ಬ್ರೇಕಿಂಗ್ ನ್ಯೂಸ್
08-03-22 02:12 pm Bengalore Correspondent ಕ್ರೈಂ
ಬೆಂಗಳೂರು, ಮಾ.8: ಮುಂಬೈನಲ್ಲಿ ಕೊಲೆ, ದರೋಡೆ, ಹಫ್ತಾ ವಸೂಲಿ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಇಲಿಯಾಸ್ ಅಬ್ದುಲ್ ಆಸಿಫ್ ಅಕಾ ಬಕ್ಕಣ್ಣ ಎಂಬಾತನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮುಂಬೈನಲ್ಲಿ ಕೊಲೆ, ಕೊಲೆಯತ್ನ, ದರೋಡೆ, ಹಫ್ತಾ , ಡಕಾಯಿತಿ ಹೀಗೆ 37 ಪ್ರಕರಣಗಳನ್ನು ಆರೋಪಿ ಎದುರಿಸುತ್ತಿದ್ದ. ಆರೋಪಿ ಇಲಿಯಾಸ್, ಬೆಂಗಳೂರಿನ ರೆಸ್ಟೋರೆಂಟ್ ಒಂದರಲ್ಲಿ ಅಡಗಿಕೊಂಡಿರುವ ಬಗ್ಗೆ ಮಾಹಿತಿ ತಿಳಿದು ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶಿ ಕೃಷ್ಣ , ಎಎಸ್ಪಿ ಲಕ್ಷ್ಮೀ ಗಣೇಶ್, ಆನೇಕಲ್ ಡೆಪ್ಯುಟಿ ಎಂ. ಮಲ್ಲೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.
ಪೊಲೀಸರು ಬೆನ್ನುಬಿದ್ದಾಗ, ಆರೋಪಿ ಇಲಿಯಾಸ್ ತನ್ನಲ್ಲಿದ್ದ ಗನ್ ತೆಗೆದು ತಿರುಗಿ ಬೀಳಲು ಸಜ್ಜಾಗಿದ್ದ. ಆದರೆ ಪೊಲೀಸರು ಶಸ್ತ್ರ ಸಜ್ಜಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿದ್ದರಿಂದ ಪ್ರತಿದಾಳಿ ನಡೆಸಲು ಮುಂದಾಗದೆ ಶರಣಾಗಿದ್ದಾನೆ. ಆರೋಪಿ ಬಳಿಯಿಂದ ನಾಲ್ಕು ಸಜೀವ ಗುಂಡು, ಒಂದು ಪಿಸ್ತೂಲ್, 15 ಸಿಮ್ ಕಾರ್ಡ್, ಆರು ಮೊಬೈಲ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುಂಬೈನಲ್ಲಿ ಇತ್ತೀಚೆಗೆ ಸಿಕಂದರ್ ರಾಜು ಲೂಲಾಡಿಯಾ ಎಂಬ ಉದ್ಯಮಿಯನ್ನು ಆತನ ಕಚೇರಿಯಲ್ಲೇ ಹಣಕ್ಕಾಗಿ ಕಬ್ಬಣದ ರಾಡ್ ನಿಂದ ಹೊಡೆದು ಹಲ್ಲೆ ಮಾಡಲಾಗಿತ್ತು. ಅದರಲ್ಲಿ ಪ್ರಮುಖ ಆರೋಪಿಯಾಗಿದ್ದ ಇಲಿಯಾಸ್ ಅಬ್ದುಲ್ ಆಸಿಫ್ ನನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು. ಮುಂಬೈ ನಗರ ಮತ್ತು ಮಹಾರಾಷ್ಟ್ರದಾದ್ಯಂತ ಆರೋಪಿ ಪತ್ತೆಗೆ ಹುಡುಕಾಟ ನಡೆದಿತ್ತು. ಹಾಗಾಗಿ ಕರ್ನಾಟಕಕ್ಕೆ ಬಂದು ದಕ್ಷಿಣ ಬೆಂಗಳೂರಿನ ನಿಗೂಢ ಜಾಗದಲ್ಲಿ ಅವಿತುಕೊಂಡಿದ್ದ. ಈ ಬಗ್ಗೆ ಮುಂಬೈ ಪೊಲೀಸರು ನೀಡಿದ ಸುಳಿವು ಆಧರಿಸಿ ಬೆಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
The Karnataka Police have arrested one of the most wanted Mumbai gangsters, Iliyas Abdul Asif a.k.a Bhackana, in an early morning operation here on Tuesday.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:46 am
HK News Staffer
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
15-09-26 10:31 am
HK News Staffer
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am