ಏರ್ಟೆಲ್ ಗ್ರಾಹಕರೇ ಎಚ್ಚರ ! ನಿಮ್ಮ ಹೆಸರಲ್ಲೇ ಸಿಮ್ ಪಡೆದು ಸೈಬರ್ ವಂಚನೆ ! ಏರ್ಟೆಲ್ ಎಕ್ಸಿಕ್ಯುಟಿವ್ ಗಳಿಬ್ಬರ ಬಂಧನ 

04-03-22 02:12 pm       Bengaluru Correspondent   ಕ್ರೈಂ

ಏರ್ಟೆಲ್ ಸಿಮ್ ಹೊಂದಿರುವ ಗ್ರಾಹಕರೇ ಎಚ್ಚರ. ನಿಮ್ಮ ಹೆಸರಲ್ಲೇ ಸಿಮ್ ಪಡೆದು ಸೈಬರ್ ವಂಚನೆ ಮಾಡೋರಿದ್ದಾರೆ, ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಸೈಬರ್ ವಂಚನೆ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ಏರ್ಟೆಲ್ ಕಂಪನಿಯ ಇಬ್ಬರು ಎಕ್ಸಿಕ್ಯುಟಿವ್ ಗಳನ್ನೇ ಬಂಧಿಸಿದ್ದಾರೆ‌. 

ಬೆಂಗಳೂರು, ಮಾ.4: ಏರ್ಟೆಲ್ ಸಿಮ್ ಹೊಂದಿರುವ ಗ್ರಾಹಕರೇ ಎಚ್ಚರ. ನಿಮ್ಮ ಹೆಸರಲ್ಲೇ ಸಿಮ್ ಪಡೆದು ಸೈಬರ್ ವಂಚನೆ ಮಾಡೋರಿದ್ದಾರೆ, ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಸೈಬರ್ ವಂಚನೆ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ಏರ್ಟೆಲ್ ಕಂಪನಿಯ ಇಬ್ಬರು ಎಕ್ಸಿಕ್ಯುಟಿವ್ ಗಳನ್ನೇ ಬಂಧಿಸಿದ್ದಾರೆ‌. 

ಹರ್ಷ(24) ಹಾಗೂ ಚೇತನ್(27) ಬಂಧಿತ ಆರೋಪಿಗಳು. ಕಳೆದ ಜನವರಿಯಲ್ಲಿ ರಾಜೇಶ್ವರ್ ಎಂಬ ಸೈಬರ್ ವಂಚಕನನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ರೇವಾ ಯುನಿವರ್ಸಿಟಿಯಲ್ಲಿ ಸೀಟು ಕೊಡಿಸೋದಾಗಿ ವಂಚಿಸಿದ್ದ ಆರೋಪಿಯನ್ನು ಬಂಧಿಸಲಾಗಿತ್ತು. ಆತನ ಸಿಮ್ ತಪಾಸಣೆ ನಡೆಸಿದಾಗ, ನಕಲಿ ಸಿಮ್ ಮೂಲಕ ಕರೆ ಮಾಡಿದ್ದು ಕಂಡುಬಂದಿತ್ತು. ಸೀಟು ಕೊಡಿಸುವುದಾಗಿ ಹೇಳಿ 1.25 ಲಕ್ಷ ರೂ. ವಂಚಿಸಿದ್ದ.  

ಇದೇ ರೀತಿ ಆರೋಪಿ ರಾಜೇಶ್ವರ್ ಹಲವರಿಗೆ ವಂಚಿಸಿರುವುದು ಪೊಲೀಸರ ವಿಚಾರಣೆಯಲ್ಲಿ ಪತ್ತೆಯಾಗಿತ್ತು. ಸಿಮ್ ಸಿಕ್ಕಿದ್ದು ಹೇಗೆ ಎಂದು ತಪಾಸಣೆ ನಡೆಸಿದ ವೇಳೆ ಏರ್ಟೆಲ್ ಕಂಪನಿಯ ಇಬ್ಬರು ಸೇಲ್ಸ್ ಎಕ್ಸಿಕ್ಯೂಟಿವ್ ಗಳೇ ಈತನಿಗೆ ಸಹಕಾರ ನೀಡಿರುವುದು ಗಮನಕ್ಕೆ ಬಂದಿತ್ತು. ಅದರಂತೆ, ಪೊಲೀಸರು ಸೈಬರ್ ವಂಚಕನಿಗೆ ಸಹಕಾರ ನೀಡಿರುವ ಆರೋಪದಲ್ಲಿ ಇಬ್ಬರು ಎಕ್ಸಿಕ್ಯುಟಿವ್ ಗಳನ್ನು ಬಂಧಿಸಿದ್ದಾರೆ‌. 

ನಮ್ಮ ಬಳಿಯಿಂದಲೇ ಹೆಚ್ಚುವರಿ ದಾಖಲಾತಿ ಪಡೆದು ಪ್ರತ್ಯೇಕ ಸಿಮ್ ಖರೀದಿ ಮಾಡುತ್ತಿದ್ದ ಇವರು, ಅದನ್ನ ಸೈಬರ್ ವಂಚಕರಿಗೆ ನೀಡುತ್ತಿದ್ದರು. ಏರ್ಟೆಲ್ ಕಚೇರಿಯಲ್ಲೇ ಕುಳಿತು ಸೈಬರ್ ವಂಚಕರ ಪರ ಕೆಲಸ ಮಾಡುತ್ತಿದ್ದರು. ಗ್ರಾಹಕರ ಬಳಿ ಹೆಚ್ಚುವರಿ ದಾಖಲಾತಿ ಶೇಖರಿಸಿ ಸಿಮ್ ಗಳನ್ನು ಪಡೆಯುತ್ತಿದ್ದ ಆರೋಪಿಗಳು, ಅದನ್ನು ಸೈಬರ್ ವಂಚಕರಿಗೆ ನೀಡುತ್ತಿದ್ದರು.

Bangalore Two Airtel executives staffs arrested for using customers sim and committing cyber crime. The duo have duped people in lakhs.