ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ನುಗ್ಗಿದ ತಂಡ ; ಉದ್ಯಮಿ ಮನೆಯಿಂದ 25 ಲಕ್ಷ ನಗದು, ಚಿನ್ನಾಭರಣ ದರೋಡೆ ! 

01-03-22 04:25 pm       HK Desk news   ಕ್ರೈಂ

ಸಿಬಿಐ ಅಧಿಕಾರಿ ಸೋಗಿನಲ್ಲಿ ಮನೆ ಒಳಗೆ ಬಂದಿದ್ದ ತಂಡವೊಂದು ಉದ್ಯಮಿಯ ಮನೆಯನ್ನು ದರೋಡೆಗೈದ ಘಟನೆ ಕೋಲಾರ ನಗರದ ಸಿ.ಬೈರೇಗೌಡ ಬಡಾವಣೆಯಲ್ಲಿ ಭಾನುವಾರ ರಾತ್ರಿ ನಡೆದಿದೆ. 

ಕೋಲಾರ, ಮಾ.1: ಸಿಬಿಐ ಅಧಿಕಾರಿ ಸೋಗಿನಲ್ಲಿ ಮನೆ ಒಳಗೆ ಬಂದಿದ್ದ ತಂಡವೊಂದು ಉದ್ಯಮಿಯ ಮನೆಯನ್ನು ದರೋಡೆಗೈದ ಘಟನೆ ಕೋಲಾರ ನಗರದ ಸಿ.ಬೈರೇಗೌಡ ಬಡಾವಣೆಯಲ್ಲಿ ಭಾನುವಾರ ರಾತ್ರಿ ನಡೆದಿದೆ. 

ಉದ್ಯಮಿ ರಮೇಶ್ ಎನ್ನುವರ ಮನೆಗೆ ಸಿ.ಬಿ.ಐ ಅಧಿಕಾರಿಗಳೆಂದು ಹೇಳಿ ಬಂದಿದ್ದ ದರೋಡೆಕೋರರು, ಸಿನಿಮೀಯ ರೀತಿಯಲ್ಲಿ ಲಕ್ಷಾಂತರ ರೂಪಾಯಿ ದೋಚಿದ್ದಾರೆ. ಬಡಾವಣೆಯ 2ನೇ ಕ್ರಾಸ್ ಮುಖ್ಯ ರಸ್ತೆಯಲ್ಲಿರುವ ಮೂರಂತಸ್ತಿನ ರಮೇಶ್ ಅವರ ಮನೆಗೆ, ರಾತ್ರಿ 8 ಗಂಟೆ ವೇಳೆಗೆ ನುಗ್ಗಿದ ಮೂವರಿದ್ದ ತಂಡ, ತಾವು ಸಿ.ಬಿ.ಐ ಅಧಿಕಾರಿಗಳು, ಪ್ರಕರಣ ಒಂದರಲ್ಲಿ ನಿಮ್ಮ ಸಹಿ ಬೇಕು, ಬಾಗಿಲು ತೆಗೆಯಿರಿ ಎಂದು ಹಿಂದಿಯಲ್ಲಿ ಕೇಳಿದ್ದಾರೆ. ಅನುಮಾನಗೊಂಡ ರಮೇಶ್ ಪತ್ನಿ ನಿಮ್ಮಲ್ಲಿ ಐಡಿ ಇದೆಯಾ ಎಂದು ಪ್ರಶ್ನೆ ಮಾಡಿದ್ದಾರೆ. ‌ಆಗ ಮನೆಯ ಒಳಕ್ಕೆ ನುಗ್ಗಿದ ಮೂವರು, ರಮೇಶ್ ಹಾಗೂ ಪತ್ನಿ ಮತ್ತು ಪುತ್ರನನ್ನ ಕೊಠಡಿಯೊಳಗೆ ಕೂಡಿಹಾಕಿದ್ದಾರೆ.

ಆಬಳಿಕ ಮತ್ತೆ ಇಬ್ಬರು ಮನೆಯೊಳಗೆ ಆಗಮಿಸಿದ್ದು, ಮಾರಕಾಸ್ತ್ರಗಳನ್ನ ತೋರಿಸಿ ಮನೆಯಲ್ಲಿದ್ದ 25 ಲಕ್ಷ ರೂ. ನಗದು, ಒಂದು ಕೆಜಿಗೂ ಅಧಿಕ ಚಿನ್ನ, ಬೆಳ್ಳಿ ವಸ್ತುಗಳನ್ನ ಕದ್ದೊಯ್ದಿದ್ದಾರೆ. ದರೋಡೆ ನಂತರ ರಮೇಶ್, ಪತ್ನಿ ಹಾಗು ಮಗನನ್ನ ಕೊಠಡಿಯಲ್ಲಿ ಕೂಡಿಹಾಕಿ, ಬಾಯಿಗೆ ಪ್ಲಾಸ್ಟರ್ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ. 

Miscreants posing as passengers rob bus travellers in Mathura | India News  – India TV

ಸ್ವಲ್ಪ ಹೊತ್ತಿನಲ್ಲಿ ಕಟ್ಟಿದ ಹಗ್ಗವನ್ನು ಬಿಡಿಸಿಕೊಂಡು ಹೊರಗೆ ಬಂದ ಮನೆ ಮಾಲೀಕ ರಮೇಶ್, ಜೋರಾಗಿ ಕಿರುಚಾಡಿದ್ದು ಸ್ಥಳಕ್ಕೆ  ನೆರೆಹೊರೆಯ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ನಂತರ ಮನೆಗೆ ಅಳವಡಿಸಿದ್ದ ಸಿಸಿಟಿವಿ ದೃಶ್ಯ ರೆಕಾರ್ಡ್ ಆಗಿದ್ದ ಡಿ.ವಿ‌.ಆರ್ ಅನ್ನೂ ತೆಗೆದುಕೊಂಡು ಹೋಗಿದ್ದಾರೆ. ಉದ್ಯಮಿ ರಮೇಶ್ ಚೀಟಿ ವ್ಯವಹಾರ ಮಾಡ್ತಿದ್ದು, ಜೊತೆಗೆ ದೊಡ್ಡ ಮೊತ್ತದ ಪೈನಾನ್ಸ್ ವ್ಯವಹಾರ ಮಾಡುತ್ತಿದ್ದರು. ಹೀಗಾಗಿ ಮನೆಯಲ್ಲೇ ಲಕ್ಷಾಂತರ ನಗದು ಇರಿಸಿಕೊಂಡಿದ್ದರು. ಹೀಗಾಗಿ ಹಣದ ವ್ಯವಹಾರ ಅರಿತಿದ್ದವರೇ ಕೃತ್ಯ ಎಸಗಲಾಗಿದೆ. 

ಕೋಲಾರ ನಗರ ಪೊಲೀಸರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ್ದು, ಕೋಲಾರ ಎಸ್ಪಿ ದೇವರಾಜ್ ಭೇಟಿ ನೀಡಿ, ವಿಚಾರಣೆ ನಡೆಸಿದ್ದಾರೆ. ರಾತ್ರಿ 2 ಗಂಟೆವರೆಗೂ ಬಡಾವಣೆಯ ನಿವಾಸದ ಸುತ್ತಮುತ್ತಲ ಮನೆಗಳ ಸಿ.ಸಿ.ಟಿವಿ ಪರಿಶೀಲನೆ ನಡೆಸಿದ ಪೊಲೀಸರು, ಮೂವರು ವ್ಯಕ್ತಿಗಳು ಅನುಮಾನಾಸ್ಪದ ಓಡಾಡುವುದು ಹಾಗು ಘಟನೆ ನಡೆದಾಗ ತೆರಳಿದ ಒಂದು ಹುಂಡೈ ಕಾರಿನ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಆರೋಪಿಗಳ ಪತ್ತೆಗೆ ನಾಲ್ಕು ಸರ್ಕಲ್‌ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ತಂಡಗಳನ್ನ ರಚಿಸಲಾಗಿದ್ದು ಆದಷ್ಟು ಬೇಗನೇ ಆರೋಪಿಗಳನ್ನ ಪತ್ತೆಹಚ್ಚಲಾಗುವುದು ಎಂದು ಎಸ್ಪಿ ದೇವರಾಜ್ ತಿಳಿಸಿದ್ದಾರೆ.

A CBI officer allegedly robbed a businessman's home in Kolar city on Sunday night.