ಬ್ರೇಕಿಂಗ್ ನ್ಯೂಸ್
22-02-22 10:21 pm HK Desk news ಕ್ರೈಂ
ಶಿವಮೊಗ್ಗ, ಫೆ.22 : ಹಿಂದು ಸಂಘಟನೆ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ ಏಳಕ್ಕೇರಿದೆ. ಇದೇ ವೇಳೆ, ಶಿವಮೊಗ್ಗ ನಗರದಲ್ಲಿ ವಿಧಿಸಿರುವ ಕರ್ಫ್ಯೂ ಆದೇಶವನ್ನು ಇನ್ನೆರಡು ದಿನಗಳ ಕಾಲ ವಿಸ್ತರಣೆ ಮಾಡಲಾಗಿದೆ. ಶಾಲೆ, ಕಾಲೇಜುಗಳಿಗೆ ಶುಕ್ರವಾರದ ವರೆಗೂ ರಜೆ ಘೋಷಣೆ ಮಾಡಲಾಗಿದೆ.
ಕೊಲೆ ಘಟನೆ ನಡೆದ ನಾಲ್ಕೇ ಗಂಟೆಯಲ್ಲಿ ಮೊಹಮ್ಮದ್ ಖಾಸಿಫ್ ಮತ್ತು ಕಾಸಿಂ ನದೀಂ ಎಂಬವರನ್ನು ಪೊಲೀಸರು ಬಂಧಿಸಿದ್ದರು. ಅವರನ್ನು ವಿಚಾರಣೆ ನಡೆಸುತ್ತಿದ್ದಂತೆ, ಕೊಲೆ ಪ್ರಕರಣದ ಹುನ್ನಾರ ಹೊರಬಂದಿದ್ದು, ಇತರ ನಾಲ್ವರನ್ನು ಬಂಧಿಸಲಾಗಿದೆ. ಒಟ್ಟು ಹತ್ತಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ಆರು ಮಂದಿಯನ್ನು ವಿಚಾರಣೆ ನಡೆಸಿ ಹಿಂದಕ್ಕೆ ಕಳಿಸಲಾಗಿದೆ. ಒಟ್ಟು 13 ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ಶಿವಮೊಗ್ಗ ಎಸ್ಪಿ ಬಿಎಂ ಲಕ್ಷ್ಮೀಪ್ರಸಾದ್ ಹೇಳಿದ್ದಾರೆ. ರಿಹಾನ್ ಅಹ್ಮದ್, ಆಸೀಫ್ ಉಲ್ಲಾ ಖಾನ್, ನಿಹಾನ್ ಹಾಗೂ ಅಫಾನ್ ಬಂಧಿತರು. ಇವರಲ್ಲಿ ನಾಲ್ವರು ಕೋಮು ಗಲಭೆ ಪ್ರಕರಣಗಳಲ್ಲಿ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ.

ಖಾಸೀಫ್ ಹತ್ಯೆ ಹಿಂದಿನ ರೂವಾರಿ
ಕೊಲೆ ಪ್ರಕರಣದಲ್ಲಿ ಒಂದನೇ ಆರೋಪಿಯಾಗಿರುವ ಮೊಹಮ್ಮದ್ ಖಾಸಿಫ್, ಹರ್ಷನ ಕೊಲೆ ಹಿಂದಿನ ರೂವಾರಿ ಅನ್ನುವುದು ಪ್ರಾಥಮಿಕ ಮಾಹಿತಿ. ಲಾರಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಖಾಸಿಫ್ ಇಮಾಮ್ ಬಾಡಾದ ನಿವಾಸಿ. ಇಮಾಮ್ ಬಾಡಾ ಹಾಗೂ ಗಾಂಧಿ ಬಜಾರ್ನಲ್ಲಿ ಕಾರ್ಯಕ್ಷೇತ್ರ ಮಾಡಿಕೊಂಡಿದ್ದ ಈತ ಪೊಲೀಸರ ಲಿಸ್ಟ್ ನಲ್ಲಿ ಕ್ರಿಮಿನಲ್ ಆಗಿದ್ದ. ಕೋಮು ದ್ವೇಷದ ವಿಚಾರದಲ್ಲಿ ಹರ್ಷನ ಜೊತೆಗೆ ವೈರತ್ವ ಹೊಂದಿದ್ದ. ಈ ಹಿಂದೆ ಹರ್ಷ ಮತ್ತು ಖಾಸಿಫ್ ನಡುವೆ ಜಗಳ ಆಗಿತ್ತು ಎನ್ನುವ ಮಾಹಿತಿಯೂ ಇದೆ. ಈ ನಡುವೆ, ಇತ್ತೀಚೆಗೆ ಶಿವಮೊಗ್ಗದಲ್ಲಿ ಹಿಜಾಬ್ ಗಲಾಟೆ ನಡೆದಿದ್ದಾಗ, ಹಿಂದು ಯುವಕರಿಗೆ ಹರ್ಷ ಕೇಸರಿ ಶಾಲನ್ನ ಹಂಚಿದ್ದ ಎನ್ನುವ ಮಾಹಿತಿಗಳಿದ್ದವು.


ಆನಂತರ, ಕಾಲೇಜಿನಲ್ಲಿ ಕೇಸರಿ ಧ್ವಜ ಹಾರಿಸಿದ್ದು, ಕಲ್ಲು ತೂರಾಟ ಆಗಿದ್ದು, ಪರಸ್ಪರ ಕತ್ತಿ ಮಸೆಯುವ ಘಟನೆಗಳು ನಡೆದಿದ್ದವು. ಶಿವಮೊಗ್ಗದಲ್ಲಿ ಕರಾವಳಿಯ ರೀತಿಯಲ್ಲೇ ಕೋಮು ದ್ವೇಷದ ವೈಷಮ್ಯ ಹೊತ್ತಿಕೊಳ್ಳಲು ಸಮಯ ಬೇಕಿರಲಿಲ್ಲ. ಇದೇ ಸಮಯಕ್ಕಾಗಿ ಕಾದಿದ್ದ ವಿರೋಧಿ ತಂಡ, ಹರ್ಷನ ಮುಗಿಸಲು ಪ್ಲಾನ್ ಹಾಕಿತ್ತು. ಒಬ್ಬಂಟಿಯಾಗಿ ಸಿಕ್ಕರೆ ಮುಗಿಸಲು ಹೊಂಚು ಹಾಕಿದ್ದರು. ಮೊನ್ನೆ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಯಾರೋ ಗೆಳೆಯ ಕರೆದಿದ್ದಾನೆ ಎಂದು ಮನೆಯ ಹೊರಗೆ ತೆರಳಿದ್ದ ಹರ್ಷ ಅಲ್ಲಿಂದ ಹಿಂತಿರುಗುವ ದಾರಿಯಲ್ಲಿ ಹಿಂದಿನಿಂದ ಬಂದಿದ್ದ ಹಂತಕರು ಮಚ್ಚಿನಿಂದ ಕಡಿದು ಕೊಲೆಗೈದಿದ್ದರು.

ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದು, ಕೃತ್ಯಕ್ಕೆ ಬೇರಾವುದೇ ಸಂಘಟನೆಯ ಕೈವಾಡ, ಪ್ರೇರಣೆ ಇತ್ತೇ ಎನ್ನುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಶಿವಮೊಗ್ಗ ನಗರ ಬೂದಿ ಮುಚ್ಚಿದ ಕೆಂಡದಂತಿದ್ದು, ನಿಧಾನಕ್ಕೆ ಶಾಂತ ಸ್ಥಿತಿಗೆ ಮರಳುತ್ತಿದೆ. ಆದರೆ ಕೋಮು ದ್ವೇಷದ ವಾತಾವರಣ ಇದ್ದು, ಹರ್ಷನ ಮನೆಗೆ ಬಿಜೆಪಿ, ಹಿಂದು ಸಂಘಟನೆಗಳ ನಾಯಕರು ಭೇಟಿ ನೀಡುತ್ತಿದ್ದು, ಕುಟುಂಬಕ್ಕೆ ಸಾಥ್ ನೀಡುತ್ತಿದ್ದಾರೆ.
Karnataka Police said six people have been arrested and 12 more detained for questioning in connection with Bajrang Dal activist Harsha's murder in Shivamogga district. The arrested have been identified as Mohammed Kashif, Sayed Nadeem, Afsifullah Khan, Rehan Sharef, Nihan, Abdul Afnan, said Shivamogga SP Laxmi Prasad.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm