ಬ್ರೇಕಿಂಗ್ ನ್ಯೂಸ್
23-02-22 10:00 pm HK Desk news ಕ್ರೈಂ
ಮುಂಬೈ, ಫೆ.23 : ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆಗಿನ ಆಸ್ತಿ ವಹಿವಾಟು ನಂಟು ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರ ಸರಕಾರದಲ್ಲಿ ಸಚಿವನಾಗಿರುವ ನವಾಬ್ ಮಲಿಕ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಬುಧವಾರ ಬೆಳಗ್ಗೆ ನವಾಬ್ ಮಲಿಕ್ ಅವರನ್ನು ಮನೆಯಿಂದಲೇ ವಶಕ್ಕೆ ಪಡೆದಿದ್ದ ಅಧಿಕಾರಿಗಳು ಆರು ಗಂಟೆಗಳ ಕಾಲ ಡ್ರಿಲ್ ಮಾಡಿದ್ದರು. ಸಂಜೆ ವೇಳೆಗೆ ಮಲಿಕ್ ಅವರನ್ನು ಬಂಧಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಂಬೈನಲ್ಲಿ ಬೇನಾಮಿ ಹೆಸರಲ್ಲಿ ಅಪಾರ ಆಸ್ತಿಪಾಸ್ತಿ ಹೊಂದಿರುವ ದಾವೂದ್ ಇಬ್ರಾಹಿಂ, ಆತನ ಸಹೋದರ ಅನೀಸ್ ಇಕ್ಬಾಲ್, ಸಹಾಯಕ ಚೋಟಾ ಶಕೀಲ್ ವಿರುದ್ಧ ಅಕ್ರಮ ಹಣ ವರ್ಗಾವಣೆ, ಕಾನೂನು ಬಾಹಿರ ಚಟುವಟಿಕೆ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಇಡಿ ಅಧಿಕಾರಿಗಳು, ಇವರ ಜೊತೆಗೆ ನಂಟು ಹೊಂದಿರುವ ರಾಜಕಾರಣಿಗಳ ವಿರುದ್ಧವೂ ತನಿಖೆ ಆರಂಭಿಸಿದ್ದಾರೆ.
ಇತ್ತೀಚೆಗೆ ಎನ್ಐಎ ತನಿಖಾ ತಂಡ ಎಫ್ಐಆರ್ ದಾಖಲಿಸಿದ ಬಳಿಕ ಇಡಿ ಅಧಿಕಾರಿಗಳು ಮುಂಬೈನ ವಿವಿಧೆಡೆ ದಾಳಿ ನಡೆಸಿದ್ದರು. ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರಿಗೆ ಸೇರಿದ್ದ ಆಸ್ತಿ ಪಾಸ್ತಿಗಳಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಅಲ್ಲದೆ, ಇವರ ಜೊತೆ ನೇರ ನಂಟು ಹೊಂದಿರುವ ರಾಜಕಾರಣಿಗಳನ್ನೂ ಬೆಂಡೆತ್ತಲು ಮುಂದಾಗಿದ್ದರು. ಕಳೆದ ಬಾರಿ ಮುಂಬೈ ಎನ್ ಸಿಬಿ ಅಧಿಕಾರಿ ಸಮೀರ್ ಶುಕ್ಲಾ ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ಪ್ರಮುಖರನ್ನು ಸೆರೆಹಿಡಿದ ಸಂದರ್ಭದಲ್ಲಿ ಸಚಿವ ನವಾಬ್ ಮಲಿಕ್, ಸಮೀರ್ ಶುಕ್ಲಾ ವಿರುದ್ಧ ಆರೋಪ ಮಾಡಿದ್ದರು. ಇದೇ ವಿಚಾರದಲ್ಲಿ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಮತ್ತು ನವೂಬ್ ಮಲಿಕ್ ನಡುವೆ ಆರೋಪ- ಪ್ರತ್ಯಾರೋಪ ಕೇಳಿಬಂದಿತ್ತು. ನಬಾವ್ ಮಲಿಕ್ ಅಂಡರ್ ವರ್ಲ್ಡ್ ಲಿಂಕ್ ಹೊಂದಿದ್ದಾರೆ ಎಂದು ಫಡ್ನವಿಸ್ ಗಂಭೀರ ಆರೋಪ ಮಾಡಿದ್ದರು.
ದಾವೂದ್ ಆಪ್ತನಾಗಿರುವ ಶಹವ್ಲಿ ಖಾನ್ ಮತ್ತು ಸಲೀಂ ಪಟೇಲ್ ನಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಮಬಾವ್ ಮಲಿಕ್ ಕೇವಲ 30 ಲಕ್ಷ ರೂ.ಗೆ ಖರೀದಿಸಿದ್ದರು ಎಂದು ದೇವೇಂದ್ರ ಫಡ್ನವಿಸ್ ಆರೋಪಿಸಿದ್ದರು. ಇದೀಗ ಇಡಿ ಅಧಿಕಾರಿಗಳು ಈ ಆಸ್ತಿ ಖರೀದಿ ಸೇರಿದಂತೆ ದಾವೂದ್ ಜೊತೆಗಿನ ನಂಟಿನ ಬಗ್ಗೆ ತನಿಖೆ ಕೈಗೆತ್ತಿಕೊಂಡಿದೆ. ಆದರೆ ಇಡಿ ಅಧಿಕಾರಿಗಳ ಬಂಧನದ ಬಳಿಕ ಪ್ರತಿಕ್ರಿಯೆ ನೀಡಿರುವ ಮಲಿಕ್, ನಾನು ಯಾರಿಗೂ ತಲೆ ಬಾಗಲ್ಲ. ಹಿಂತಿರುಗಿ ಬಂದು ಹೋರಾಡುತ್ತೇನೆ. ಯಾರನ್ನೂ ಬಿಡುವುದಿಲ್ಲ. ನಾನೇ ಗೆಲ್ಲುತ್ತೇನೆ ಎಂದು ಹೇಳಿದ್ದರು. ಮಲಿಕ್ ಬಂಧನ ಆಗುತ್ತಿದ್ದಂತೆ ಮುಂಬೈನಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ನವಾಬ್ ಮಲಿಕ್ ಅವರನ್ನು ಸಚಿವ ಸ್ಥಾನದಿಂದ ಕಿತ್ತು ಹಾಕಬೇಕೆಂದು ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರದ ಎನ್ ಸಿಪಿ-ಶಿವಸೇನೆ ಸರಕಾರದಲ್ಲಿ ಇಡಿ ಅಧಿಕಾರಿಗಳಿಂದ ಬಂಧನ ಆಗುತ್ತಿರುವ ಎರಡನೇ ಸಚಿವ ನವಾಬ್ ಮಲಿಕ್. ಕಳೆದ ಬಾರಿ 2021ರ ನವೆಂಬರ್ ನಲ್ಲಿ ಮಹಾರಾಷ್ಟ್ರದ ಗೃಹಸಚಿವ ಅನಿಲ್ ದೇಶಮುಖ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು. ಮುಂಬೈ ಪೊಲೀಸ್ ಕಮಿಷನರ್ ಆಗಿದ್ದ ಪರಮ್ ಬೀರ್ ಸಿಂಗ್, ಅನಿಲ್ ದೇಶಮುಖ್ ವಿರುದ್ಧ 100 ಕೋಟಿ ಲಂಚ ವಸೂಲಿ ಬಗ್ಗೆ ಆರೋಪ ಮಾಡಿದ್ದರು. ಈ ಬಗ್ಗೆ ಅನಿಲ್ ದೇಶಮುಖ್ ಅವರನ್ನು ವಶಕ್ಕೆ ಪಡೆದಿದ್ದ ಇಡಿ, ಸುದೀರ್ಘ 12 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಆದರೆ ಸೂಕ್ತ ಉತ್ತರ ನೀಡದ ಕಾರಣ ಕೊನೆಗೆ ಬಂಧಿಸಿತ್ತು.
The Enforcement Directorate (ED) on Wednesday arrested NCP leader and Maharashtra minister Nawab Malik after probing him in connection with a money laundering case linked to Dawood Ibrahim and the underworld.
31-07-25 11:20 pm
Bangalore Correspondent
Kolar woman blood group: ಕೋಲಾರದ ಮಹಿಳೆಯಲ್ಲಿ ವಿ...
31-07-25 10:20 am
Pranab Mohanty, SIT, Dharmasthala; ಎಡಿಜಿಪಿ ಪ್...
30-07-25 06:28 pm
Dharmasthala Burial Site, Atm, Pan Card Found...
30-07-25 05:42 pm
Al Qaeda Arrest, Bangalore: ಕರ್ನಾಟಕ ರಾಜಧಾನಿಗೂ...
30-07-25 11:40 am
31-07-25 10:08 pm
HK News Desk
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
ಜಾರ್ಖಂಡ್ ನಲ್ಲಿ ಭೀಕರ ರಸ್ತೆ ಅಪಘಾತ ; ಸಿಲಿಂಡರ್...
29-07-25 11:58 am
ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಆಪರೇಶನ್ ಮಹಾದೇವ್,...
28-07-25 11:07 pm
31-07-25 11:16 pm
Mangalore Correspondent
MCC Bank to Inaugurate 20th Branch in Byndoor...
31-07-25 10:14 pm
KMC Hospital Attavar Trains Armed Forces Doct...
31-07-25 09:14 pm
Mangalore KMC Attavar, Workshop: ಅತ್ತಾವರ ಕೆಎಂ...
31-07-25 09:05 pm
Human Skull, Multiple Bones, Dharmasthala, SI...
31-07-25 08:45 pm
31-07-25 06:04 pm
Mangalore Correspondent
Bangalore Cyber Fraud: ಉದ್ಯೋಗಿಯನ್ನ ನಂಬಿ ಲ್ಯಾಪ...
30-07-25 10:42 pm
Mangalore Crime, Arrest: ಉದ್ಯಮಿಗಳಿಗೆ ನಕಲಿ ಆಸ್...
30-07-25 08:48 pm
Mysuru Drugs, Crime, Mumbai Police: ಮೈಸೂರಿನಲ್...
30-07-25 11:37 am
ಮಕ್ಕಳಾಗಿಲ್ಲ ಅಂತ ಗಂಡನ ಮೇಲೆ ಸಿಟ್ಟು ; ಪ್ರಿಯಕರನಿಂ...
29-07-25 08:54 pm