ಬ್ರೇಕಿಂಗ್ ನ್ಯೂಸ್
25-02-22 07:39 pm HK Desk news ಕ್ರೈಂ
ಶಿವಮೊಗ್ಗ, ಫೆ.25 : ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಹತ್ತು ಮಂದಿಯನ್ನು ಬಂಧಿಸಿದ್ದೇವೆ. ವಶಕ್ಕೆ ಪಡೆದವರ ವಿಚಾರಣೆ ಆರಂಭಿಸುತ್ತೇವೆ. ವಿಚಾರಣೆ ಬಳಿಕ ಬೇರೆ ಈ ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದು ತಿಳಿಯಲಿದೆ. 14 ದಿನಗಳ ಬಳಿಕ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುತ್ತೇವೆ ಎಂದು ಶಿವಮೊಗ್ಗ ಎಸ್ಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರ್ಷನ ಕೊಲೆಗೆ ಬಳಸಿದ್ದ ಕಾರನ್ನು ಹಾಗೂ ಆರೋಪಿಗಳು ತಪ್ಪಿಸಿಕೊಳ್ಳಲು ಬಳಸಿದ್ದ ಕಾರು ಹಾಗೂ ಬೈಕನ್ನು ವಶಕ್ಕೆ ಪಡೆದಿದ್ದೇವೆ. ಕೊಲೆ ಮಾಡಲು ಬೇರೆ ರಾಜ್ಯದ ಕಾರನ್ನು ಬಳಸಿಕೊಂಡಿದ್ದಾರೆ. ಆ ಕಾರು ಯಾರದ್ದು, ಶಿವಮೊಗ್ಗಕ್ಕೆ ಯಾಕೆ ಬಂತು, ಕಾರಿನ ಮಾಲಕರು ಯಾರು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದರು.

ವಿಡಿಯೋ ಕಾಲ್ ಮಾಡಿದವರ ಪತ್ತೆ
ಕೊಲೆಯಾದ ಹರ್ಷನ ಮೊಬೈಲ್ ಫೋನ್ ಇದುವರೆಗೂ ಪತ್ತೆಯಾಗಿಲ್ಲ. ಆದರೆ ಆತನಿಗೆ ಕೊಲೆಯಾಗೋದಕ್ಕೂ ಮುನ್ನ ವೀಡಿಯೋ ಕರೆ ಮಾಡಿದವರನ್ನು ಪತ್ತೆ ಮಾಡಿದ್ದೇವೆ. ವಿಡಿಯೋ ಕರೆ ಮಾಡಿದವರಿಗೂ ಹಂತಕರಿಗೂ ಯಾವುದೇ ಸಂಬಂಧ ಇಲ್ಲ. ಅದರ ಬಗ್ಗೆ ವಿಚಾರಣೆ ಮಾಡಿದ್ದೇವೆ. ಮೆರವಣಿಗೆ ವೇಳೆ ಪೊಲೀಸರಿಗೆ ಲಾಂಗ್- ಮಚ್ಚು ತೋರಿಸಿ ಬೆದರಿಕೆ ಹಾಕಿದವರು ಯಾರು ಎಂಬುದು ಗೊತ್ತಾಗಿದೆ. ಸಿಸಿಟಿವಿ ಆಧರಿಸಿ ಅವರನ್ನು ಶೀಘ್ರವೇ ಬಂಧಿಸುತ್ತೇವೆ ಎಂದು ಎಸ್ಪಿ ಮಾಹಿತಿ ನೀಡಿದರು.
ಹರ್ಷ ಕೊಲೆ ಪ್ರಕರಣದಲ್ಲಿ ಸಾತು ಆ್ಯಂಡ್ ಗ್ಯಾಂಗ್ ಭಾಗಿಯಾಗಿತ್ತೇ ಎಂಬ ಪ್ರಶ್ನೆಗೆ, ಆ ಬಗ್ಗೆ ತನಿಖೆ ನಡೆಸುತಿದ್ದೇವೆ. ಕೊಲೆ ಹಿಂದೆ ಯಾವುದಾದರೂ ಸಂಘಟನೆಗಳಿವೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಖಾಸಿಫ್, ಆಸಿಫ್ ಮೇಲೆ ಐದು, ರಿಹಾನ್ ಮೇಲೆ ಮೂರು ಹಾಗೂ ಅಫ್ನಾನ್ ಮೇಲೆ ಎರಡು ಕಾನೂನು ಸುವ್ಯವಸ್ಥೆಗೆ ಧಕ್ಕೆ ಎಸಗಿದ ಕೋಮು ವೈಷಮ್ಯದ ಪ್ರಕರಣಗಳಿವೆ. ಉಳಿದಂತೆ ಡಕಾಯಿತಿ, ಕಳ್ಳತನ ಪ್ರಕರಣಗಳು ದಾಖಲಾಗಿವೆ. ಕೊಲೆಯಾದ ಹರ್ಷನ ಮೇಲೆ ಧರ್ಮ ದ್ವೇಷ ಸಂಬಂಧಿಸಿದ ಎರಡು ಪ್ರಕರಣ ದಾಖಲಾಗಿತ್ತು ಎಂದು ಎಸ್ಪಿ ಹೇಳಿದರು.
Harsha Murder case 10 arrested so far, investigating organisation support angle says SP Lakshmi Prasad.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
12-01-26 01:54 pm
Mangaluru Staffer
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm