ಬ್ರೇಕಿಂಗ್ ನ್ಯೂಸ್

ದ್ವೇಷ ಹರಡುವ ಮಂಗಳೂರು ಮುಸ್ಲಿಮ್ ಪೇಜ್ ಪ್ರಕರಣದಲ್ಲಿ ಸಿಐಡಿ ತನಿಖೆ ; ಗಲ್ಫ್ ರಾಷ್ಟ್ರದಲ್ಲಿ ಕುಳಿತು ಹ್ಯಾಂಡಲಿಂಗ್ ಪತ್ತೆ !

08-03-22 04:05 pm       Mangalore Correspondent   ಕ್ರೈಂ

ಮಂಗಳೂರು ಮುಸ್ಲಿಮ್ಸ್ ಪೇಜ್ ಹೆಸರಲ್ಲಿ ದ್ವೇಷ ಹರಡುವ, ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಪೋಸ್ಟ್ ಹಾಕುತ್ತಿರುವ ಪ್ರಕರಣವನ್ನು ರಾಜ್ಯ ಸರಕಾರ ಸಿಐಡಿ ತನಿಖೆಗೆ ಒಪ್ಪಿಸಿದೆ.

ಮಂಗಳೂರು, ಮಾ.8: ಮಂಗಳೂರು ಮುಸ್ಲಿಮ್ಸ್ ಪೇಜ್ ಹೆಸರಲ್ಲಿ ದ್ವೇಷ ಹರಡುವ, ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಪೋಸ್ಟ್ ಹಾಕುತ್ತಿರುವ ಪ್ರಕರಣವನ್ನು ರಾಜ್ಯ ಸರಕಾರ ಸಿಐಡಿ ತನಿಖೆಗೆ ಒಪ್ಪಿಸಿದೆ.

ಇತ್ತೀಚೆಗೆ ಶಿವಮೊಗ್ಗದಲ್ಲಿ ಕೊಲೆಯಾದ ಹಿಂದು ಕಾರ್ಯಕರ್ತ ಹರ್ಷ ಪ್ರಕರಣದಲ್ಲಿ ಬೀದಿ ನಾಯಿ ಸತ್ತಿದ್ದಾನೆ ಎಂಬ ರೀತಿಯಲ್ಲಿ ಪೋಸ್ಟ್ ಹಾಕಿದ್ದು ಮತ್ತು ಅದರಲ್ಲಿ ಸಚಿವ ಈಶ್ವರಪ್ಪ ಅವರಿಗೆ ಕೊಲೆ ಪ್ರಕರಣದಲ್ಲಿ ಶಾಮೀಲಾತಿ ಇದೆಯೆಂಬ ರೀತಿಯಲ್ಲಿ ಪೋಸ್ಟ್ ಹಾಕಿದ್ದು ಕಂಡುಬಂದಿತ್ತು. ಈ ಪೋಸ್ಟ್ ವೈರಲ್ ಆಗಿದ್ದಲ್ಲದೆ, ಮಂಗಳೂರು ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿದ್ದರು.

ಇದೇ ಮಂಗಳೂರು ಮುಸ್ಲಿಮ್ಸ್ ಪೇಜ್ ಹೆಸರಲ್ಲಿ ಹಿಜಾಬ್ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ಜಡ್ಜ್ ವಿರುದ್ಧವೂ ಅವಹೇಳನಕಾರಿ ಪೋಸ್ಟ್ ಹಾಕಲಾಗಿತ್ತು. ಫೆ.12ರಂದು ಈ ಪೋಸ್ಟ್ ಹಾಕಲಾಗಿತ್ತು. ನ್ಯಾಯಾಧೀಶರಿಗೆ ಅವಹೇಳನ ಮಾಡಿದ ವಿಚಾರದಲ್ಲಿ ಬೆಂಗಳೂರು ಸೈಬರ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಆ ಪೋಸ್ಟನ್ನು ಬೇರೆ ಬೇರೆ ಜಾಲತಾಣದಲ್ಲಿ ಷೇರ್ ಮಾಡಿದ್ದ ಕಾರಣಕ್ಕೆ ಮೊಹಮ್ಮದ್ ಶಾಫಿಕ್ ಎಂಬ ವ್ಯಕ್ತಿಯ ವಿರುದ್ಧವೂ ಕೇಸು ದಾಖಲಿಸಿದ್ದರು.

