ಬ್ರೇಕಿಂಗ್ ನ್ಯೂಸ್
04-03-22 03:21 pm HK Desk news ಕ್ರೈಂ
ತುಮಕೂರು, ಮಾ.4: ಮಕ್ಕಳಿಲ್ಲದ ದಂಪತಿಯನ್ನೇ ಟಾರ್ಗೆಟ್ ಮಾಡಿಕೊಂಡು ಮಕ್ಕಳಾಗಲು ಔಷಧಿ ಕೊಡುತ್ತೇವೆಂದು ಹೇಳಿ ತಮ್ಮನ್ನು ಡಾಕ್ಟರ್ ದಂಪತಿಯೆಂದು ಹೇಳಿಕೊಂಡು 70ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ ಘಟನೆ ತುಮಕೂರಿನಲ್ಲಿ ಬೆಳಕಿಗೆ ಬಂದಿದ್ದು, ವಂಚಕ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಠಾಣೆಯ ಪೊಲೀಸರು ವಾಣಿ ಮತ್ತು ಮಂಜುನಾಥ್ ಎಂಬ ದಂಪತಿಯನ್ನು ಬಂಧಿಸಿದ್ದಾರೆ. ಕಾರಿನಲ್ಲಿಯೇ ಓಡಾಡುತ್ತಿದ್ದ ಇವರು, ತಮ್ಮನ್ನು ಡಾಕ್ಟರ್ ಎಂದು ಹೇಳಿಕೊಳ್ಳುತ್ತಿದ್ದರು. ವಾಣಿ ತನ್ನ ಕೊರಳಿಗೆ ಸ್ಟೆತಸ್ಕೋಪ್ ಸಿಕ್ಕಿಸಿಕೊಂಡು ಅಸಲಿ ಡಾಕ್ಟರ್ ರೀತಿಯಲ್ಲೇ ಪೋಸು ಕೊಡುತ್ತಿದ್ದಳು. ಮಕ್ಕಳಿಲ್ಲದ ದಂಪತಿಯ ಮನೆಗಳಿಗೆ ತೆರಳಿ, ನಾವು ಹೇಳಿದ ರೀತಿ ಕೇಳಿದರೆ ಮಕ್ಕಳಾಗುತ್ತದೆ. ಅದಕ್ಕಾಗಿ ನಾವು ಕೆಲವು ಔಷಧಿಗಳನ್ನು ಕೊಡುತ್ತೇವೆ, ಅದಕ್ಕೆ ಇಂತಿಷ್ಟು ಹಣ ಖರ್ಚಾಗುತ್ತದೆ ಎಂದು ಹೇಳಿ 2ರಿಂದ 5 ಲಕ್ಷ ರೂ.ಗಳ ಪ್ಯಾಕೇಜ್ ಫಿಕ್ಸ್ ಮಾಡುತ್ತಿದ್ದರು.
ಅಲ್ಲದೆ, ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬೇಕು. ಸೂಕ್ತ ಆಹಾರ ಸೇವಿಸಬೇಕೆಂದು ಸಲಹೆಯನ್ನೂ ನೀಡುತ್ತಿದ್ದರು. ನಮ್ಮ ಪ್ಯಾಕೇಜ್ ನಲ್ಲಿ ಇಂಜೆಕ್ಷನ್, ಪ್ರೋಟೀನ್ ಭರಿತ ಪೌಡರ್ ಗಳು ಇರುತ್ತವೆ. ನಿಯಮಿತವಾಗಿ ಆಹಾರ ಸ್ವೀಕರಿಸಿದರೆ ಸಾಕು, ಆಗಾಗ ಯಾವುದೇ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿ ಮಕ್ಕಳಾಗದ ದಂಪತಿಯನ್ನು ನಂಬಿಸುತ್ತಿದ್ದರು. ಇದೇ ರೀತಿಯ ಮಾತುಗಳಿಗೆ ಮರುಳಾಗಿ ಹಣ ಮತ್ತು ಆರೋಗ್ಯ ಕಳಕೊಂಡ ಮಹಿಳೆಯೊಬ್ಬರು ನೊಣವಿನಕೆರೆ ಪೊಲೀಸರಿಗೆ ದೂರು ನೀಡಿದ್ದರು.
ತನಿಖೆ ನಡೆಸಿದ ಪೊಲೀಸರು ನಕಲಿ ಡಾಕ್ಟರ್ ದಂಪತಿಯನ್ನು ಬಂಧಿಸಿದ್ದಾರೆ. ವಂಚನೆಗೊಳಗಾದ ದಂಪತಿ, ಇವರಿಂದ ಕಳೆದ ಆರು ತಿಂಗಳಿಂದ ಚಿಕಿತ್ಸೆ ಪಡೆದಿದ್ದಲ್ಲದೆ, ಸಾಕಷ್ಟು ಹಣವನ್ನೂ ಕಳಕೊಂಡಿದ್ದರು. ತಿಪಟೂರು ತಾಲೂಕಿನ ಬೆಳಗರಹಳ್ಳಿ ಗ್ರಾಮದ ಐದಾರು ಮಹಿಳೆಯರು ವಂಚಕ ದಂಪತಿಯಿಂದ ಮೋಸಕ್ಕೆ ಒಳಗಾಗಿದ್ದು ತನಿಖೆಯಲ್ಲಿ ಕಂಡುಬಂದಿದೆ. ಪ್ರತೀ ಮಹಿಳೆಯಿಂದ 2.5 ಲಕ್ಷ ರೂ. ಹಣವನ್ನು ಪಡೆದು ವಂಚಿಸಿದ್ದು ತನಿಖೆಯಲ್ಲಿ ಗೊತ್ತಾಗಿದೆ.
ನಕಲಿ ಡಾಕ್ಟರ್ ದಂಪತಿ ಇಂಜೆಕ್ಷನ್ ನೀಡಿದ್ದರಿಂದ ಮಹಿಳೆಯೊಬ್ಬರಿಗೆ ಆರೋಗ್ಯದಲ್ಲಿ ಅಡ್ಡ ಪರಿಣಾಮ ಉಂಟಾಗಿತ್ತು. ಆರೋಗ್ಯದಲ್ಲಿ ವೈಪರೀತ್ಯ ಎದುರಾಗಿದ್ದನ್ನು ತಿಳಿಸಿದಾಗ, ನಕಲಿ ಡಾಕ್ಟರ್ ವಾಣಿ ಅದಕ್ಕಾಗಿ ಮತ್ತಷ್ಟು ಮಾತ್ರೆ, ಔಷಧಿಗಳನ್ನು ಕೊಟ್ಟಿದ್ದಳು. ಅದನ್ನು ಸ್ವೀಕರಿಸಿದ ಬಳಿಕ ಮಹಿಳೆಗೆ ಗಂಭೀರ ಸ್ಥಿತಿ ಉಂಟಾಗಿದ್ದು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಮೊದಲೇ ಕಿಡ್ನಿ, ಹೃದಯ ಸಂಬಂಧಿ ಕಾಯಿಲೆ ಇದ್ದುದರಿಂದ ಮಹಿಳೆಯ ಸ್ಥಿತಿ ಬಿಗಡಾಯಿಸಿತ್ತು. ಅಲ್ಲಿ ಪರೀಕ್ಷೆ ನಡೆಸಿದಾಗ, ಆರೋಪಿ ಮಹಿಳೆ ನೀಡಿದ್ದ ಇಂಜೆಕ್ಷನ್ ಬಗ್ಗೆ ವೈದ್ಯರಿಗೆ ತಿಳಿಸಿದ್ದರು. ಈ ಬಗ್ಗೆ ವಾಣಿಯನ್ನು ಮಹಿಳೆ ಸಂಪರ್ಕಿಸಿದಾಗ, ತನ್ನ ತಪ್ಪಾಗಿರುವುದಾಗಿ ಕ್ಷಮೆ ಕೇಳಿದ್ದಾರೆ. ವಂಚನೆ ಗೊತ್ತಾಗುತ್ತಲೇ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ವಂಚಕ ದಂಪತಿಯನ್ನು ಸಕಲೇಶಪುರದಲ್ಲಿ ಬಂಧಿಸಿದ್ದು, ಅವರಿಂದ ಹತ್ತು ಲಕ್ಷ ರೂ. ನಗದು ಮತ್ತು 250 ಗ್ರಾಮ್ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ದಂಪತಿ ಡಾಕ್ಟರ್ ಲೋಗೊ ಬಳಸಿ ಓಡಾಡುತ್ತಿದ್ದ ಮಹೀಂದ್ರಾ ಕಂಪನಿಯ ಕಾರನ್ನೂ ವಶಕ್ಕೆ ಪಡೆದಿದ್ದಾರೆ. ತಿಪಟೂರು ತಾಲೂಕು ಒಂದರಲ್ಲೇ 70ಕ್ಕೂ ಹೆಚ್ಚು ದಂಪತಿಗೆ ಇದೇ ರೀತಿ ಮೋಸ ಮಾಡಿ, ಹಣ ಪೀಕಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ವಂಚನೆಗೊಳಗಾದವರಲ್ಲಿ ಹೆಚ್ಚಿನವರು ಸಮಾಜದಲ್ಲಿ ಮರ್ಯಾದೆಗೆ ಅಂಜಿ ಪೊಲೀಸ್ ದೂರು ಕೊಡದೇ ದೂರವುಳಿದಿದ್ದರಿಂದ ದಂಪತಿಯ ವಂಚನೆ ಪುರಾಣ ಮತ್ತಷ್ಟು ಬೆಳೆದಿತ್ತು.
The police from here have arrested a couple which targetted childless couples and cheated them by promising them to have children.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
12-01-26 01:54 pm
Mangaluru Staffer
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm