ನನಗೂ ಮೋಸ, ಮೊದಲ ಹೆಂಡ್ತಿಗೂ ಮೋಸ, ಅವನನ್ನು ಬಿಡಲೇಬೇಡಿ ; ನೋವು ಹೇಳಿಕೊಂಡ ಲವ್ ಜಿಹಾದ್ ಸಂತ್ರಸ್ತೆ !

13-03-22 10:43 pm       HK Desk news   ಕ್ರೈಂ

ನನಗೂ‌ ಮೋಸ, ಅವನ ಮೊದಲ ಹೆಂಡತಿಗೂ ಮೋಸ ಮಾಡಿದ್ದಾನೆ, ಅವನಿಗೆ ಹಾಗೇ ಬಿಡಬಾರದು. ಮುಗಿಸಿಬಿಡ್ರಿ ಎಂದು ಗಂಡನಿಂದಲೇ ಮಚ್ಚಿನಿಂದ ಹಲ್ಲೆಗೊಳಗಾದ ಮಹಿಳೆ ಅಪೂರ್ವ ಪುರಾಣಿಕ್ ಮಹಿಳಾ ಸಂಘಟನೆಯ ಕಾರ್ಯಕರ್ತರಲ್ಲಿ ಕೇಳಿಕೊಂಡಿದ್ದಾಳೆ. 

ಹುಬ್ಬಳ್ಳಿ, ಮಾ.13: ನನಗೂ‌ ಮೋಸ, ಅವನ ಮೊದಲ ಹೆಂಡತಿಗೂ ಮೋಸ ಮಾಡಿದ್ದಾನೆ, ಅವನಿಗೆ ಹಾಗೇ ಬಿಡಬಾರದು. ಮುಗಿಸಿಬಿಡ್ರಿ ಎಂದು ಗಂಡನಿಂದಲೇ ಮಚ್ಚಿನಿಂದ ಹಲ್ಲೆಗೊಳಗಾದ ಮಹಿಳೆ ಅಪೂರ್ವ ಪುರಾಣಿಕ್ ಮಹಿಳಾ ಸಂಘಟನೆಯ ಕಾರ್ಯಕರ್ತರಲ್ಲಿ ಕೇಳಿಕೊಂಡಿದ್ದಾಳೆ. 

ತೀವ್ರ ಹಲ್ಲೆಗೀಡಾಗಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯನ್ನು ಹುಬ್ಬಳ್ಳಿಯ ಮಹಿಳಾ ಸಂಘಟನೆ ಕಾರ್ಯಕರ್ತರು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ, ಕಿರಾತಕ ಪತಿಯ ಮುಖವಾಡ ಬಿಚ್ಚಿಟ್ಟಿದ್ದಾಳೆ. 

ಅವನಿಗೆ ಮೊದಲೇ ಮದುವೆಯಾಗಿದ್ದು ನನಗೆ ಗೊತ್ತಿರಲಿಲ್ಲ.‌ ಮನ್ಯಾಗ ನಮ್ಮ ತಾಯಿ ಕೂಡ ಅವನಿಗೆ ಮದುವೆ ಆಗಿದೆ ಅಂತ ಹೇಳಿದ್ಲು. ಜನ ಮಾತಾಡ್ತಾಯಿದ್ದಾರೆ ಅಂತ ತಾಯಿ ಹೇಳ್ತಿದ್ಲು. ಈ ನಡುವೆ ಆತನ ಹೆಂಡ್ತಿ ಬಂದು ನನಗೆ ಭೇಟಿ ಆಗಿದ್ಲು. ಆದ್ರೆ ಇವ ಆಕೆ ನನ್ನ ಹೆಂಡ್ತಿ ಅಲ್ಲ ಅಂತ ಹೇಳಿದ್ದ. ಆಕೆ ಸುಳ್ಳು ಹೇಳ್ತಿದ್ದಾಳೆ ಅಂತ ನನ್ನ ನಂಬಿಸಿದ್ದ. 

ಆಮೇಲೆ ಮದುವೆಯಾದ ಬಳಿಕ ಸಣ್ಣ ಸಣ್ಣ ವಿಚಾರಕ್ಕೂ ಹೊಡೆಯೋದು, ಬಡಿಯೋದು ಮಾಡ್ತಿದ್ದ. ಮಾನಸಿಕ ಕಿರುಕುಳ ನೀಡುತ್ತಿದ್ದ, ಕೆಟ್ಟ ಕೆಟ್ಟ ಪದಗಳಿಂದ ಬೈಯುತ್ತಿದ್ದ. ಚುಚ್ಚಿ ಚುಚ್ಚಿ ಮಾತಾಡ್ತಾಯಿದ್ದ. ಈಕೆಗೆ ಯಾರೂ ಗತಿ ಇಲ್ಲ ಅಂತ ಕಿರುಕುಳ ನೀಡುತ್ತಿದ್ದ ಎಂದು ಸಂತ್ರಸ್ತ ಮಹಿಳೆ ಅಳಲು ತೋಡಿಕೊಂಡಿದ್ದಾರೆ.

Md Ijaz stabs wife Apoorva Puranik turned Arfa Bano for seeking divorce 

ನನಗೆ ಅಗ ಅಷ್ಟು ಜನರಲ್ ನಾಲೆಡ್ಜ್ ಇರಲಿಲ್ಲ. ಪ್ರಪಂಚದ ಜ್ಞಾನ ಇರಲಿಲ್ಲ.‌ ಹಾಗಾಗಿ ನನಗೆ ಮೋಸ ಮಾಡಿ ಮದುವೆಯಾಗಿದ್ದ. ಈಗ ನನಗೂ ಮೋಸ ಮಾಡಿದ. ಅವನ ಮೊದಲ ಹೆಂಡ್ತಿಗೂ ಮೋಸ ಮಾಡಿದ್ದಾನೆ. ಅವನ ನೀವು ಹಾಗೇ ಬಿಡಬಾರದು ಎಂದು ಮಹಿಳಾ ಸಂಘಟನೆಯ ಸದಸ್ಯರಲ್ಲಿ ಅಳಲು ತೋಡಿಕೊಂಡಿದ್ದಾಳೆ. 

ಮಾರ್ಚ್ 10 ರಂದು ಗದಗ ನಗರದಲ್ಲಿ ಸ್ಕೂಟಿ ಕಲಿಯುತ್ತಿದ್ದಾಗ ಅಪೂರ್ವ ಪುರಾಣಿಕ್ ಮೇಲೆ ಇಜಾಜ್ ಶಿರೂರ ಮಚ್ಚಿನಲ್ಲಿ ದಾಳಿ ನಡೆಸಿದ್ದ. ನಾಲ್ಕು ವರ್ಷಗಳ ಹಿಂದೆ ಈಕೆಯನ್ನು ಪ್ರೀತಿಸಿ ಮದುವೆಯಾಗಿದ್ದ ಇಜಾಜ್, ಆನಂತರ ತನ್ನ ನಿಜ ಬಣ್ಣ ತೋರಿಸಿದ್ದ. ಮತಾಂತರಕ್ಕೆ ಬಲವಂತ ಮಾಡಿದ್ದಲ್ಲದೆ, ಬುರ್ಖಾ ಹಾಕುವಂತೆ ಒತ್ತಾಯಿಸಿದ್ದ.‌ ಕೊನೆಗೆ, ಆತನ ಕಿರುಕುಳ ತಾಳಲಾರದೆ ಅಪೂರ್ವ ತನ್ನ ತವರು ಮನೆಗೆ ಬಂದು ವಿಚ್ಚೇದನಕ್ಕೆ ಅರ್ಜಿ ಹಾಕಿದ್ದಳು. ಈ ನಡುವೆ, ಮನೆ ಬಳಿಯ ಮೈದಾನದಲ್ಲಿ ಸ್ಕೂಟರ್ ಕಲಿಯುತ್ತಿದ್ದಾಗ ಇಜಾಜ್ ಬಂದು ಹಲ್ಲೆ ನಡೆಸಿದ್ದ. ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಯನ್ನು ಹಿಂದು ಸಂಘಟನೆಗಳು ಸೇರಿದಂತೆ ಹಲವರು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಲವ್ ಜಿಹಾದ್ ಮಾಡಿ ಹಿಂದು ಯುವತಿಯನ್ನು ಬೀದಿಗೆ ತಳ್ಳಿದ ಇಜಾಜ್ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು ಪೊಲೀಸರು ಬಂಧಿಸಿದ್ದಾರೆ‌.

In Gadag, Karnataka, a case has come to the fore of husband’s cruelty. A few days before the hearing of the divorce petition here, a husband attacked his wife 23 times with a knife. The wife filed for divorce when it came to light that the husband was already married. Angered by this, the husband took this step. The seriously injured woman is being treated at the hospital. At the same time, the police has arrested the accused husband.