Viral video of gang's attempt to snatch woman's bag is part of police mock  drill: Mangaluru police c- The New Indian Express

ಇದೀಗ ಒಟ್ಟು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯದ ಗೃಹ ಇಲಾಖೆ, ಸದ್ರಿ ಪ್ರಕರಣದ ತನಿಖೆಯನ್ನು ಸಿಇಡೈ ತಂಡಕ್ಕೆ ಒಪ್ಪಿಸಿದೆ. ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ದೃಢಪಡಿಸಿದ್ದು, ತನಿಖೆಗೆ ನಾವು ಸಹಕರಿಸುತ್ತೇವೆ. ಸಿಐಡಿ ಜೊತೆಗೆ ರಾಜ್ಯ ಗುಪ್ತಚರ ಇಲಾಖೆ ಮತ್ತು ಕೇಂದ್ರೀಯ ಗುಪ್ತಚರ ಇಲಾಖೆಯೂ ತನಿಖೆ ನಡೆಸಲಿದೆ. ಪ್ರಕರಣದಲ್ಲಿ ಗಲ್ಫ್ ರಾಷ್ಟ್ರದಲ್ಲಿ ಕುಳಿತುಕೊಂಡ ವ್ಯಕ್ತಿಗಳು ಈ ಪೇಜ್ ಹ್ಯಾಂಡಲ್ ಮಾಡುತ್ತಿರುವುದು ಕಂಡುಬಂದಿದೆ. ಇದರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ, ಅಪರಾಧಿಗಳನ್ನು ಪತ್ತೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಕಳೆದ 2016ರಲ್ಲಿ ಮಂಗಳೂರು ಮುಸ್ಲಿಮ್ ಪೇಜ್ ಹೆಸರಲ್ಲಿ ಕಟೀಲು ದೇವರನ್ನು ನಿಂದಿಸಿ ಪೋಸ್ಟ್ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಪದೇ ಪದೇ ಪೋಸ್ಟ್ ಹಾಕುತ್ತಿರುವುದು ಕಂಡುಬಂದಿತ್ತು. ಆನಂತರ ಪೊಲೀಸರು ಆ ಖಾತೆಯನ್ನು ಡಿಲೀಟ್ ಮಾಡುವ ಕೆಲಸ ಮಾಡಿದ್ದರು. ಆ ಸಂದರ್ಭದಲ್ಲಿಯೂ ಅದನ್ನು ಹ್ಯಾಂಡಲ್ ಮಾಡುತ್ತಿದ್ದ ವ್ಯಕ್ತಿಗಳು ಗಲ್ಫ್ ರಾಷ್ಟ್ರದಲ್ಲಿರುವುದು ಕಂಡುಬಂದಿತ್ತು. ಆದರೆ, ಯಾರು ನಿರ್ದಿಷ್ಟವಾಗಿ ಈ ಕೆಲಸ ಮಾಡುತ್ತಿದ್ದಾರೆ ಅನ್ನುವುದು ಪತ್ತೆಯಾಗಿರಲಿಲ್ಲ. ಆ ಘಟನೆಯ ಬಗ್ಗೆ ಅಂದಿನ ಪೊಲೀಸರು ನ್ಯಾಯಾಲಯಕ್ಕೆ ಅದೇ ರೀತಿ ಮಾಹಿತಿ ನೀಡಿದ್ದರು.

Mangalore Muslim Facebook page now investigated by CID, handling from Gulf country suspected. This Facebook page posted a celebration post for the Murder of Harsha who was killed in Shivamogga.