ಬ್ರೇಕಿಂಗ್ ನ್ಯೂಸ್
01-04-22 02:14 pm Mangalore Correspondent ಕ್ರೈಂ
ಬೆಳ್ತಂಗಡಿ, ಎ.1: ಅಂತರ್ಜಾತಿ ಮದುವೆಯಾಗಿದ್ದಕ್ಕೆ ಆಕ್ಷೇಪಿಸಿದ ತಂದೆಯನ್ನು ಮರದ ಸಲಾಕೆಯಲ್ಲಿ ಬಡಿದು ಕೊಂದು ಹಾಕಿದ್ದ ಮಗನ ಮೇಲಿನ ಆರೋಪ ಸಾಬೀತಾಗಿದ್ದು, ಮಂಗಳೂರಿನ ನಾಲ್ಕನೇ ಜಿಲ್ಲಾ ನ್ಯಾಯಾಲಯ ಆರೋಪಿಯನ್ನು ತಪ್ಪಿತಸ್ಥ ಎಂದು ಘೋಷಣೆ ಮಾಡಿದೆ.
ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ನಡುಮುಡ್ಯೊಟ್ಟು ನಿವಾಸಿ ಹರೀಶ್ ಪೂಜಾರಿ(28) ಶಿಕ್ಷೆಗೊಳಗಾದ ನತದೃಷ್ಟ ಆರೋಪಿ. 2021ರ ಜನವರಿ 18ರಂದು ಘಟನೆ ನಡೆದಿದ್ದು, ತಂದೆ ಶ್ರೀಧರ ಪೂಜಾರಿ (56) ಅವರನ್ನು ಕೊಂದು ಹಾಕಿದ್ದ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹರೀಶ್ ಪೂಜಾರಿ ಸ್ಥಳೀಯ ಬೇರೆ ಜಾತಿಯ ಯುವತಿಯನ್ನು ಪ್ರೀತಿಸಿದ್ದು ಮದುವೆಯಾಗುವುದಾಗಿ ಮನೆಯಲ್ಲಿ ಹಠ ಕಟ್ಟಿದ್ದ. ಆದರೆ ಮನೆಯಲ್ಲಿ ತಂದೆ ಶ್ರೀಧರ ಪೂಜಾರಿ ಮಗನ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮದುವೆಯಾದಲ್ಲಿ ಮನೆಗೆ ಕಾಲಿಡಲು ಬಿಡುವುದಿಲ್ಲ. ಇನ್ನೊಬ್ಬ ಮಗಳಿಗೆ ಮದುವೆಯಾಗದೆ ನೀನು ಮದುವೆಯಾಗೋದು ಬೇಡ ಎಂದು ಹೇಳಿದ್ದರು. ಇದೇ ವಿಚಾರದಲ್ಲಿ ತಂದೆ- ಮಗನ ಮಧ್ಯೆ ಜಗಳ ನಡೆದಿತ್ತು.
ತಂದೆಯ ವಿರೋಧದ ಮಧ್ಯೆಯೂ ಹರೀಶ್ ಪೂಜಾರಿ, ಅದೇ ಹುಡುಗಿಯನ್ನು ಮದುವೆ ಆಗಿಯೇ ಸಿದ್ಧ ಎಂದು ಹೇಳಿ ಆಕೆಯೊಂದಿಗೆ ಬೇರೆ ಕಡೆ ಪರಾರಿಯಾಗಿದ್ದ. ಮೂರು ವಾರಗಳ ನಂತರ ತಿರುಗಿ ಮನೆಗೆ ಬಂದಿದ್ದು ತಂದೆ ಹೇಳಿದ ಮಾತಿನಂತೆ ಮಗ ಮತ್ತು ಆತನ ಪತ್ನಿಯನ್ನು ಮನೆಯೊಳಗೆ ಬರಲು ಬಿಡಲಿಲ್ಲ. ಈ ವಿಚಾರದಲ್ಲಿ ತಂದೆ – ಮಗನ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಮನೆಗೆ ಬರಲು ಬಿಡದಿದ್ದರೆ, ಏನು ಮಾಡಬೇಕೆಂದು ಗೊತ್ತಿದೆ ಎಂದು ತಂದೆಯ ವಿರುದ್ಧವೇ ಆವಾಜ್ ಹಾಕಿದ್ದ.
