ಹೋಮ, ಹವನದಿಂದ ಸಂತಾನ ಭಾಗ್ಯ, ನೌಕರಿ ಆಮಿಷ, ವಂಚನೆ ; ಬೆಳಗಾವಿಯಲ್ಲಿ ನಕಲಿ ಜ್ಯೋತಿಷಿಗೆ ಮಹಿಳೆಯರಿಂದಲೇ ತಕ್ಕ ಪಾಠ ! 

11-03-22 08:49 pm       HK Desk news   ಕ್ರೈಂ

ಹೋಮ, ಅಭಿಷೇಕ ಮಾಡಿಸಿದ್ರೆ ಸಂಕಷ್ಟ ಪರಿಹಾರ ಆಗುತ್ತೆ. ಸಂತಾನ ಭಾಗ್ಯ, ನೌಕರಿ ಲಭಿಸುತ್ತೆ ಎಂದು ನಂಬಿಸಿ ವಂಚಿಸುತ್ತಿದ್ದ ನಕಲಿ ಜ್ಯೋತಿಷಿಯನ್ನು ಬೆಳಗಾವಿ ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ‌.

ಬೆಳಗಾವಿ, ಮಾ.11: ಹೋಮ, ಅಭಿಷೇಕ ಮಾಡಿಸಿದ್ರೆ ಸಂಕಷ್ಟ ಪರಿಹಾರ ಆಗುತ್ತೆ. ಸಂತಾನ ಭಾಗ್ಯ, ನೌಕರಿ ಲಭಿಸುತ್ತೆ ಎಂದು ನಂಬಿಸಿ ವಂಚಿಸುತ್ತಿದ್ದ ನಕಲಿ ಜ್ಯೋತಿಷಿಯನ್ನು ಬೆಳಗಾವಿ ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ‌. 

ರಾಯಚೂರ ಮೂಲದ ನಕಲಿ ಜ್ಯೋತಿಷಿ ಬಸವರಾಜ ಬುಡಬುಡಕೇರ ಬಂಧಿತ ವ್ಯಕ್ತಿ. ದಿನ ಪತ್ರಿಕೆಯಲ್ಲಿ ರಾಮ ಭಟ್, ಜ್ಯೋತಿಷಿ ಎಂದು ಜಾಹೀರಾತು ಕೊಟ್ಟು ವಂಚಿಸುತ್ತಿದ್ದ ಖದೀಮನ ಬಗ್ಗೆ ವಂಚನೆಗೊಳಗಾದ ಮಹಿಳೆಯರು ಪೊಲೀಸ್ ದೂರು ನೀಡಿದ್ದರು. ‌ಬೆಳಗಾವಿಯಲ್ಲಿ ಇಬ್ಬರು ಮಹಿಳೆಯರಿಂದ 70 ಸಾವಿರಕ್ಕೂ ಅಧಿಕ ಹಣ ವಸೂಲಿ ಮಾಡಿದ್ದ ಬಗ್ಗೆ ದೂರಿನಲ್ಲಿ ಆರೋಪಿಸಲಾಗಿತ್ತು. 

ಅಲ್ಲದೆ, ಹಣ ಪಡೆದ ಬಳಿಕ ಆ ಮಹಿಳೆಯರನ್ನೇ ಬ್ಲಾಕ್ ಮೇಲ್ ಮಾಡುತ್ತಿದ್ದ. ಭರವಸೆ ಈಡೇರದೇ ಇದ್ದಾಗ ಮಹಿಳೆಯರು ಹಣ ಹಿಂತಿರುಗಿಸಲು ಕೇಳುತ್ತಿದ್ದರು. ಆದರೆ ಹಣ ಕೊಡಲು ನಿರಾಕರಿಸಿ ಬೇರೆ ರೀತಿಯಲ್ಲಿ ಬ್ಲಾಕ್ ಮೇಲ್ ಮಾಡುತ್ತಿದ್ದ. ಪೊಲೀಸರು ಆರೋಪಿಯನ್ನು ಬಂಧಿಸಿ, ಅಕೌಂಟ್ ನಲ್ಲಿದ್ದ 4 ಲಕ್ಷ ರುಪಾಯಿ ಸೀಜ್ ಮಾಡಿದ್ದಾರೆ. ಅಲ್ಲದೆ, ನಕಲಿ‌ ಜ್ಯೋತಿಷಿಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಬೆಳಗಾವಿ ಡಿಸಿಪಿ ರವೀಂದ್ರ ಗಡಾದಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ‌

Fake astrologer arrested by Cyber police in Belagavi for making fake promotions online and cheating people of assuring fake blessings.