ಸುತ್ತ 70 ಎಕರೆ ಪ್ರದೇಶದಲ್ಲಿ ಹರಡಿದ್ದ ಕಾಡು, ಕೆರೆಯ ನೀರು ; ಕಾಡಿನಲ್ಲಿ ಅವಿತುಕೊಂಡು ಪೊಲೀಸರಿಗೇ ಚಳ್ಳೆಹಣ್ಣು ! ಡ್ರೋಣ್ ಕ್ಯಾಮರಾ ಬಳಸಿ ಆರೋಪಿ ಜುಟ್ಟು ಹಿಡಿದ ಪೊಲೀಸರು  

17-03-22 08:16 pm       HK Desk news   ಕ್ರೈಂ

ಸುಮಾರು 70 ಎಕರೆ ಜಾಗದಲ್ಲಿ ಹರಡಿಕೊಂಡಿದ್ದ ನೀರು ತುಂಬಿದ್ದ ಕೆರೆ ಮತ್ತು ಪೊದೆಗಳ ನಡುವೆ ಅವಿತುಕೊಂಡಿದ್ದ ಆರೋಪಿಯನ್ನು ಹಿಡಿಯಲು ಪೊಲೀಸರು ಅತ್ಯಾಧುನಿಕ ಡ್ರೋಣ್ ಕ್ಯಾಮರಾ ಬಳಕೆ ಮಾಡಿದ್ದಾರೆ.

ಚೆನ್ನೈ, ಮಾ.17: ಕೊಲೆ, ಕೊಲೆಯತ್ನ, ಕೊಲೆ ಬೆದರಿಕೆ ಹಾಕಿ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಕೊನೆಗೂ ಸೆರೆಹಿಡಿದಿದ್ದಾರೆ. ಸುಮಾರು 70 ಎಕರೆ ಜಾಗದಲ್ಲಿ ಹರಡಿಕೊಂಡಿದ್ದ ನೀರು ತುಂಬಿದ್ದ ಕೆರೆ ಮತ್ತು ಪೊದೆಗಳ ನಡುವೆ ಅವಿತುಕೊಂಡಿದ್ದ ಆರೋಪಿಯನ್ನು ಹಿಡಿಯಲು ಪೊಲೀಸರು ಅತ್ಯಾಧುನಿಕ ಡ್ರೋಣ್ ಕ್ಯಾಮರಾ ಬಳಕೆ ಮಾಡಿದ್ದಾರೆ.

ತಮಿಳುನಾಡಿನ ತೆಂಕಾಸಿ ಜಿಲ್ಲೆಯ ಚಿನ್ನಪೊತ್ತೈ ಎಂಬಲ್ಲಿನ ನೀರು ಹರಡಿಕೊಂಡಿರುವ ಬೃಹತ್ತಾದ ಜಾಗ ಇದೆ. ನೀರು ಹರಿದು ಹೋಗದೆ ಅಲ್ಲಿನ ಕಾಡಿನ ಉದ್ದಕ್ಕೂ ಹರಡಿಕೊಂಡಿದೆ. ಅದರ ಎಡೆಯಲ್ಲಿ ಬಂಡೆ ಕಲ್ಲುಗಳು ಮತ್ತು ಪೊದೆಗಳು, ಮರಗಳು ಮೈಚಾಚಿಕೊಂಡು ಹರಡಿದ್ದು ಅದರ ಎಡೆಯಲ್ಲಿ ಆರೋಪಿ ಶಾಹುಲ್ ಹಮೀದ್ ಅವಿತುಕೊಂಡಿದ್ದ. ಕಳೆದ ಹಲವಾರು ಸಮಯಗಳಿಂದ ಕೈಯಲ್ಲಿ ಕತ್ತಿ ಹಿಡಿದುಕೊಂಡು ಸ್ಥಳೀಯರನ್ನು ಬೆದರಿಸುತ್ತಾ, ಅಲ್ಲಿರುವ 70 ಎಕರೆ ವ್ಯಾಪ್ತಿಯ ಕೆರೆ ಇರುವ ಜಾಗ ತನ್ನದೇ ಏರಿಯಾ, ಈ ಜಾಗಕ್ಕೆ ಯಾರು ಕೂಡ ಬರಬಾರದು ಎಂದು ಹೇಳಿ ಬೆದರಿಸುತ್ತಿದ್ದ.

ಇತ್ತೀಚೆಗೆ ಪೀರ್ ಮಹಮ್ಮದ್ ಎಂಬವರು ಅಲ್ಲಿಂದ ನಡೆದುಕೊಂಡು ಹೋಗುತ್ತಿದ್ದಾಗ, ತಲವಾರಿನಿಂದ ಕಡಿದು ಹಾಕಿದ್ದಾನೆ. ಗಂಭೀರ ಗಾಯಗೊಂಡಿದ್ದ ಅವರನ್ನು ಬಳಿಕ ತಿರುನಲ್ವೇಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಕ್ಕೂ ಹಿಂದೆ, ಸ್ಥಳೀಯ ಮಹಿಳೆಯರು ಬಟ್ಟೆ ಒಗೆಯಲು, ಸ್ನಾನಕ್ಕಾಗಿ ಕೆರೆಯ ಇನ್ನೊಂದು ಬದಿಗೆ ಬರುತ್ತಿದ್ದಾಗಲೂ ಶಾಹುಲ್ ಹಮೀದ್ ಅಲ್ಲಿಗೆ ತೆರಳಿ ಬೆದರಿಕೆ ಹಾಕಿದ್ದ. ಕತ್ತಿ ತೋರಿಸಿ, ಇಲ್ಲಿ ಯಾರಾದ್ರೂ ಬಂದಲ್ಲಿ ಕೈ ಕಾಲು ಕಡಿಯುತ್ತೇನೆ ಎಂದಿದ್ದ. ಈ ಹಿಂದೆಯೂ ಆತನ ವಿರುದ್ಧ ಹಲವು ಕೇಸು ದಾಖಲಾಗಿದ್ದರಿಂದ ಸ್ಥಳೀಯರು ರೌಡಿ ಶಾಹುಲ್ ಬಗ್ಗೆ ಹೆದರುವಂತಾಗಿತ್ತು.

