ದೇವಸ್ಥಾನದ ಗೋಪುರದಲ್ಲಿ ಹಸಿರು ಬಾವುಟ ; ಎಡಿಟ್ ಮಾಡಿದ ವಿಡಿಯೋ ಹಂಚಿಕೆ, 17 ವರ್ಷದ ಬಾಲಕ ವಶಕ್ಕೆ   

25-02-22 03:32 pm       Mangalore Correspondent   ಕ್ರೈಂ

ಇನ್ ಸ್ಟಾ ಗ್ರಾಮ್ ಪೇಜ್ ಒಂದರಲ್ಲಿ ಹಿಂದುಗಳ ದೇವಸ್ಥಾನದ ಮೇಲೆ ಹಸಿರು ಬಾವುಟ ಹಾರಾಡುವ ರೀತಿಯಲ್ಲಿ ವಿಡಿಯೋ ಎಡಿಟ್ ಮಾಡಿ, ಪೋಸ್ಟ್ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದ್ದು, 17 ವರ್ಷದ ಅಪ್ರಾಪ್ತ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು, ಫೆ.25 : ಇನ್ ಸ್ಟಾ ಗ್ರಾಮ್ ಪೇಜ್ ಒಂದರಲ್ಲಿ ಹಿಂದುಗಳ ದೇವಸ್ಥಾನದ ಮೇಲೆ ಹಸಿರು ಬಾವುಟ ಹಾರಾಡುವ ರೀತಿಯಲ್ಲಿ ವಿಡಿಯೋ ಎಡಿಟ್ ಮಾಡಿ, ಪೋಸ್ಟ್ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದ್ದು, 17 ವರ್ಷದ ಅಪ್ರಾಪ್ತ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

Troll_king_193 ಹೆಸರಿನ ಇನ್ ಸ್ಟಾ ಗ್ರಾಮ್ ಖಾತೆಯಲ್ಲಿ ದೇವಸ್ಥಾನದ ಗೋಪುರದ ಮೇಲೆ ಹಸಿರು ಬಾವುಟ ಹಾರಾಡುವ ರೀತಿ ವಿಡಿಯೋ ಎಡಿಟ್ ಮಾಡಿ, ಮೂರು ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗಿತ್ತು. ಇದರಿಂದ ಹಿಂದುಗಳ ಭಾವನೆಗೆ ಧಕ್ಕೆಯಾಗಿದೆ. ಈ ರೀತಿಯ ನಡೆಗಳಿಂದ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಗಲಭೆಗೆ ಕಾರಣವಾಗುತ್ತದೆ ಎಂದು ನಗರದ ಉರ್ವಾ ಸ್ಟೋರ್ ನಿವಾಸಿ ಕಿರಣ್ ಅಮೀನ್ ಎಂಬವರು ಪೊಲೀಸ್ ದೂರು ನೀಡಿದ್ದರು.

Instagram users fall prey to 'get rich quick' scam | Financial Times

ಈ ಬಗ್ಗೆ ಮಂಗಳೂರು ನಗರದ ಸಿಇಎನ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 66ಸಿ, 66ಡಿ, ಐಟಿ ಕಾಯ್ದೆಯಡಿ ಮತ್ತು 153ಎ, 505(2) ಪ್ರಕಾರ ಕ್ರಮ ತೆಗೆದುಕೊಳ್ಳಲಾಗಿತ್ತು. ಪ್ರಕರಣ ಸಂಬಂಧಿಸಿ ತನಿಖೆ ನಡೆಸಿದ ಪೊಲೀಸರು ಕಾನೂನಿನ ಜೊತೆ ಸಂಘರ್ಷಕ್ಕಿಳಿದ 17 ವರ್ಷದ ಬಾಲಕನನ್ನು ಕೋಣಾಜೆಯಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದ್ದು, ವಿಡಿಯೋ ಎಡಿಟ್ ಮಾಡಿಕೊಟ್ಟವರು ಯಾರೆಂದು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Mangalore 17-year-old boy arrested for morphing temple video with green flag of Muslims.