊಲೀಸರು ನಗರದಾದ್ಯಂತ ಸುತ್ತುವರಿದಿದ್ದು ಅಹಿತಕರ ಘಟನೆ ನಡೆಯದಂತೆ ಕಾವಲು ಹಾಕಿದ್ದಾರೆ. 

ಈ ನಡುವೆ, ಕೊಲೆ ಪ್ರಕರಣ ಸಂಬಂಧಿಸಿ ಹತ್ತಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರನ್ನು ಬಂಧಿಸಿರುವ ಬಗ್ಗೆ ಎಡಿಜಿಪಿ ಮುರುಗನ್ ಮಾಹಿತಿ ನೀಡಿದ್ದಾರೆ. ಶಿವಮೊಗ್ಗ ಬುಡ್ಡಾನಗರ್ ನಿವಾಸಿ, ಲಾರಿ ಕ್ಲೀನರ್ ಆಗಿದ್ದ ಕಾಶಿಫ್ (30) ಮತ್ತು ಶಿವಮೊಗ್ಗ ಜೆಪಿ ನಗರ ನಿವಾಸಿ ಸೈಯದ್ ನದೀಂ ಬಂಧಿತರು. ಘಟನೆ ಬಳಿಕ ಬೆಂಗಳೂರಿಗೆ ಪರಾರಿಯಾಗಿದ್ದ‌ ಮೂವರನ್ನು ವಶಕ್ಕೆ ಪಡೆದಿರುವ ಮಾಹಿತಿಯಿದೆ.‌

ಹಿಂಸಾಚಾರ ಘಟನೆ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಸ್ಥಿತಿಯಿದ್ದು ಪರಸ್ಪರ ಎರಡು ಕೋಮುಗಳ ಯುವಕರು ಉದ್ರಿಕ್ರರಾಗಿದ್ದಾರೆ. ನಿನ್ನೆ ಶವ ಮೆರವಣಿಗೆ ವೇಳೆ ಎರಡೂ ಕಡೆಯಿಂದ ಕಲ್ಲು ತೂರಾಟ ನಡೆದಿತ್ತು. ಘಟನೆಯಲ್ಲಿ 25 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಿಂಸೆ ಘಟನೆ ಕಾರಣ ಶಿವಮೊಗ್ಗ ನಗರದಲ್ಲಿ ಎರಡು ದಿನಗಳ ಕಾಲ ಶಾಲೆ, ಕಾಲೇಜಿಗೆ ರಜೆ ಘೋಷಿಸಲಾಗಿದೆ. 

ಘಟನೆ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ವ್ಯಾಪ್ತಿಗೆ ಒಳಪಡುವ ಎಲ್ಲಾ ಪ್ರದೇಶಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಎಸ್ಪಿ -03, ಎಎಸ್ಪಿ -01, ಡಿವೈಎಸ್ಪಿ-12, ಪೊಲೀಸ್ ಇನ್ಸ್ ಪೆಕ್ಟರ್ -39, ಎಸ್ಐ-54, ಎಎಸ್ಐ- 48, ಪೊಲೀಸ್ ಸಿಬಂದಿ-819, 20-KSRP ತುಕಡಿಗಳು, 10-ಡಿಎಆರ್ ತುಕಡಿಗಳು ಮತ್ತು  01-ಆರ್ ಎಎಫ್ ತುಕಡಿಯನ್ನು ನಿಯೋಜನೆ ಮಾಡಲಾಗಿದೆ.

Shivamogga Harsha Murder case, the police have succeeded in arresting two Muslim youths and also have taken 10 into custody. In order to avoid communal violence the Karnataka State police have deployed RPF all over city. Crime records for the Shivamogga city reveal that Harsha Hindu was involved in at least five cases of assault and attempt to murder including several communal incidents of attacks on rival anti-social elements from the Muslim community.