History-sheeter hides in marshy pond to duck cops, TN cops use drones to  nab him | Flipboard

ಚಿನ್ನಪೋತೈ ಎನ್ನುವ ಹಸಿರು ಗಾಡಿನಲ್ಲಿ ಬೀಡು ಬಿಟ್ಟಿದ್ದ ಶಾಹುಲ್, ಮಿನಿ ವೀರಪ್ಪನ್ ಎನ್ನುವ ರೀತಿ ಪೋಸು ಕೊಡುತ್ತಾ ಎಲ್ಲರನ್ನೂ ಬೆದರಿಸುತ್ತಿದ್ದ. ಈ ಬಗ್ಗೆ ತೆಂಕಾಸಿ ಪೊಲೀಸರಿಗೆ ದೂರು ನೀಡಿದರೂ, ಅವರು ಬಂದು ಕಾರ್ಯಾಚರಣೆ ನಡೆಸುವಷ್ಟರಲ್ಲಿ ಆತ ಇನ್ನೊಂದು ಕಡೆಯಿಂದ ತಪ್ಪಿಸಿಕೊಂಡು ಹೋಗುತ್ತಿದ್ದ. 70 ಎಕರೆ ಜಾಗದಲ್ಲಿ ಮುಳ್ಳು ಗಂಟಿಗಳಿಂದ ಕೂಡಿದ್ದ ಕೆರೆಯ ನಡುವೆ ಪೊಲೀಸರು ಬೆನ್ನಟ್ಟಿದ್ದರೆ ಆತ ಬಂಡೆ ಕಲ್ಲಿನ ಎಡೆಯಿಂದ ಓಡಿ ತಪ್ಪಿಸಿಕೊಳ್ಳುತ್ತಿದ್ದ. ಇತ್ತೀಚೆಗೆ ಅಲ್ಲಿನದ್ದೇ ವ್ಯಕ್ತಿಯೊಬ್ಬರಿಗೆ ಕಡಿದು ಕೊಲೆಗೆ ಯತ್ನಿಸಿದ್ದರಿಂದ ಪೊಲೀಸರಿಗೆ ಆತನನ್ನು ಹಿಡಿಯಲೇ ಬೇಕಾಗಿತ್ತು. ಹೀಗಾಗಿ ಎರಡು ಡ್ರೋಣ್ ಕ್ಯಾಮರಾ ಇಟ್ಟು ಆರೋಪಿ ಶಾಹುಲ್ ಹಮೀದ್ ಹುಡುಕಾಟ ನಡೆಸಿದ್ದರು.

ಬಾನಂಗಳದಲ್ಲಿ ಡ್ರೋಣ್ ಕ್ಯಾಮರಾ ಹಾರುತ್ತಿದ್ದಂತೆ ಶಾಹುಲ್ ನೀರಿನಲ್ಲಿ ಮುಳುಗುತ್ತಾ ತನ್ನ ಇರವು ಕಾಣದಂತೆ ತಪ್ಪಿಸಲು ಯತ್ನಿಸಿದ್ದಾನೆ. ಆದರೆ, ಆತ ಇರುವ ಜಾಗ ತಿಳಿಯುತ್ತಲೇ ಪೊಲೀಸರು ಸುತ್ತುವರಿದಿದ್ದು, ತನ್ನ ಕೈಯಲ್ಲಿದ್ದ ತಲವಾರು ಕೆಳಗಿಟ್ಟು ಆರೋಪಿ ಶರಣಾಗಿದ್ದಾನೆ. ಪೊಲೀಸ್ ಇನ್ಸ್ ಪೆಕ್ಟರ್ ಬಾಲಮುರುಗನ್ ನೇತೃತ್ವದ ತಂಡ ಮಾ.15ರಂದು ನಡೆಸಿದ ಕಾರ್ಯಾಚರಣೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಡ್ರೋಣ್ ಕ್ಯಾಮರಾದಲ್ಲಿ ಆರೋಪಿಯ ಪತ್ತೆ ಮಾಡಿದ್ದಲ್ಲದೆ, ಆತನನ್ನು ಹಿಡಿದು ತಂದ ವಿಡಿಯೋವನ್ನು ತೆಂಕಾಸಿ ಎಸ್ಪಿ ಕೃಷ್ಣರಾಜ್ ಟ್ವಿಟರ್ ನಲ್ಲಿ ಷೇರ್ ಮಾಡಿದ್ದಾರೆ. ಪೊಲೀಸರ ಕಾರ್ಯಕ್ಕೆ ಶಹಭಾಷ್ ಹೇಳಿದ್ದಾರೆ.

Shahul Hameed alias Left Sahul (32) did not think that he would be caught when he went into hiding in a pond adjacent to the small hill Chinna Pothai in Tenkasi last week. He jumped from one rock to another and dove into the water when the police spotted him. However, Tenkasi police took the game up a notch and deployed two drones on the spot to look at Shahul's strategy.