ಬ್ರೇಕಿಂಗ್ ನ್ಯೂಸ್
03-04-22 05:25 pm Mangalore Correspondent ಕ್ರೈಂ
ಮಂಗಳೂರು, ಎ.3 : ಮಹಿಳೆಯೊಬ್ಬರ ಮೈಗೆ ಕೈ ಮಾಡಿದ್ದಲ್ಲದೆ, ಆಕೆಗೆ ದೈಹಿಕ ಹಲ್ಲೆಗೈದ ಆರೋಪದಲ್ಲಿ ಸಾಮಾಜಿಕ ಕಾರ್ಯಕರ್ತ ಆಸಿಫ್ ಆಪತ್ಬಾಂಧವ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಶಿವಮೊಗ್ಗ ಮೂಲದ ವನಜಾ ಎಂಬ ಮಹಿಳೆ ಮಂಗಳೂರಿನ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಕ್ರಮ ಜರುಗಿಸಿದ್ದಾರೆ. ದೂರಿನ ಪ್ರಕಾರ, ಮಹಿಳೆಯು ಆಸಿಫ್ ಅವರ ಮೂಲ್ಕಿಯಲ್ಲಿರುವ ಮೈಮೂನ ಫೌಂಡೇಶನ್ ಅಡಿ ಕಾರ್ಯ ನಿರ್ವಹಿಸುವ ಆಶ್ರಮದಲ್ಲಿ ಕಳೆದ ಒಂದು ವರ್ಷದಿಂದ ಆಶ್ರಯ ಪಡೆದಿದ್ದರು. ಈ ವೇಳೆ ಅಲ್ಲಿ ಆಶ್ರಮ ನೋಡಿಕೊಳ್ಳುತ್ತಿದ್ದ ಶಶಿಧರ್ ಎಂಬಾತ ಹಣಕಾಸು ವಂಚನೆ ಮಾಡಿ ಪರಾರಿಯಾಗಿದ್ದ. ಆತನಿಗೆ ಮಹಿಳೆ ಸಹಾಯ ಮಾಡಿದ್ದಾಳೆ ಎನ್ನುವ ಆರೋಪದಲ್ಲಿ ಆಸಿಫ್, ಶಿವಲಿಂಗ ಮತ್ತು ಮಹಮ್ಮದ್ ಅಫ್ತಾಬ್ ಸೇರಿ ಹಲ್ಲೆಗೈದು ಮಾನಸಿಕ ಕಿರುಕುಳ ನೀಡಿದ್ದಾರೆ.
ಮಹಿಳೆ ವನಜಾ ಈ ಹಿಂದೆ ಮಂಗಳೂರಿನ ಆಸ್ಪತ್ರೆಯಲ್ಲಿ ಹೋಮ್ ನರ್ಸ್ ಆಗಿದ್ದು ಕೊರೊನಾ ಬಳಿಕ ಕೆಲಸ ಕಳಕೊಂಡು ಕೆಲಸಕ್ಕಾಗಿ ಪಂಪ್ವೆಲ್ ನಲ್ಲಿ ಅಂಗಡಿ ಹೊಂದಿರುವ ಶಿವಲಿಂಗ ಬಳಿಗೆ ಹೋಗಿದ್ದಳು. ಶಿವಲಿಂಗ, ಬಳಿಕ ಆಸಿಫ್ ಗೆ ಮಾಹಿತಿ ನೀಡಿ ಆಶ್ರಮಕ್ಕೆ ಸೇರಿಸುವಂತೆ ಸಲಹೆ ನೀಡಿದ್ದ. ಅದರಂತೆ ಆಸಿಫ್ ಮಹಿಳೆಯನ್ನು ಕರೆದೊಯ್ದು ಆಶ್ರಮದಲ್ಲಿ ಆಶ್ರಯ ನೀಡಿದ್ದರು. ಈ ವೇಳೆ, ಆಶ್ರಮದ ಹಣಕಾಸು ವಿಚಾರದಲ್ಲಿ ವಂಚನೆ ಆಗಿದ್ದರಿಂದ ಮಹಿಳೆ ಮತ್ತು ಶಶಿಧರ್ ಬಳಿ ಆಸಿಫ್ ಪ್ರಶ್ನೆ ಮಾಡಿದ್ದರು.
ಹಣ ಕೇಳಿ, ವಿಕೆಟ್ ಮತ್ತು ಬೆಲ್ಟ್ ನಲ್ಲಿ ಹೊಡೆದಿದ್ದಾರೆಂದು ಮಹಿಳೆ ಆರೋಪಿಸಿದ್ದು ಬಳಿಕ ಆಕೆಯನ್ನು ಎಜೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಮಹಡಿಯಿಂದ ಬಿದ್ದು ಗಾಯಗೊಂಡಿರುವುದಾಗಿ ಸುಳ್ಳು ಹೇಳಲು ಆಸಿಫ್ ಹೇಳಿದ್ದ. ಇಲ್ಲದಿದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಆಸಿಫ್ ಬೆದರಿಕೆ ಹಾಕಿದ್ದು ಚಿಕಿತ್ಸೆ ನೀಡಿದ್ದ ವೈದ್ಯರು ಕೈಗೆ ಪೆಟ್ಟು ಬಿದ್ದ ಜಾಗಕ್ಕೆ ಪ್ಲಾಸ್ಟರ್ ಹಾಕಿದ್ದರು. ಕೈಗೆ ಬಿದ್ದ ಪೆಟ್ಟಿನ ಬಗ್ಗೆ ವೈದ್ಯರಿಗೆ ಅನುಮಾನ ಬಂದಿತ್ತು. ಬಳಿಕ ಮಹಿಳೆ ಪಾಂಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದು ಆಸಿಫ್, ಶಿವಲಿಂಗ ಮತ್ತು ಅಫ್ತಾಬ್ ಸೇರಿ ಹಲ್ಲೆಗೈದ ಬಗ್ಗೆ ಪ್ರಕರಣ ದಾಖಲಾಗಿದೆ. ಮಾನಭಂಗ ಯತ್ನ, ಕೊಲೆ ಬೆದರಿಕೆ, ಹಲ್ಲೆಗೈದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
The Pandeshwar Women’s police have arrested three persons including Asif Apathbandava for assaulting a woman at the Maimuna Foundation on April 2. The arrested have been identified as Mohammed Asif Apathbandava (39) from Mulki Karnad, Shivaling (40) from Pumpwell and Aftab (32) from Mulki.
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm