ಬ್ರೇಕಿಂಗ್ ನ್ಯೂಸ್
07-03-22 10:19 am Bengaluru Correspondent ಕ್ರೈಂ
ಬೆಂಗಳೂರು, ಮಾ.7: ಮನೆಯ ಮೇಲಿನ ಮಹಡಿಗೆ ಬಾಡಿಗೆ ಬಂದಿದ್ದ ಚಾಲಾಕಿ ಸೋದರಿಯರಿಬ್ಬರು ಮನೆ ಮಾಲೀಕರನ್ನೇ ದೋಚಿ, ಹಣ, ಚಿನ್ನದ ಒಡವೆ ಕದ್ದು ಎಸ್ಕೇಪ್ ಆಗಿ ಪೊಲೀಸರಿಗೆ ಸಿಕ್ಕಿಬಿದ್ದ ಪ್ರಸಂಗ ನಡೆದಿದೆ.
ಹಣ, ಚಿನ್ನ ಕದ್ದು ಪರಾರಿಯಾಗಿದ್ದ ಅಕ್ಕ - ತಂಗಿಯನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಸುಮಯ್ಯ ತಾಜ್( 23) ಮತ್ತು ಆಕೆಯ ಸೋದರಿ ನಾಜೀಮಾ ತಾಜ್(32), ನಾಜೀಮಾಳ ಪತಿ ಅಕ್ಬರ್ (38) ಬಂಧಿತರು.

ಜಯನಗರ 1 ನೇ ಬ್ಲಾಕ್ ನ ದಯಾನಂದ ನಗರದಲ್ಲಿ ಕಳೆದ ಫೆ.19 ರಂದು ಘಟನೆ ನಡೆದಿತ್ತು. ಜಬಿ ಹಾಗೂ ಹಾಜಿರಾ ದಂಪತಿ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಬೀರು ಬೀಗ ಒಡೆದು 2.34 ಲಕ್ಷ ಮೌಲ್ಯದ 58 ಗ್ರಾಂ ಚಿನ್ನಾಭರಣ,10 ಲಕ್ಷ ನಗದು ಹಣವನ್ನು ಕದ್ದು ಪರಾರಿಯಾಗಿದ್ದ ಅಕ್ಕ ತಂಗಿಯನ್ನು ಬಂಧಿಸಿದ್ದಾರೆ.

ಜಬಿ ಹಾಗೂ ಹಾಜಿರಾ ದಂಪತಿಗೆ 13 ವರ್ಷದ ಮಗ ಹಾಗೂ ಪಿಯುಸಿ ಕಲಿಯುವ ಮಗಳೊಬ್ಬಳಿದ್ದಾಳೆ. ಮೊದಲ ಮಹಡಿಯಲ್ಲಿ ಮಾಲೀಕರು ವಾಸವಿದ್ದು, ಎರಡನೇ ಮಹಡಿಗೆ ಆರೋಪಿ ಸೋದರಿಯರು ಇತ್ತೀಚೆಗೆ ಬಾಡಿಗೆಗೆ ಬಂದಿದ್ದರು. ದಂಪತಿಯ ಮಗ ಟೆರಸ್ ಗೆ ಬಂದು ಆಟ ಆಡುವಾಗಲೆಲ್ಲ ಮನೆಯಲ್ಲಿ ಹಣ ಇರುವ ವಿಚಾರವನ್ನು ಹೇಳಿಕೊಳ್ತಿದ್ದ. ಮಗಳ ಮದುವೆ ಸಿದ್ಧತೆಯಲ್ಲಿದ್ದ ದಂಪತಿ ಲಾರಿಯನ್ನು ಮಾರಿ ಹಣ, ಒಡವೆ ತಂದಿಟ್ಟಿದ್ದರು.

ಮನೆಯಲ್ಲಿ ಸಾಕಷ್ಟು ಹಣ ಮತ್ತು ಚಿನ್ನ ಇರುವುದನ್ನು ತಿಳಿದು ಖತರ್ನಾಕ್ ಸಿಸ್ಟರ್ಸ್ ಮನೆಯನ್ನು ದೋಚಲು ಪ್ಲಾನ್ ಹಾಕಿದ್ದರು. ಫೆ.19 ರಂದು ಮಗಳು ಕಾಲೇಜಿಗೆ ಹೋಗಿದ್ದರೆ,13 ವರ್ಷದ ಮಗ ಟೆರಸ್ ಮೇಲೆ ಆಟವಾಡಿಕೊಳ್ತಿದ್ದ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಮನೆಯಾಕೆ ಹಾಜಿರಾ ಸಂಬಂಧಿಯೊಬ್ಬರನ್ನು ನೋಡಲೆಂದು ಆಸ್ಪತ್ರೆಗೆ ಹೋಗಿದ್ದರು. ಇದೇ ವೇಳೆ ಆರೋಪಿಗಳು ಕೃತ್ಯವೆಸಗಿದ್ದರು. ನಕಲಿ ಕೀ ಬಳಸಿ ಮನೆ ಒಳಗೆ ಎಂಟ್ರಿ ಕೊಟ್ಟಿದ್ದ ಸೋದರಿಯರು, ಆರೋಪಿ ನಾಜಿಮಾಳ ಪತಿ ಅಕ್ಬರ್ ಜೊತೆ ಸೇರಿ ಮನೆಯ ಕಪಾಟನ್ನು ಕಬ್ಬಿಣದ ವಸ್ತುವಿನಿಂದ ಮೀಟಿ ಬೀಗ ಒಡೆದು ಹಣ, ಒಡವೆ ಕಳ್ಳತನ ಮಾಡಿದ್ದರು.

ಕಳವುಗೈದ ಬಳಿಕ ಸೋದರಿಯರು ಬಾಡಿಗೆ ಮನೆ ಬಿಟ್ಟು ತಂದೆಯ ಮನೆ ತುಮಕೂರಿಗೆ ಎಸ್ಕೇಪ್ ಆಗಿದ್ದರು. ಇತ್ತ ಮನೆಮಂದಿ ಕಳವು ವಿಷಯ ತಿಳಿದು ಪೊಲೀಸ್ ದೂರು ನೀಡಿದ್ದರೆ, ಸೋದರಿಯರು ಕದ್ದ ದುಡ್ಡಲ್ಲಿ ಶೋಕಿ ಮಾಡಲು ಮುಂದಾಗಿದ್ದರು. ಕದ್ದ ಹಣದಲ್ಲಿ 14 ಚೂಡಿದಾರ ಸೇರಿದಂತೆ ಹಲವಾರು ಬೆಲೆಬಾಳುವ ಬಟ್ಟೆಬರೆಗಳನ್ನು ಖರೀದಿಸಿದ್ದರು. ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು ಸದ್ಯ ಬಂಧಿತರಿಂದ 4 ಲಕ್ಷ ನಗದು, 2.79 ಲಕ್ಷ ಮೌಲ್ಯದ ಆಭರಣ ವಶಕ್ಕೆ ಪಡೆದಿದ್ದಾರೆ.
Bangalore Two sisters held for theft at the house of their house owner around 10 lakhs cash and 2.34 lakhs gold has been recovered.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
12-01-26 01:54 pm
Mangaluru Staffer
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm