ಬ್ರೇಕಿಂಗ್ ನ್ಯೂಸ್
10-03-22 06:43 pm HK Desk news ಕ್ರೈಂ
ಗದಗ, ಮಾ.10 :ನಾಲ್ಕು ವರ್ಷಗಳ ಹಿಂದೆ ತನ್ನ ಮೊದಲ ಮದುವೆ ಮುಚ್ಚಿಟ್ಟು ಹಿಂದು ಯುವತಿಯೊಬ್ಬಳನ್ನು ಪ್ರೀತಿಸುವ ನೆಪದಲ್ಲಿ ಮದುವೆಯಾಗಿದ್ದ ಮುಸ್ಲಿಂ ಯುವಕನೊಬ್ಬ ಈಗ ಆಕೆಯನ್ನ ನಡುರಸ್ತೆಯಲ್ಲೇ ಅಟ್ಟಾಡಿಸಿ ಅಮಾನುಷವಾಗಿ ಮಚ್ಚಿನಿಂದ ಹೊಡೆದು ಕೊಲ್ಲಲು ಯ್ನತ್ನಿಸಿದ ಘಟನೆ ಗದಗ ನಗರದಲ್ಲಿ ನಡೆದಿದೆ.
ಗಂಡನಿಂದ ಮಾರಣಾಂತಿಕ ಹಲ್ಲೆಗೊಳಗಾದ ಯುವತಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಗದಗ ನಗರದ ಮುಂಡರಗಿ ರಸ್ತೆಯ ಲಯನ್ ಸ್ಕೂಲ್ ಗ್ರೌಂಡ್ ಬಳಿ ಗುರುವಾರ ಬೆಳಗ್ಗೆ ಘಟನೆ ಸಂಭವಿಸಿದ್ದು, ಯುವಕನ ವರ್ತನೆ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಅಪೂರ್ವ ಶಿರೂರ(26) ಅಲಿಯಾಸ್ ಅರ್ಫಾನ್ ಬಾನು ಹಲ್ಲೆಗೊಳಗಾದ ಮಹಿಳೆ. ಈಕೆಯ ಗಂಡ ಇಜಾಜ್ (38) ಹಲ್ಲೆಗೈದ ಆರೋಪಿ. ಹುಬ್ಬಳ್ಳಿ ಕೋಲಪೇಟೆಯ ನಿವಾಸಿ ಇಜಾಜ್ ನಾಲ್ಕು ವರ್ಷಗಳ ಹಿಂದೆ ಹಿಂದು ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೆ, ಈತನಿಗೆ ಅದಾಗಲೇ ಬೇರೊಬ್ಬಳ ಜತೆ ಮದುವೆ ಆಗಿತ್ತು. ಈ ವಿಷಯ ಮುಚ್ಚಿಟ್ಟು ಇಜಾಜ್ ಅಪೂರ್ವಳನ್ನು ಪ್ರೀತಿಯ ನಾಟಕವಾಡಿ ಮದುವೆ ಮಾಡಿಕೊಂಡಿದ್ದ.

ಮದುವೆ ಬಳಿಕ ಅಪೂರ್ವಳನ್ನು ಮುಸ್ಲಿಂ ಆಗಿ ಮತಾಂತರಿಸುವ ಪ್ರಯತ್ನವಾಗಿ ಆಕೆಯ ಹೆಸರನ್ನು ಅರ್ಫಾನ್ ಬಾನು ಎಂದು ಬದಲಿಸಿದ್ದ. ಆರಂಭದಲ್ಲಿ ಚೆನ್ನಾಗಿಯೇ ಇದ್ದ ದಂಪತಿ ನಡುವೆ ಬಳಿಕ ಕೌಟುಂಬಿಕ ಕಲಹ ಶುರುವಾಗಿತ್ತು. ಇಜಾಜ್ ಬೇರೆ ಯುವತಿ ಜೊತೆ ಮೊದಲ ಮದುವೆಯಾಗಿರುವ ವಿಚಾರ ತಿಳಿದ ಅಪೂರ್ವ, ಆತನಿಂದ ದೂರವಾಗಲು ನಿಶ್ಚಯಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ನಾಲ್ಕೈದು ತಿಂಗಳಿಂದ ಗಂಡನಿಂದ ದೂರವಾಗಿದ್ದ ಅಪೂರ್ವ, ಗುರುವಾರ ಬೆಳಗ್ಗೆ ಗದಗ ನಗರದ ಮುಂಡರಗಿ ರಸ್ತೆಯ ಲಯನ್ ಸ್ಕೂಲ್ ಗ್ರೌಂಡ್ನಲ್ಲಿ ದ್ವಿಚಕ್ರ ವಾಹನದಲ್ಲಿ ಡ್ರೈವಿಂಗ್ ಕಲಿಯುತ್ತಿದ್ದಳು. ಅಲ್ಲಿಗೆ ಮಚ್ಚು ಹಿಡಿದು ಬಂದ ಇಜಾಜ್, ಪತ್ನಿ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ಯುವತಿಯನ್ನು ಕೂಡಲೇ ಸ್ಥಳೀಯರು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ಎಸ್ಪಿ ಶಿವಪ್ರಕಾಶ್ ದೇವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Gadag Muslim man hides his first marriage and marries a Hindu girl converts her to Islam, when his second wife demands divorce he attacks her with the sword.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
12-01-26 05:01 pm
Mangaluru Staffer
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm