ನಕಲಿ ಸೀಲ್ ಬಳಸಿ ಜಾಗದ ದಾಖಲಾತಿ ಸೃಷ್ಟಿಸಿ ಮೋಸ ; ನಕಲಿ ದಾಖಲೆ ಮುಂದಿಟ್ಟೇ ಜಾಗ ಮಾರಾಟ ಜಾಲ, ಯಲಹಂಕದಲ್ಲಿ ಎಂಟು ಖದೀಮರ ಸೆರೆ 

16-03-22 05:02 pm       Bengaluru Correspondent   ಕ್ರೈಂ

ನಕಲಿ ಛಾಪಾ ಕಾಗದ ಹಾಗು ಸಬ್ ರಿಜಿಸ್ಟ್ರಾರ್ ಕಚೇರಿಯ ನಕಲಿ ಸೀಲು ಬಳಸಿ ಕೋಟಿ ಬೆಲೆಯ ಸೈಟ್ ಗಳ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಯಲಹಂಕ ಉಪನಗರ ಪೊಲೀಸರು ಪತ್ತೆಹಚ್ಚಿದ್ದು ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ‌. 

ಬೆಂಗಳೂರು, ಮಾ.16 : ನಕಲಿ ಛಾಪಾ ಕಾಗದ ಹಾಗು ಸಬ್ ರಿಜಿಸ್ಟ್ರಾರ್ ಕಚೇರಿಯ ನಕಲಿ ಸೀಲು ಬಳಸಿ ಕೋಟಿ ಬೆಲೆಯ ಸೈಟ್ ಗಳ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಯಲಹಂಕ ಉಪನಗರ ಪೊಲೀಸರು ಪತ್ತೆಹಚ್ಚಿದ್ದು ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ‌. 

ಪ್ರದೀಪ್, ಧರ್ಮಲಿಂಗಂ, ಮಂಜುನಾಥ್, ಯಾರಬ್, ವೈ. ಆರ್ ಮಂಜುನಾಥ್, ಅಬ್ದುಲ್ ಹಾಗೂ ಶಬಾನ ಬಂಧಿತರು. ಇವರು ಗ್ಯಾಂಗ್ ಕಟ್ಟಿಕೊಂಡು ನಕಲಿ ಸೀಲ್ ಮತ್ತು ದಾಖಲಾತಿಗಳನ್ನು ಸೃಷ್ಟಿಸಿ ಸೈಟ್ ಗಳನ್ನು ಅದರ ಅಸಲಿ ಮಾಲೀಕರಿಗೆ ತಿಳಿಯದಂತೆ ಮಾರಾಟ ಮಾಡ್ತಿದ್ದರು. ಬಂಧಿತರಿಂದ ಒಟ್ಟು ಎಂಟು ಪ್ರಕರಣಗಳು ಬಯಲಿಗೆ ಬಂದಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಆರೋಪಿಗಳು ರಾಜಾರೋಷವಾಗಿ ಹಗಲು ದರೋಡೆ ನಡೆಸಲು ಇವರಿಗೆ ಬೆಂಗಾವಲಾಗಿ ನಟೋರಿಯಸ್ ರೌಡಿ ಶೀಟರ್ ರಾಮಯ್ಯ ಅಲಿಯಾಸ್ ಆಟೋ ರಾಮ ಬೆನ್ನಿಗೆ ನಿಂತಿದ್ದ. ಆರೋಪಿಗಳ ವಿಚಾರಣೆಯಲ್ಲಿ ಎರಡು ಕೋಟಿ  ಹಣದ ವ್ಯವಹಾರ ಬೆಳಕಿಗೆ ಬಂದಿದೆ. ವಿದೇಶದಲ್ಲಿ ಇರುವ ಸೈಟ್ ಮಾಲೀಕರನ್ನು ಗುರುತಿಸುತ್ತಿದ್ದ ಗ್ಯಾಂಗ್, ಅದಕ್ಕೆ ಸಂಬಂಧಿಸಿದ 50 ವರ್ಷದ ಹಿಂದಿನ ಹಳೆ ದಾಖಲೆ, ಛಾಪಾ ಕಾಗದಗಳನ್ನು ತಯಾರಿಸುತ್ತಿದ್ದರು.‌ ಸೈಟ್ ಯಾರ ಹೆಸರಿನಲ್ಲಿ ಇದೆ, ಅವರಿಗೆ ಯಾರ ಹೆಸರಿನಿಂದ ಸೈಟ್ ಬಂದಿತ್ತು ಎಂಬುದನ್ನು ಗುರುತಿಸಿ, ಬಳಿಕ ಈ ಸೈಟ್ ಅನ್ನು ಮೂಲ ಮಾಲೀಕರು ನಮಗೆ ವೀಲು ಮಾಡಿದ್ದಾರೆ ಎಂದು ಹೇಳಿ ಯಾಮಾರಿಸುತ್ತಿದ್ದರು. ನಕಲಿ ದಾಖಲೆಗಳನ್ನೇ ಇಟ್ಟುಕೊಂಡು ಸೈಟ್ ಮಾರಾಟ ಮಾಡುತ್ತಿದ್ದರು. ‌ನಕಲಿ ದಾಖಲೆಗಳನ್ನೇ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅಸಲಿ ಎಂದು ಬಿಂಬಿಸಿ, ಹಣ ಕೊಟ್ಟು ಅಧಿಕೃತವಾಗಿ ರಿಜಿಸ್ಟರ್ ಮಾಡಿಸುತ್ತಿದ್ದರು.‌ ಇವೆಲ್ಲ ದಲ್ಲಾಳಿ ಕೆಲಸಗಳಿಗೆ ರೌಡಿ ಆಟೋ ರಾಮ ಬೆಂಬಲ ನೀಡುತ್ತಿದ್ದ.

Bangalore Eighth arrested for creating fake government seal and selling properties. The operation was lead by Yelankha police.