ಬ್ರೇಕಿಂಗ್ ನ್ಯೂಸ್
14-03-22 06:56 pm Bengaluru Correspondent ಕ್ರೈಂ
ಬೆಂಗಳೂರು, ಮಾ.14 : ಇಡೀ ರಾಜ್ಯದಲ್ಲೇ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆ ಅಂದರೆ ಅತಿ ಹೆಚ್ಚು ಕಮಾಯಿ ಆಗುವ ಠಾಣೆ. ಅಲ್ಲಿಗೆ ಎಸ್ಐ, ಇನ್ಸ್ ಪೆಕ್ಟರ್ ಆಗಿ ಪೋಸ್ಟಿಂಗ್ ಮಾಡಿಕೊಳ್ಳಲು ಲಕ್ಷಾಂತರ ಪೇಮೆಂಟ್ ಮಾಡಿಕೊಂಡೇ ಬರುತ್ತಾರೆ. ಆದರೆ ಆ ಠಾಣೆಯಿಂದ ವರ್ಗಾವಣೆಗೊಂಡಿದ್ದ ಎಎಸ್ಐ ಒಬ್ಬ 11 ತಿಂಗಳಾದರೂ ಕೆಲಸಕ್ಕೆ ಹಾಜರಾಗದೆ, ಅಲ್ಲಿಯೇ ಇದ್ದುಕೊಂಡು ವಸೂಲಿ ಬಾಜಿ ಮಾಡಿಕೊಂಡಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಉಪ್ಪಾರಪೇಟೆ ಠಾಣೆಯಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದ ಎಎಸ್ಐ ಶ್ರೀನಿವಾಸ್ ಶೆಟ್ಟಿ ಎಂಬವರನ್ನು ಕಳೆದ ವರ್ಷದ ಆರಂಭದಲ್ಲಿ ವಿಧಾನಸೌಧ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. 11 ತಿಂಗಳು ಕಳೆದರೂ ವಿಧಾನಸೌಧ ಠಾಣೆಗೆ ಕೆಲಸಕ್ಕೆ ಹಾಜರಾಗಿರಲಿಲ್ಲ. ಅದರ ಬದಲು ಚೆನ್ನಾಗಿ ಕಮಾಯಿ ಬರುತ್ತಿದ್ದ ಉಪ್ಪಾರಪೇಟೆ ಠಾಣೆಯಲ್ಲೇ ಹಿರಿಯ ಅಧಿಕಾರಿಗಳ ಆದೇಶ ಉಲ್ಲಂಘಿಸಿ ಉಳಿದುಕೊಂಡಿದ್ದಲ್ಲದೆ, ಅಪರಾಧಿಗಳಿಂದಲೇ ವಸೂಲಿ ಬಾಜಿ ಮಾಡುತ್ತಿದ್ದರು ಎನ್ನುವ ಮಾಹಿತಿ ಲಭಿಸಿದೆ.
ವಾರಕ್ಕೆ ಒಂದು ಬಾರಿ ಅಥವಾ ಹದಿನೈದು ದಿನಕ್ಕೊಮ್ಮೆ ಉಪ್ಪಾರಪೇಟೆ ಠಾಣೆಗೆ ಬರುತ್ತಿದ್ದ ಶ್ರೀನಿವಾಸ ಶೆಟ್ಟಿ, ಅಪರಾಧಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಕರೆತಂದು ಎಫ್‌ಐಆರ್ ದಾಖಲಿಸದೆ ಹಣ ಪಡೆದು ಅವರನ್ನು ಬಿಡುತ್ತಿದ್ದರು. ತಮ್ಮ ಕಾನೂನುಬಾಹಿರ ವ್ಯವಹಾರವನ್ನು ನಡೆಸಲು ಉಪ್ಪಾರ ಪೇಟೆ ಪೊಲೀಸ್ ಠಾಣೆಯನ್ನು ಬಳಸಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿದೆ.
ಶ್ರೀನಿವಾಸ ಶೆಟ್ಟಿ ಮಾಡುತ್ತಿದ್ದ ಕಾನೂನು ವಿರೋಧಿ ಕೆಲಸದ ಬಗ್ಗೆ ಅಲ್ಲಿನ ಹಿರಿಯ ಅಧಿಕಾರಿಗಳಿಗೆ ತಿಳಿದಿದ್ದರೂ ಯಾರೂ ಪ್ರಶ್ನೆ ಮಾಡಿರಲಿಲ್ಲ. ಇತ್ಯರ್ಥವಾಗದ ಕೆಲವು ಪ್ರಕರಣಗಳ ತನಿಖೆಗೆ ಅವರ ಅಗತ್ಯವಿತ್ತು ಎಂದು ನೆಪ ಹೇಳಿ ಉಪ್ಪಾರಪೇಟೆ ಠಾಣೆ ಪ್ರಮುಖರು ಶ್ರೀನಿವಾಸ ಶೆಟ್ಟಿಯನ್ನು ಉಳಿಸಿಕೊಂಡಿದ್ದರು ಎನ್ನುವ ಮಾತನ್ನು ವಿಧಾನಸೌಧ ಠಾಣೆಯ ಮೂಲಗಳು ತಿಳಿಸುತ್ತವೆ.
ಬುಧವಾರ ಗಾಂಧಿನಗರದಲ್ಲಿ ಅಕ್ರಮವಾಗಿ ಡ್ಯಾನ್ಸ್ ಬಾರ್ ನಡೆಸುತ್ತಿದ್ದ ಬಾರ್ ಅಂಡ್ ರೆಸ್ಟೋರೆಂಟ್ ಮೇಲೆ ಬೆಂಗಳೂರು ನಗರ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಈ ಘಟನೆಯ ನಂತರ ಶ್ರೀನಿವಾಸ ಶೆಟ್ಟಿ ಅವರನ್ನು ದಿಢೀರ್ ಆಗಿ ಅಮಾನತು ಮಾಡಲಾಗಿದೆ. ಈ ವ್ಯಕ್ತಿ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿಯೂ ವಸೂಲಿ ಮಾಡುತ್ತಿದ್ದ ವಿಚಾರ ತಿಳಿದೇ ಈ ಅಮಾನತು ಶಿಕ್ಷೆ ನೀಡಲಾಗಿದೆ ಎನ್ನಲಾಗುತ್ತಿದೆ.
ಆದರೆ ಸ್ಟೇಷನ್ ಮಟ್ಟದಲ್ಲಿ ಪೊಲೀಸ್ ಸಿಬ್ಬಂದಿ ಹೇಗೆ ಕಾರ್ಯ ನಿರ್ವಹಿಸುತ್ತಾರೆ, ಈ ಬಗ್ಗೆ ಹಿರಿಯ ಅಧಿಕಾರಿಗಳು ತಮ್ಮ ಸಿಬಂದಿ ಬಗ್ಗೆ ಎಷ್ಟು ಜಾಗ್ರತೆ ವಹಿಸುತ್ತಾರೆ ಎಂಬ ಬಗ್ಗೆ ಈ ಪ್ರಕರಣ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಳೆದ 11 ತಿಂಗಳಿಂದ ಎಎಸ್‌ಐ ಒಬ್ಬರು ಕೆಲಸಕ್ಕೆ ಹಾಜರಾಗದಿದ್ದರೂ ವಿಧಾನಸೌಧ ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ.ಆತನ ವಿರುದ್ಧ ಹಲವು ಆರೋಪಗಳಿದ್ದರೂ ಉಪ್ಪಾರಪೇಟೆ ಠಾಣೆ ಅಧಿಕಾರಿಗಳು ಎಎಸ್ಐ ಠಾಣೆಗೆ ಬಂದು ವಸೂಲಿ ಬಾಜಿ ನಡೆಸುತ್ತಿದ್ದರೂ ಕ್ರಮಕ್ಕೆ ಮುಂದಾಗಲಿಲ್ಲ. ಹೀಗಿರುವಾಗ, ಇದರಲ್ಲಿ ಹಿರಿಯ ಅಧಿಕಾರಿಗಳ ಶಾಮೀಲಾತಿ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಮೂಲಗಳು ತಿಳಿಸಿವೆ.
Bangalore Upparpet police inspector for collecting bribes even after 4 months of transfer from station. The inspector has been identified as Srinivas Shetty.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 06:25 pm
HK News Desk
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm