ಬ್ರೇಕಿಂಗ್ ನ್ಯೂಸ್
12-03-22 02:36 pm Mangalore Correspondent ಕ್ರೈಂ
ಮಂಗಳೂರು, ಮಾ.12 : ಬೈಕ್ ಸ್ಟಂಟ್ ಮತ್ತು ವೀಲಿಂಗ್ ಮಾಡಿ, ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದ ಬಗ್ಗೆ ಮಂಗಳೂರಿನ ಟ್ರಾಫಿಕ್ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದು ಎಂಟು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಮಂಗಳೂರು ನಗರ ಹೊರವಲಯ ಹಾಗೂ ಕೆಲವೊಂದು ಜನಸಂಚಾರ ಕಡಿಮೆ ಇರುವ ಪ್ರದೇಶಗಳಲ್ಲಿ ವೀಲಿಂಗ್, ಸ್ಟಂಟ್ ಮಾಡುವ ವಿಡಿಯೋ ರೆಕಾರ್ಡ್ ಮಾಡಿ ಇನ್ಸ್ ಟಾ ಗ್ರಾಮ್ ತಾಣದಲ್ಲಿ ಅಪ್ಲೋಡ್ ಮಾಡಲಾಗುತ್ತಿತ್ತು. ಈ ವಿಡಿಯೋ ವೈರಲ್ ಆಗಿದ್ದು ಯುವಕರು ಅಪಾಯಕಾರಿ ರೀತಿಯಲ್ಲಿ ನಡು ರಸ್ತೆಯಲ್ಲೇ ಸ್ಟಂಟ್ ನಡೆಸುತ್ತಿದ್ದ ಬಗ್ಗೆ ಸಾರ್ವಜನಿಕರು ಪೊಲೀಸರ ಗಮನ ಸೆಳೆದಿದ್ದರು.
ಜಾಲತಾಣದ ಬಗ್ಗೆ ನಿಗಾ ಇಡುವ ತಂಡದ ಮೂಲಕ ವಿಡಿಯೋ ಹಾಕಿದವರನ್ನು ಮತ್ತು ರೆಕಾರ್ಡ್ ನಡೆಸಿರುವ ಸ್ಥಳವನ್ನು ಪತ್ತೆಹಚ್ಚಿ ಸಂಬಂಧಪಟ್ಟ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೊಹಮ್ಮದ್ ಅನಾಜ್, ಕಿಶನ್ ಕುಮಾರ್, ತೌಸಿಫ್ ಮೊಹಮ್ಮದ್, ಮೊಹಮ್ಮದ್ ಸ್ವಾಲಿ, ಮೊಹಮ್ಮದ್, ಅಬ್ದುಲ್ ಜಬ್ಬಾರ್ ಸಿದ್ದಿಕ್, ಇಲ್ಯಾಸ್ ಬಂಧಿತರಾಗಿದ್ದು ಇನ್ನೊಬ್ಬ ಆರೋಪಿ ಅಪ್ರಾಪ್ತನಾಗಿದ್ದಾನೆ.
ಇವರ ಮೇಲೆ ನಾಲ್ಕು ಪ್ರತ್ಯೇಕ ಎಫ್ಐಆರ್ ದಾಖಲಿಸಿದ್ದು ಬಂಧಿತರ ಡ್ರೈವಿಂಗ್ ಲೈಸೆನ್ಸ್ ರದ್ದುಪಡಿಸಲು ಆರ್ ಟಿಓ ಅಧಿಕಾರಿಗಳಿಗೆ ಬರೆಯುವುದಾಗಿ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ. ಆರೋಪಿಗಳಿಂದ ಐದು ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಸಲು ಡಿಸಿಪಿ ಅಪರಾಧ ವಿಭಾಗದ ದಿನೇಶ್ ಕುಮಾರ್ ಮತ್ತು ಎಸಿಪಿ ನಟರಾಜ್ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು. ಈ ಬಗ್ಗೆ ಮಾ.10 ಮತ್ತು 11 ರಂದು ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
The city (south) traffic station personnel have registered four cases against eight people who have been accused of performing motorbike stunts on the public road. Five vehicles were reportedly used to perform stunts.It is said that a person named Illyas Jeeyan had travelled in a motorbike without registration number on roads in Ullal region with two others. He had performed wheeling stunts on the road in this fashion from March 1 to 6. He was found riding his motorbike perilously, doing wheeling stunts and riding the two-wheeler in a criss-cross manner, which endangered other vehicle riders and pedestrians.
01-08-25 11:34 pm
Mangaluru Correspondent
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
01-08-25 10:02 pm
Mangalore Correspondent
Mangalore News; ಕನಸು ಕಮರಿಸಿದ ಅಪಘಾತ ; ವೈದ್ಯರ ಎ...
01-08-25 09:38 pm
Mangalore Ammonia Leak, Baikampady: ಬೈಕಂಪಾಡಿ...
01-08-25 11:45 am
ಬಂಟ್ವಾಳ ಪಿಎಸ್ಐ ಕೀರಪ್ಪ ಕಾಂಬಳೆ ಆತ್ಮಹತ್ಯೆ ಪ್ರಕರಣ...
31-07-25 11:16 pm
MCC Bank to Inaugurate 20th Branch in Byndoor...
31-07-25 10:14 pm
01-08-25 05:05 pm
Mangalore Correspondent
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm
Tumakuru Crime, Principal Arrest: ತುಮಕೂರು ; ಹ...
01-08-25 02:31 pm
Mangalore Crime, Police: ಅಪ್ರಾಪ್ತ ಬಾಲಕಿಯನ್ನು...
31-07-25 06:04 pm
Bangalore Cyber Fraud: ಉದ್ಯೋಗಿಯನ್ನ ನಂಬಿ ಲ್ಯಾಪ...
30-07-25 10:42 pm