ಬ್ರೇಕಿಂಗ್ ನ್ಯೂಸ್
17-03-22 10:17 pm Bengaluru Correspondent ಕ್ರೈಂ
ಬೆಂಗಳೂರು, ಮಾ.18: ನಿಮಗೆ ತಾಕತ್ತಿದ್ದರೆ ನನ್ನನ್ನು ಹಿಡಿಯಿರಿ ಎಂದು ತೆಲಂಗಾಣ ಪೊಲೀಸರಿಗೇ ಸವಾಲು ಹಾಕಿ ತಲೆಮರೆಸಿಕೊಂಡಿದ್ದ ಐಷಾರಾಮಿ ಕಾರುಗಳನ್ನು ಕದಿಯುವುದನ್ನೇ ಕಸುಬು ಮಾಡಿಕೊಂಡಿದ್ದ ಕುಖ್ಯಾತ ಅಂತಾರಾಜ್ಯ ಕಳ್ಳನನ್ನು ಬೆಂಗಳೂರಿನ ಅಮೃತಹಳ್ಳಿ ಪೊಲೀಸರು ಬೇಟೆಯಾಡಿದ್ದಾರೆ.
ರಾಜಸ್ಥಾನದ ಮೂಲದ ಸತ್ಯೇಂದರ್ ಸಿಂಗ್ ಶೇಖಾವತ್ (41) ಬಂಧಿತ ಆರೋಪಿ. ಬೆಂಗಳೂರು, ಹೈದರಾಬಾದ್, ಚೆನ್ನೈ ಹೀಗೆ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಐಷಾರಾಮಿ ಕಾರುಗಳನ್ನು ಕದಿಯುವುದನ್ನೇ ವೃತ್ತಿ ಮಾಡಿಕೊಂಡಿದ್ದ ಶೇಖಾವತ್, ತೆಲಂಗಾಣ ಪೊಲೀಸರು ಬೆನ್ನುಬಿದ್ದಾಗ ನೀವು ತಾಕತ್ತಿದ್ದರೆ ಹಿಡಿದು ನೋಡಿ ಎಂದು ಸವಾಲು ಹಾಕಿದ್ದ ಎನ್ನಲಾಗಿದೆ. ಈತನಿಂದ ಟೊಯೊಟಾ ಫಾರ್ಚುನರ್, ಆಡಿ ಸೇರಿದಂತೆ ಹಲವು ಐಷಾರಾಮಿ ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಸುಮಾರು 20 ಕಾರಿನ ಕೀಗಳು, 13 ಸ್ಮಾರ್ಟ್ ಕೀಗಳು, ಕೀ ಕತ್ತರಿಸಲು ಬಳಸುವ ಎರಡು ಲಕ್ಷ ಮೌಲ್ಯದ ಯಂತ್ರ ಸೇರಿ ಕಾರು ಕದಿಯಲು ಬಳಸುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಯ ವಿಚಾರಣೆಯಲ್ಲಿ ಬೆಂಗಳೂರಿನಲ್ಲಿ 12 ಕಾರು ಕಳವು, ಹೈದರಾಬಾದ್ ನಲ್ಲಿ 5 ರಾಜಸ್ಥಾನ ಹಾಗೂ ಚೆನ್ನೈನಲ್ಲಿ ತಲಾ ಒಂದು ಐಷಾರಾಮಿ ಕಾರು ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಬೆಂಗಳೂರು, ಚೆನ್ನೈನಲ್ಲಿ ಕಾರು ಕದ್ದು ರಾಜಸ್ಥಾನಕ್ಕೆ ಒಯ್ಯುತ್ತಿದ್ದ ಶೇಖಾವತ್, ಅಲ್ಲಿ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದ. 2003ರಿಂದ ಕಾರು ಕಳವನ್ನೇ ವೃತ್ತಿಯಾಗಿಸಿದ್ದ ಈತನ ವಿರುದ್ಧ ದೇಶಾದ್ಯಂತ ಪ್ರಕರಣ ದಾಖಲಾಗಿದೆ. ದೆಹಲಿ, ಗುಜರಾತ್, ರಾಜಸ್ಥಾನ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರದಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡು ಓಡಾಡುತ್ತಿದ್ದ.

ಕಳೆದ ಅಕ್ಟೋಬರ್ 19ರಂದು ಅಮೃತಹಳ್ಳಿ ಠಾಣೆ ವ್ಯಾಪ್ತಿಯ ವಸತಿ ಸಮುಚ್ಚಯ ಒಂದರಲ್ಲಿ ನಿಲ್ಲಿಸಿದ್ದ ಫಾರ್ಚುನರ್ ಕಳವಾದ ಬಗ್ಗೆ ಅಭಿಷೇಕ್ ಎಂಬವರು ದೂರು ನೀಡಿದ್ದರು. ಪ್ರಕರಣದ ತನಿಖೆಗೆ ಈಶಾನ್ಯ ವಿಭಾಗದ ಡಿಸಿಪಿ, ವಿಷೇಷ ತಂಡವನ್ನು ರಚಿಸಿದ್ದರು. ಈ ವೇಳೆ, ಕಾರು ಕಳ್ಳ ಜೈಪುರದಲ್ಲಿ ಇರುವ ಬಗ್ಗೆ ಮಾಹಿತಿ ಪಡೆದು ಅಲ್ಲಿಗೆ ತೆರಳಿ ಆರೋಪಿಯನ್ನು ಹಿಡಿದು ತಂದಿದ್ದಾರೆ. ಆರೋಪಿ ಬಾಯಿ ಬಿಡಿಸಿದಾಗ, ಐಷಾರಾಮಿ ಕಾರು ಕಳವುಗೈಯುತ್ತಿದ್ದ ಪ್ರವರ ಹೊರಬಿದ್ದಿದೆ.
Rajasthan-based Satyendra Singh Shekhawat, who has stolen more than 40 cars across a dozen different states, was caught and arrested in Bangalore on Thursday.Shekhawat, who has a track record of stealing cars in Gujarat, Karnataka, Delhi, Maharashtra, Hyderabad, Tamil Nadu, Daman, Diu and Telangana, challenged police by saying “catch me if you can.”
28-07-26 08:12 pm
HK News Staffer
ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳನ್ನು ಖಾಸಗಿ ಶ...
25-07-26 03:06 pm
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
28-07-26 11:56 am
HK News Staffer
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
28-07-26 10:28 pm
HK News Desk
ಶಾಸಕ ಅಶೋಕ ರೈ ಹೆಸರೇಳಿ ಮಹಿಳೆಗೆ ಕರೆ ಮಾಡಿ ವಂಚನೆ ;...
28-07-26 10:23 pm
ಜಾಲತಾಣದಲ್ಲಿ ಜೆನ್ ಜೀಗಳ ಅಬ್ಬರ ; ಕಾಕ್ರೋಚ್ ಬೆನ್ನಲ...
27-07-26 09:48 pm
ಕ್ಯಾನ್ಸರ್ ವಿರುದ್ಧ ಹೋರಾಟದ ನಡುವೆಯೇ ಸೇವಾ ಕೈಂಕರ್ಯ...
27-07-26 08:24 pm
ಚಿನ್ನದ ರಿಂಗ್, ಡಾಲರ್ ಸಹಿತ ಬೆಲೆಬಾಳುವ ವಸ್ತುಗಳಿದ್...
26-07-26 09:57 pm
28-07-26 08:11 pm
HK News Staffer
Lavanya Murder Case, News: ಲಾವಣ್ಯ ಹತ್ಯೆ ಪ್ರಕರ...
28-07-26 07:07 pm
ವಿಚ್ಛೇದಿತ ಮಹಿಳೆಗೆ ಫೇಸ್ಬುಕ್ನಲ್ಲಿ ಪ್ರೀತಿಯ ನಾಟ...
28-07-26 12:28 pm
12 ವರ್ಷಗಳ ಹಿಂದಿನ ಗಂಗಾಧರ ಪಾಂಗಾಳ ಕೊಲೆ ಪ್ರಕರಣ ;...
27-07-26 11:07 pm
ಕಾಪುವಿನಲ್ಲಿ ಎಕ್ಸ್ಪ್ರೆಸ್ ಬಸ್ಗಳ ದರ್ಪ! ಟೈಮಿಂಗ್...
27-07-26 10:21 pm