ಬ್ರೇಕಿಂಗ್ ನ್ಯೂಸ್
23-02-22 10:23 pm Mangalore Correspondent ಕ್ರೈಂ
ಬಂಟ್ವಾಳ, ಫೆ.23 : ಹಣಕಾಸಿನ ವಿಚಾರದಲ್ಲಿ ಗಂಡ ಹೆಂಡತಿ ನಡುವಿನ ಜಗಳ ಕೊನೆಗೆ ಪತಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಾರದ ಹಿಂದೆ ಬಂಟ್ವಾಳದಲ್ಲಿ ಘಟನೆ ನಡೆದಿದ್ದು, ಮೃತರ ಪೋಸ್ಟ್ ಮಾರ್ಟಂ ವರದಿಯಂತೆ ಪೊಲೀಸರು ಕೇಸು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ತೆಂಕಕಜೆಕಾರು ಗ್ರಾಮದ ಬರಮೇಲು ನಿವಾಸಿ ಕೇಶವ ಪೂಜಾರಿ(47) ಮೃತರು. ಮಣಿನಾಲ್ಕೂರು ನಿವಾಸಿ, ಮೃತರ ಭಾವ ಅಶೋಕ್ ಅಲಿಯಾಸ್ ಚಂದಪ್ಪ ಪೂಜಾರಿ(45) ಆರೋಪಿಯಾಗಿದ್ದು, ಪುಂಜಾಲಕಟ್ಟೆ ಪೊಲೀಸರು ಬಂಧಿಸಿದ್ದಾರೆ. ಮೃತ ಕೇಶವ ಪೂಜಾರಿ ಮಂಗಳೂರಿನ ಹೊಟೇಲ್ ಒಂದರಲ್ಲಿ ಅಡುಗೆ ಕಾರ್ಮಿಕನಾಗಿದ್ದು, ಜನವರಿ 31ರಂದು ಮನೆಗೆ ಬಂದಿದ್ದ ವೇಳೆ ತನ್ನ ದುಡಿದ ಹಣವನ್ನು ಪತ್ನಿ ಪ್ರೇಮಾಗೆ ಕೊಟ್ಟಿದ್ದರು ಎನ್ನಲಾಗಿದೆ. ಆನಂತರ, ಅದರಲ್ಲಿ ನೂರು ರೂ. ಖರ್ಚಿಗೆ ಕೊಡುವಂತೆ ಕೇಳಿದ್ದು, ಅದೇ ವಿಚಾರದಲ್ಲಿ ಪತಿ- ಪತ್ನಿ ನಡುವೆ ಕಲಹ ನಡೆದಿತ್ತು.
ಆನಂತರ ಪತ್ನಿ ಪ್ರೇಮಾ ಈ ಬಗ್ಗೆ ತನ್ನ ಸೋದರ ಚಂದಪ್ಪನಿಗೆ ವಿಷಯ ತಿಳಿಸಿದ್ದು ಆತ ಇವರ ಮನೆಗೆ ಬಂದಿದ್ದ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದ್ದು, ಕೇಶವ ಮೇಲೆ ಚಂದಪ್ಪ ಪೂಜಾರಿ ಹಲ್ಲೆ ನಡೆಸಿದ್ದ. ಹಲ್ಲೆಯಿಂದ ಗಾಯಗೊಂಡ ಕೇಶವ ಅವರನ್ನು ತಾಯಿ ಲೀಲಾ ಅವರು ಬಂಟ್ವಾಳ ಸರಕಾರಿ ಸರಕಾರಿ ಆಸ್ಪತ್ರೆಗೆ ಒಯ್ದು ಚಿಕಿತ್ಸೆ ಒದಗಿಸಿದ್ದರು. ಆನಂತರ, ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದರು.
A squabble between a couple has ended in the fatal assault of the husband in the hands of his brother-in-law. Bantwal taluk Tenkakajekar, Baramelu resident Keshava Poojary (47) is the deceased. The police have arrested his brother-in law Maninalkur resident Ashok alias Chandappa Poojary (45).
09-01-25 07:04 pm
HK News Desk
S T Somashekar, Yatnal, DK Shivakumar temple:...
09-01-25 04:54 pm
Hassan, Lokayukta Arrest: ಹಾಸನಾಂಬ ಜಾತ್ರಾ ಮಹೋತ...
09-01-25 04:21 pm
Six Naxals Surrender, CM Siddaramaiah: ಕಾಡಿನ...
08-01-25 09:26 pm
ಬೆಂಗಳೂರು, ಬೆಳಗಾವಿ, ಚಿಕ್ಕಮಗಳೂರು ಸೇರಿ ರಾಜ್ಯದಾದ್...
08-01-25 03:39 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
09-01-25 07:50 pm
Mangalore Correspondent
ಜನವರಿ 11-12 ; 'ಮಂಗಳೂರು ಲಿಟ್ ಫೆಸ್ಟ್' ಏಳನೇ ಆವೃತ...
08-01-25 09:51 pm
Surathkal Beach, Drowning, Mangalore; ಸುರತ್ಕಲ...
08-01-25 06:13 pm
Naxal, Vikram Gowda, Surrender: ಶರಣಾಗುವವರಿಗೆ...
08-01-25 11:53 am
MCC Bank Anil Lobo, Bail Reject, Mangalore; ಎ...
07-01-25 11:13 pm
10-01-25 10:11 am
Mangalore Correspondent
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm
Old Coin Scam, Mangalore Fraud: ಎಲ್ಲ ಆಯ್ತು.....
09-01-25 01:26 pm
Vamanjoor Misfire, Mangalore Crime, Police; ಪ...
09-01-25 11:27 am