ಜನವರಿ 18ರಂದು ಮಧ್ಯಾಹ್ನ ಇಬ್ಬರ ನಡುವೆ ಜಗಳ ನಡೆದಿತ್ತು. ಸಂಜೆ ಹೊತ್ತಿಗೆ ಹೊರಗೆ ತೆರಳಿದ್ದ ತಂದೆ ಶ್ರೀಧರ ಪೂಜಾರಿ ಮರಳಿ ಬರುತ್ತಿದ್ದಾಗ ಮಗ ಹರೀಶ ಮರದ ಸಲಾಕೆಯಲ್ಲಿ ಅವರ ತಲೆಗೆ ಹೊಡೆದಿದ್ದಾನೆ. ಮುಖ ಮತ್ತು ತಲೆಯ ಭಾಗಕ್ಕೆ ತೀವ್ರ ಹೊಡೆತ ಬಿದ್ದಿದ್ದರಿಂದ ಶ್ರೀಧರ ಪೂಜಾರಿ ಸ್ಥಳದಲ್ಲೇ ಸಾವು ಕಂಡಿದ್ದರು. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿ ಹರೀಶ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದರು. ಇನ್ ಸ್ಪೆಕ್ಟರ್ ಸಂದೇಶ್ ಮಂಗಳೂರಿನ ಜಿಲ್ಲಾ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನಾಲ್ಕನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶೆ ಬಿ.ಆರ್.ಪಲ್ಲವಿ, ಆರೋಪಿಯನ್ನು ತಪ್ಪಿತಸ್ಥ ಎಂದು ಘೋಷಿಸಿದ್ದು ಶಿಕ್ಷೆಯ ಪ್ರಮಾಣವನ್ನು ಇನ್ನಷ್ಟೇ ಪ್ರಕಟಿಸಬೇಕಿದೆ. ಸರಕಾರಿ ವಕೀಲ ಹರಿಶ್ಚಂದ್ರ ಉದ್ಯಾವರ ಪೊಲೀಸರ ಪರವಾಗಿ ವಾದಿಸಿದ್ದಲ್ಲದೆ, 11 ಸಾಕ್ಷಿಗಳನ್ನು ಬರಹೇಳಿ ಕೋರ್ಟಿನಲ್ಲಿ ಸಾಕ್ಷ್ಯ ಹೇಳಿಸಿದ್ದರು. ಇನ್ನಿತರ 29 ಸಾಕ್ಷ್ಯಗಳನ್ನು ಪ್ರಕರಣದಲ್ಲಿ ಹಾಜರುಪಡಿಸಿ ಕೃತ್ಯ ರುಜುವಾತು ಆಗುವಂತೆ ಮಾಡಿದ್ದಾರೆ. ಅತ್ತ ಅಂತರ್ಜಾತಿ ಮದುವೆಯಾಗಿ ಎರಡೇ ವಾರ ಜೊತೆಗಿದ್ದ ಯುವತಿ, ಮದುವೆಯಾದ ಯುವಕನ ಕೃತ್ಯದಿಂದಾಗಿ ದಿಕ್ಕೆಟ್ಟು ಹೋಗಿದ್ದಾಳೆ.
Accusation on a youth, who had killed his father a year ago at Beltangady, was proved after inquiry of the same at fourth district and sessions court here.Harish Poojary (28), son of Sridhar Poojary (56), resident of Nadumudyottu, Gardady village of Beltangady, had killed his father on January 18, 2021. A case in this connection was registered in Beltangady police station.
27-06-26 08:31 pm
HK News Staffer
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ನೇ...
25-06-26 09:10 pm
28-06-26 04:03 pm
HK News Staffer
ದೇಶಾದ್ಯಂತ ಕಿಡ್ನಿ ಕಸಿ ಪ್ರಕ್ರಿಯೆ ಫಲಿತಾಂಶಗಳ ಬಹಿರ...
27-06-26 09:10 pm
40 ಸೆಕೆಂಡ್ ನಲ್ಲಿ ಎರಡು ಬಾರಿ ಭೂಕಂಪ ; ತತ್ತರಿಸಿ ಹ...
25-06-26 12:13 pm
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
27-06-26 08:01 pm
HK News Staffer
ಬೆಂಗಳೂರಿನಿಂದ ಪ್ರಿಯತಮೆಯ ಅಪಹರಣ ; ಅಂಕೋಲಾಕ್ಕೆ ಹೋಗ...
27-06-26 04:23 pm
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am
Mangalore, Police, criminial escapes: ಪಾಂಡೇಶ್...
27-06-26 10:54 am