ಮಂಗಳೂರಿನ ರೌಡಿಗಳಿಂದ ಬೆಂಗಳೂರಿನಲ್ಲಿ ರಾಬರಿ ; ಬಂಧಿಸಲು ತೆರಳಿದ್ದ ಪಿಎಸ್ಐ ಮೇಲೆ ಚಾಕು ಇರಿದು ಹಲ್ಲೆ, ಗುಂಡು ಹಾರಿಸಿ ಬಂಧಿಸಿದ ಪೊಲೀಸರು

05-04-22 09:18 pm       Bengaluru Correspondent   ಕ್ರೈಂ

​​​​​​​ರಾಬರಿ ಪ್ರಕರಣದಲ್ಲಿ ಮಂಗಳೂರು ಮೂಲದ ಇಬ್ಬರು ರೌಡಿಶೀಟರ್ ಗಳನ್ನು ಬಂಧಿಸಲು ತೆರಳಿದ್ದ ಪಿಎಸ್ಐ ಒಬ್ಬರ ಮೇಲೆ ಚಾಕು ಇರಿದು ಕೊಲ್ಲಲು ಯತ್ನಿಸಿದ ಘಟನೆ ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು, ಎ.5: ರಾಬರಿ ಪ್ರಕರಣದಲ್ಲಿ ಮಂಗಳೂರು ಮೂಲದ ಇಬ್ಬರು ರೌಡಿಶೀಟರ್ ಗಳನ್ನು ಬಂಧಿಸಲು ತೆರಳಿದ್ದ ಪಿಎಸ್ಐ ಒಬ್ಬರ ಮೇಲೆ ಚಾಕು ಇರಿದು ಕೊಲ್ಲಲು ಯತ್ನಿಸಿದ ಘಟನೆ ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೊತ್ತನೂರು ಠಾಣೆ ವ್ಯಾಪ್ತಿಯಲ್ಲಿ ಮಾರ್ಚ್ 26ರಂದು ಕಾರನ್ನು ಅಡ್ಡಗಟ್ಟಿ ಅದರಲ್ಲಿದ್ದ ಮಹಿಳೆಯನ್ನು ರಾಬರಿ ಮಾಡಿದ್ದಲ್ಲದೆ, ಆಕೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿತ್ತು. ಈ ಬಗ್ಗೆ ದೂರು ದಾಖಲಾಗಿದ್ದರಿಂದ ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದರು.

ಕೊತ್ತನೂರು ಠಾಣೆಯ ಪಿಎಸ್ಐ ಉಮೇಶ್, ಎಸಿಪಿ ರಂಗಪ್ಪ ನೇತೃತ್ವದಲ್ಲಿ ಇಂದು ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯ ನಿಗೂಢ ಸ್ಥಳದಲ್ಲಿ ಅಡಗಿಕೊಂಡಿದ್ದ ಇಬ್ಬರು ರೌಡಿಶೀಟರ್ ಗಳ ಬಂಧನಕ್ಕೆ ಬಲೆಬೀಸಿದ್ದರು. ಈ ವೇಳೆ, ಪಿಎಸ್ಐ ಮೇಲೆ ಇಬ್ಬರು ಸೇರಿ ಚಾಕುವಿನಿಂದ ಇರಿದು ಹತ್ಯೆಗೆ ಯತ್ನ ಮಾಡಿದ್ದಾರೆ. ಈ ವೇಳೆ, ಇನ್ನೊಬ್ಬ ಎಸ್ಐ ಚನ್ನೇಶ್ ಕೂಡಲೇ ಜಾಗೃತಗೊಂಡು ಆರೋಪಿಗಳಿಬ್ಬರ ಕಾಲಿಗೆ ಗುಂಡು ಹಾರಿಸಿ, ಅರೆಸ್ಟ್ ಮಾಡಿದ್ದಾರೆ.

ಪಿಎಸ್ ಐ ಉಮೇಶ್ ಎಡ ಭಾಗದ ಎದೆಗೆ ಚಾಕು ಇರಿಯಲಾಗಿದ್ದು, ಅವರನ್ನು ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಆರೋಪಿಗಳು ಮೂಲತಃ ಮಂಗಳೂರಿನವರಾಗಿದ್ದು ಅಶಿಕ್ ಮತ್ತು ಇಸಾಕ್ ಎಂದು ಗುರುತಿಸಲಾಗಿದೆ.

Robbery and assault on police constable in Bangalore by two rowdy sheeters of Mangalore. Two who tried to escape we're shot to their legs.