ಬ್ರೇಕಿಂಗ್ ನ್ಯೂಸ್
09-03-22 08:33 pm HK Desk news ಕ್ರೈಂ
ತುಮಕೂರು, ಮಾ.9 : 18ರ ಹರೆಯದ ಯುವತಿಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿದ್ದಲ್ಲದೆ, ಗರ್ಭಪಾತದ ಮಾತ್ರೆ ನೀಡಿದ್ದರಿಂದ ಆಕೆ ದುರಂತ ಸಾವಿಗೀಡಾದ ಘಟನೆ ತುಮಕೂರಿನಲ್ಲಿ ಬೆಳಕಿಗೆ ಬಂದಿದ್ದು, ಆರೋಪಿ ಮಾಜಿ ಕಾರ್ಪೊರೇಟರ್ ಮತ್ತು ಕಾಂಗ್ರೆಸ್ ಕಾರ್ಯಕರ್ತನಾಗಿರುವ ರಾಜೇಂದ್ರ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ರಾಜೇಂದ್ರ ಕುಮಾರ್, ತುಮಕೂರು ಸಿಎಸ್ಐ ಚರ್ಚ್ ನಲ್ಲಿ ಸಭಾಪಾಲನಾ ಸದಸ್ಯನಾಗಿದ್ದು, ಸಂಭಾವಿತನ ರೀತಿ ಸೋಗು ಹಾಕುತ್ತಿದ್ದ. 2013ರಿಂದ 2018ರ ನಡುವೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ತುಮಕೂರು ಪಾಲಿಕೆಯಲ್ಲಿ ನಾಮನಿರ್ದೇಶಿತ ಸದಸ್ಯನೂ ಆಗಿದ್ದ. ಈ ವೇಳೆ ತುಮಕೂರು ಜಿಲ್ಲಾಧಿಕಾರಿ ಕಚೇರಿಯ ಬಳಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಸಂತೋಷಿ ಸ್ಟೆಲ್ಲಾ ಎಂಬ ಮಹಿಳೆಯ ಪರಿಚಯ ಆಗಿತ್ತು. ತಾನೊಬ್ಬ ಚರ್ಚ್ ಕಮಿಟಿ ಸದಸ್ಯನೆಂದು ಪರಿಚಯ ಮಾಡಿಕೊಂಡಿದ್ದ ರಾಜೇಂದ್ರ ಕುಮಾರ್, ಮಹಿಳೆಯನ್ನು ಚರ್ಚ್ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಿದ್ದ. ಚರ್ಚಿನ ಪ್ರತೀ ಕಾರ್ಯಕ್ರಮದಲ್ಲೂ ಮುಂಚೂಣಿಯಲ್ಲಿ ಇರುತ್ತಿದ್ದ ರಾಜೇಂದ್ರ ಕುಮಾರ್ ಗಣ್ಯ ವ್ಯಕ್ತಿಯ ರೀತಿ ಪೋಸು ಕೊಡುತ್ತಿದ್ದ.
ಕಳೆದ ಬಾರಿ ಕೊರೊನಾ ಲಾಕ್ಡೌನ್ ಆಗಿದ್ದಾಗ ಸಂತೋಷಿ ಸ್ಟೆಲ್ಲಾ ಅವರ ಮನೆಗೆ ಕೊರೊನಾ ಕಿಟ್ ವಿತರಣೆಗೆಂದು ರಾಜೇಂದ್ರ ಕುಮಾರ್ ಬಂದಿದ್ದ. ಈ ವೇಳೆ, ಮನೆಯಲ್ಲಿ ತಾಯಿ ಮತ್ತು ಆಕೆಯ ಹದಿಹರೆಯದ ಮಗಳು ಗ್ರೇಸ್ ಕೀರ್ತನಾ ಮಾತ್ರ ಇರುವುದನ್ನು ನೋಡಿದ್ದ. ಆನಂತರ ತಾಯಿ, ಮಗಳಿಗೆ ಸಹಾಯ ಮಾಡುವ ನೆಪದಲ್ಲಿ ಆಗಾಗ ಮನೆಗೆ ಬಂದು ಹೋಗುತ್ತಿದ್ದ ರಾಜೇಂದ್ರ ಕುಮಾರ್, ಈ ವೇಳೆ ಹದಿಹರೆಯದ ಚೆಲುವೆ ಕೀರ್ತನಾ ಮೇಲೆ ಕಣ್ಣು ಹಾಕಿದ್ದ.ತಾಯಿ ಇಲ್ಲದ ವೇಳೆ ಮಗಳ ಜೊತೆ ಚಕ್ಕಂದ.
ತಾಯಿ ಇಲ್ಲದ ವೇಳೆ ಮನೆಗೆ ಬಂದು ಮಗಳನ್ನು ಪುಸಲಾಯಿಸಿ, ಚಕ್ಕಂದವಾಡಲು ಆರಂಭಿಸಿದ್ದ. ತಾಯಿಗೆ ತಿಳಿಯದ ರೀತಿ ಮಗಳ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದು, ಆಕೆ ಗರ್ಭವತಿ ಆದಾಗ ಗರ್ಭಪಾತದ ಮಾತ್ರೆ ನೀಡುತ್ತಿದ್ದ. ಪದೇ ಪದೇ ಈ ರೀತಿ ಆಗಿದ್ದರಿಂದ 18 ವರ್ಷದ ಗ್ರೇಸ್ ಕೀರ್ತನಾಗೆ ಇತ್ತೀಚೆಗೆ ಬ್ಲೀಡಿಂಗ್ ಆಗಿ ಹೊಟ್ಟೆ ನೋವು ತೀವ್ರ ಆಗಿತ್ತು. ಗರ್ಭಪಾತ ಮಾತ್ರೆಯ ಅಡ್ಡ ಪರಿಣಾಮದಿಂದಾಗಿ ಹೊಟ್ಟೆ ನೋವು ಆಗಿದ್ದರೂ, ಅದನ್ನು ಮರೆಮಾಚಿ ರಾಜೇಂದ್ರ ಕುಮಾರ್ ತುಮಕೂರಿನಲ್ಲಿ ತನ್ನ ಪರಿಚಯದ ವೈದ್ಯರ ಬಳಿ ಕೊಂಡೊಯ್ದು ಚಿಕಿತ್ಸೆ ಕೊಡಿಸಿದ್ದ. ಇಷ್ಟಾದರೂ, ಮಗಳಿಗಾದ ಸ್ಥಿತಿಯ ಬಗ್ಗೆ ತಾಯಿಗೆ ಗೊತ್ತಿರಲಿಲ್ಲ. ರಾಜೇಂದ್ರ ಕುಮಾರ್ ಅತ್ಯಾಚಾರ ಎಸಗಿದ್ದಾಗಲೀ, ಅದರಿಂದ ಸೈಡ್ ಇಫೆಕ್ಟ್ ಆಗಿದ್ದಾಗಲೀ ತಿಳಿದಿರಲಿಲ್ಲ.ಮಾತ್ರೆ ಅಡ್ಡ ಪರಿಣಾಮದಿಂದಲೇ ಸಾವು.
ಆದರೆ ರಾಜೇಂದ್ರ ಕುಮಾರ್ ಆಗಾಗ ಮನೆಗೆ ಬರುತ್ತಿದ್ದುದು, ಮಗಳ ಜೊತೆ ಸಲುಗೆ ಇರಿಸಿದ್ದರ ಬಗ್ಗೆ ತಾಯಿಗೆ ಅನುಮಾನಗಳಿದ್ದವು. ಈ ಬಗ್ಗೆ ರಾಜೇಂದ್ರ ಕುಮಾರ್ ವಿರುದ್ಧ ತರಾಟೆ ಮಾಡಿದ್ದರೂ, ಆತ ಪ್ರಭಾವಿಯಾಗಿದ್ದರಿಂದ ಕ್ಯಾರ್ ಮಾಡಿರಲಿಲ್ಲ. ಈ ನಡುವೆ, ಕೀರ್ತನಾಗೆ ಹೊಟ್ಟೆ ನೋವು ಬಿಗಡಾಯಿಸಿದ್ದರಿಂದ ಆಕೆಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೀರ್ತನಾ ಮೃತಪಟ್ಟಿದ್ದಳು. ಆಕೆಯನ್ನು ಬಳಿಕ ರಾಜೇಂದ್ರ ಕುಮಾರ್ ಮತ್ತು ಸಂತೋಷ್ ಸ್ಟೆಲ್ಲಾ ಇನ್ನಿತರ ಕುಟುಂಬಸ್ಥರು ಸೇರಿ ಬೆಂಗಳೂರಿನ ಶಾಂತಿನಗರದ ಬಳಿಯ ಕ್ರಿಶ್ಚಿಯನ್ ರುದ್ರಭೂಮಿಯಲ್ಲಿ ದಫನ ಮಾಡಿದ್ದರು. ಮಗಳಿಗಾದ ದುರಂತವನ್ನು ಹಳಿಯುತ್ತಾ ಒಬ್ಬಂಟಿ ತಾಯಿ ಬಳಿಕ ತುಮಕೂರಿನ ಮನೆ ಸೇರಿದ್ದಳು.ಆರೋಪಿಯ ಕೃತ್ಯಕ್ಕೆ ಸಾಕ್ಷಿ ನೀಡಿತ್ತು ಮೊಬೈಲ್.
ಒಂದು ವಾರದ ಬಳಿಕ ಸಂತೋಷಿ ಸ್ಟೆಲ್ಟಾ ತನ್ನ ಮಗಳು ಕೀರ್ತನಾ ಬಳಸುತ್ತಿದ್ದ ಮೊಬೈಲನ್ನು ತೆಗೆದು ನೋಡಿದ್ದಾರೆ. ಮೊಬೈಲ್ ಚಾಟಿಂಗ್ ಮತ್ತು ರಾಜೇಂದ್ರ ಕುಮಾರ್ ಗೆ ಕಳಿಸಿದ್ದ ವಾಯ್ಸ್ ಮೆಸೇಜ್ ಕೇಳಿದ ತಾಯಿಗೆ ಶಾಕ್ ಆಗಿತ್ತು. ತನಗೆ ಆಗಿರುವ ಈ ಸ್ಥಿತಿಗೆ ರಾಜೇಂದ್ರ ಕುಮಾರ್ ಕಾರಣ ಅನ್ನುವ ಬಗ್ಗೆ ಆಕೆಯೇ ವಾಯ್ಸ್ ಮೆಸೇಜ್ ಕಳಿಸಿದ್ದಳು. ನಿರಂತರ ಲೈಂಗಿಕ ಕಿರುಕುಳ ನೀಡುತ್ತಿದ್ದ ವಿಚಾರ, ಇಬ್ಬರ ಮಾತುಕತೆಗಳು, ಅಲ್ಲದೆ ಕೆಲವು ವಿಡಿಯೋ, ಫೋಟೋಗಳು ಮೊಬೈಲಿನಲ್ಲಿ ದಾಖಲಾಗಿದ್ದವು. 50 ವರ್ಷದ ರಾಜೇಂದ್ರ ಕುಮಾರ್, ಮಗಳ ಜೊತೆಗಿರುತ್ತಿದ್ದ ಫೋಟೋಗಳು ಕೂಡ ಮೊಬೈಲಿನಲ್ಲಿದ್ದವು. ಗರ್ಭಪಾತದ ಮಾತ್ರೆ ನುಂಗಿದ್ದು, ಅದರಿಂದ ಆಘಾತ ಆಗಿರುವುದು, ಹೊಟ್ಟೆನೋವು, ಅದರ ಅಡ್ಡ ಪರಿಣಾಮಗಳ ಬಗ್ಗೆಯೂ ಮಗಳು ರಾಜೇಂದ್ರನಿಗೆ ಹೇಳಿಕೊಂಡಿದ್ದಳು.
ತಾಯಿಗೆ ಈ ಬಗ್ಗೆ ಹೇಳಿದರೆ ಶಾಕ್ ಆಗುತ್ತೆ ಎಂದು ಹೇಳದೇ ಉಳಿದಿದ್ದ ವಿಚಾರಗಳು ಮೊಬೈಲ್ ಮೂಲಕ ತಿಳಿಯುತ್ತಿದ್ದಂತೆ ಸಂತೋಷಿ ಸ್ಟೆಲ್ಲಾ, ತುಮಕೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಸೆಕ್ಷನ್ 302, 201, 504, 506, 34 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮೊಬೈಲಿನಲ್ಲಿದ್ದ ಸಾಕ್ಷ್ಯದಿಂದಾಗಿ ಆರೋಪಿ ಸಿಕ್ಕಿಬಿದ್ದಿದ್ದಲ್ಲದೆ, ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಗರ್ಭಪಾತ ಮಾತ್ರೆಯ ಅತಿಯಾದ ಬಳಕೆಯಿಂದಾಗಿ ಅಡ್ಡ ಪರಿಣಾಮ ಉಂಟಾಗಿದ್ದು ಅದರಿಂದಲೇ ಸಾವು ಆಗಿದೆ ಎನ್ನುವ ಬಗ್ಗೆ ದೂರಿನಲ್ಲಿ ಆರೋಪಿಸಿದ್ದಾರೆ. ಮಗಳನ್ನು ಅತ್ಯಾಚಾರ ಎಸಗಿ ಕೊಲೆಗೈದ ರೀತಿಯಲ್ಲೇ ಆರೋಪಿ ವಿರುದ್ಧ ಪ್ರಕರಣ ದಾಖಲಿಸುವಂತೆ ತಾಯಿ ಆಗ್ರಹಿಸಿದ್ದಾರೆ. ಐದು ವರ್ಷಗಳ ಹಿಂದೆ ಜಿಲ್ಲಾಧಿಕಾರಿ ಕಚೇರಿಯ ಬಳಿ ಪರಿಚಯವಾಗಿದ್ದ ವ್ಯಕ್ತಿ ತನ್ನ ಮಗಳ ಬಾಳನ್ನೇ ದುರಂತ ಅಂತ್ಯವಾಗುವಂತೆ ಮಾಡಿದ ಬಗ್ಗೆ ತಾಯಿ ತನ್ನ ತಲೆಯನ್ನೇ ಹಿಸುಕಿಕೊಳ್ಳುತ್ತಿದ್ದಾರೆ.
Tumakuru 18-year-old girl raped continually by congress ex corporate and CSI church committee leader Rajendra Kumar, girl dies after consuming abortion tablet. It is said that Rajendra used to come to the girls house when her mother wasn't at home and continually raped her. Videos, images and voice messages have been retrieved.
01-08-25 09:09 pm
Bangalore Correspondent
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
ಕೆಆರ್ ಐಡಿಎಲ್ ನಿಗಮವನ್ನೇ ಗುಡಿಸಿ ಹಾಕಿದ ಗುಮಾಸ್ತ !...
01-08-25 11:47 am
ಪಾಕಿಸ್ತಾನದಿಂದಲೇ ಭಾರತವನ್ನು ಸ್ಫೋಟಿಸುತ್ತೇನೆ ! ಗೋ...
31-07-25 11:20 pm
01-08-25 11:44 am
HK News Desk
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
ಜಾರ್ಖಂಡ್ ನಲ್ಲಿ ಭೀಕರ ರಸ್ತೆ ಅಪಘಾತ ; ಸಿಲಿಂಡರ್...
29-07-25 11:58 am
01-08-25 10:02 pm
Mangalore Correspondent
Mangalore News; ಕನಸು ಕಮರಿಸಿದ ಅಪಘಾತ ; ವೈದ್ಯರ ಎ...
01-08-25 09:38 pm
Mangalore Ammonia Leak, Baikampady: ಬೈಕಂಪಾಡಿ...
01-08-25 11:45 am
ಬಂಟ್ವಾಳ ಪಿಎಸ್ಐ ಕೀರಪ್ಪ ಕಾಂಬಳೆ ಆತ್ಮಹತ್ಯೆ ಪ್ರಕರಣ...
31-07-25 11:16 pm
MCC Bank to Inaugurate 20th Branch in Byndoor...
31-07-25 10:14 pm
01-08-25 05:05 pm
Mangalore Correspondent
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm
Tumakuru Crime, Principal Arrest: ತುಮಕೂರು ; ಹ...
01-08-25 02:31 pm
Mangalore Crime, Police: ಅಪ್ರಾಪ್ತ ಬಾಲಕಿಯನ್ನು...
31-07-25 06:04 pm
Bangalore Cyber Fraud: ಉದ್ಯೋಗಿಯನ್ನ ನಂಬಿ ಲ್ಯಾಪ...
30-07-25 10:42 pm