ಬ್ರೇಕಿಂಗ್ ನ್ಯೂಸ್
13-03-22 01:50 pm Mangalore Correspondent ಕ್ರೈಂ
ಮಂಗಳೂರು, ಮಾ.13: ಮಂಗಳೂರಿನ ಹಿರಿಯ ಪತ್ರಕರ್ತರೊಬ್ಬರಿಗೆ ಫೋನ್ ಮಾಡಿದ್ದ ಉತ್ತರ ಭಾರತ ಮೂಲದ ನಕಲಿ ಮೋಸಗಾರರು ಕೆವೈಸಿ ಮಾಹಿತಿ ಕೇಳಿ ಕೊನೆಗೆ ತಾವೇ ಉಗಿಸಿಕೊಂಡ ಘಟನೆ ನಡೆದಿದೆ.
ಮಂಗಳೂರಿನ ದಿ ಹಿಂದು ಪತ್ರಿಕೆಯ ನಿವೃತ್ತ ಪತ್ರಕರ್ತ, ಈಗ ಫ್ರೀಲ್ಯಾನ್ಸಿ ಆಗಿ ಕೆಲಸ ಮಾಡುತ್ತಿರುವ ರಘುರಾಮ್ ಅವರಿಗೆ ಫೋನ್ ಮಾಡಿದ್ದ ವ್ಯಕ್ತಿಯೊಬ್ಬ, ತಾನು ಬಿಎಸ್ಸೆನ್ನೆಲ್ ಕಂಪನಿಯಿಂದ ಕರೆ ಮಾಡುತ್ತಿದ್ದೇನೆ. ನಿಮ್ಮ ಆಧಾರ್ ಕಾರ್ಡ್, ಇನ್ನಿತರ ಕೆವೈಸಿ ಮಾಹಿತಿಗಳನ್ನು ನೀಡುವಂತೆ ಕೇಳಿದ್ದಾನೆ. ಈ ರೀತಿಯ ಮೋಸದ ಬಗ್ಗೆ ಅರಿವಿದ್ದ ರಘುರಾಮ್, ಮೊದಲಿಗೆ ಏನೂ ಅರಿಯದವರಂತೆ ನಟಿಸಿದ್ದಾರೆ. ಹೌದು.. ಕೆವೈಸಿ ಅಪ್ಡೇಟ್ ಎಂದರೇನು, ಯಾವೆಲ್ಲ ಮಾಹಿತಿಗಳು ಬೇಕು ಎಂದು ಕೇಳಿದ್ದಾರೆ.
ಇದೇ ವಿಚಾರದಲ್ಲಿ ಆಗಂತುಕ ವ್ಯಕ್ತಿ ಎರಡು, ಮೂರು ಬಾರಿ ಕರೆ ಮಾಡಿದ್ದು, ಹಿಂದಿಯಲ್ಲಿ ಮಾತನಾಡಿದ್ದ. ನೀವು ಸರಿಯಾದ ಮಾಹಿತಿ ನೀಡದಿದ್ದರೆ ನಿಮ್ಮ ಸಿಮ್ ಬ್ಲಾಕ್ ಮಾಡುತ್ತೇನೆ ಎಂದು ಬೆದರಿಸಿದ್ದಾನೆ. ಅದಕ್ಕೆ ಹೋಗಪ್ಪಾ, ಬ್ಲಾಕ್ ಮಾಡು.. ನೀನು ಯಾರಿಗೆ ಮೋಸ ಮಾಡುತ್ತಿದ್ದೀಯಾ.. ನಾನು ಬಿಎಸ್ಸೆನ್ನೆಲ್ ಸಿಮ್ ಹಿಂದಿನಿಂದಲೂ ಬಳಸುತ್ತಿದ್ದೇನೆ ಎಂದು ಹೇಳಿ ತಿರುಗಿ ಬೈದಿದ್ದಾರೆ. ಬೈಗುಳ ಕೇಳುತ್ತಲೇ ಮೋಸಗಾರ ವ್ಯಕ್ತಿ ಕರೆ ಕಟ್ ಮಾಡಿದ್ದಾನೆ.
ಈ ಬಗ್ಗೆ ರಘುರಾಮ್ ಅವರು ಮಂಗಳೂರು ಪೊಲೀಸ್ ಕಮಿಷನರ್ ಮತ್ತು ಸೈಬರ್ ಠಾಣೆಯ ಸಿಬಂದಿಗೆ ಮಾಹಿತಿ ನೀಡಿದ್ದಾರೆ. ತನಗೆ ಕರೆ ಮಾಡಿದ್ದ ವ್ಯಕ್ತಿಯ 6290455345 ಹಾಗೂ 9749759698 ಮೊಬೈಲ್ ನಂಬರಿನ ಬಗ್ಗೆ ದೂರು ನೀಡಿದ್ದಾರೆ. ಸೈಬರ್ ಪೊಲೀಸರು ಆಗಂತುಕನ ಮೊಬೈಲ್ ನಂಬರನ್ನು ಬ್ಲಾಕ್ ಮಾಡುವುದಾಗಿ ಹೇಳಿದ್ದಾರಂತೆ.
ಕಳೆದ ಎರಡು- ಮೂರು ವರ್ಷಗಳಲ್ಲಿ ಈ ರೀತಿಯ ಮೋಸದಾಟ ನಡೆಯುತ್ತಿದ್ದು, ಪಶ್ಚಿಮ ಬಂಗಾಳ, ಬಿಹಾರದ ವ್ಯಕ್ತಿಗಳು ತಾವು ಬ್ಯಾಂಕ್ ಸಿಬಂದಿ, ಮೊಬೈಲ್ ಕಂಪನಿಯಿಂದ ಎಂದು ಹೇಳಿಕೊಂಡು ಜನಸಾಮಾನ್ಯರನ್ನು ಯಾಮಾರಿಸಿ ವಂಚಿಸುತ್ತಿದ್ದಾರೆ. ಬ್ಯಾಂಕ್ ಮಾಹಿತಿ ಪಡೆದು ಆಧಾರ್, ಪಾನ್ ಕಾರ್ಡ್, ಓಟಿಪಿ ನಂಬರ್ ಕೇಳಿ, ಬ್ಯಾಂಕ್ ಖಾತೆಯಿಂದಲೇ ಹಣ ಪೀಕಿಸುತ್ತಾರೆ. ಇಂಗ್ಲಿಷ್, ಹಿಂದಿಯಲ್ಲಿ ವ್ಯವಹರಿಸುತ್ತಿದ್ದವರು ಈಗ ಕನ್ನಡದಲ್ಲಿಯೂ ಮಾತನಾಡಿ ಜನರನ್ನು ಸುಲಭದಲ್ಲಿ ನಂಬುವಂತೆ ಮಾಡುತ್ತಿದ್ದಾರೆ. ಕನ್ನಡದಲ್ಲಿ ಮಾತನಾಡಿದರೆ, ನೈಜ ಬ್ಯಾಂಕ್ ಸಿಬಂದಿಯೇ ಆಗಿರಬೇಕು ಎಂದು ಮಾಹಿತಿ ನೀಡುತ್ತಾರೆ ಎನ್ನುವ ನೆಲೆಯಲ್ಲಿ ಮೋಸದಾಟ ಮಾಡುತ್ತಾರೆ.
An alert citizen foiled the attempt of an online fraudster who tried to take him for a ride. The fraudster called the citizen and said that he was calling from the BSNL company and asked for KYC related documents. The stranger called the person from 6290455345 and 9749759698 mobile numbers. He said that he was calling from BSNL and if the subscriber does not provide necessary documents for KYC, the sim card would be blocked. When the alert citizen started questioning him more, the fraudster started abusing him and cut the call.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 06:25 pm
HK News Desk
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm