ಸೈಬರ್ ಕಳ್ಳರ ಕರಾಮತ್ತಿಗೆ ಪೊಲೀಸ್ ಇನ್ಸ್ ಪೆಕ್ಟರ್ ಕ್ಲೀನ್ ಬೌಲ್ಡ್ ! ಬಣ್ಣದ ಮಾತಿಗೆ ಮರುಳಾಗಿ ಮೂರು ಲಕ್ಷ ಗೋತಾ ! 

14-04-22 09:43 pm       Bengaluru Correspondent   ಕ್ರೈಂ

ಜನಸಾಮಾನ್ಯರನ್ನು ಯಾಮಾರಿಸಿ ಸೈಬರ್ ಕಳ್ಳರು ಬ್ಯಾಂಕ್ ಖಾತೆಯಿಂದಲೇ ಹಣ ಕೀಳುವುದನ್ನು ಕೇಳಿದ್ದೇವೆ. ಆದರೆ ಈಗ ಸೈಬರ್ ಕಳ್ಳರು ಬೆಂಗಳೂರು ಸಿಟಿ ಕ್ರೈಂ ರೆಕಾರ್ಡ್ ಬ್ಯೂರೋದಲ್ಲಿ ಇನ್ಸ್ ಪೆಕ್ಟರ್ ಆಗಿರುವ ವ್ಯಕ್ತಿಯ ಖಾತೆಗೇ ಕನ್ನ ಹಾಕಿ ಹಣ ಕಳವು ಮಾಡಿದ್ದಾರೆ. 

ಬೆಂಗಳೂರು, ಎ.14 : ಜನಸಾಮಾನ್ಯರನ್ನು ಯಾಮಾರಿಸಿ ಸೈಬರ್ ಕಳ್ಳರು ಬ್ಯಾಂಕ್ ಖಾತೆಯಿಂದಲೇ ಹಣ ಕೀಳುವುದನ್ನು ಕೇಳಿದ್ದೇವೆ. ಆದರೆ ಈಗ ಸೈಬರ್ ಕಳ್ಳರು ಬೆಂಗಳೂರು ಸಿಟಿ ಕ್ರೈಂ ರೆಕಾರ್ಡ್ ಬ್ಯೂರೋದಲ್ಲಿ ಇನ್ಸ್ ಪೆಕ್ಟರ್ ಆಗಿರುವ ವ್ಯಕ್ತಿಯ ಖಾತೆಗೇ ಕನ್ನ ಹಾಕಿ ಹಣ ಕಳವು ಮಾಡಿದ್ದಾರೆ. 

ಬ್ಯಾಂಕ್ ಕೆವೈಸಿ, ಪಾನ್ ಕಾರ್ಡ್ ಅಪ್ ಡೇಟ್ ಮಾಡುವ ಹೆಸರಲ್ಲಿ ಬೆಂಗಳೂರು ಸಿಟಿ ಕ್ರೈಂ ರೆಕಾರ್ಡ್ ಬ್ಯುರೋ ಇನ್ಸ್ ಪೆಕ್ಟರ್ ಆಗಿರುವ ನಾಗಭೂಷಣ್ ಎಂಬವರ ಖಾತೆಯಿಂದ ಹಣ ಎಗರಿಸಿದ್ದಾರೆ.‌ ಎಸ್ ಬಿಐನ ಯೋ ಯೋ ಆಪ್ ಮೂಲಕ ಮೆಸೇಜ್ ಕಳಿಸಿದ್ದ ಆರೋಪಿಗಳು, ಮೆಸೇಜ್ ಓಪನ್ ಮಾಡ್ತಿದ್ದಾಗೆ ಅಸಲಿ ಬ್ಯಾಂಕ್ ಸಿಬಂದಿ ರೀತಿಯಲ್ಲೇ ವ್ಯವಹರಿಸಿದ್ದಾರೆ. 

ಬ್ಯಾಂಕ್ ಲೋಗೋ, ಯೊ ಯೊ ಸಿಂಬಲ್ ಎಲ್ಲವೂ ಅಸಲಿಯ ರೀತಿಯಲ್ಲೇ ಇತ್ತು. ಹೀಗಾಗಿ ಬ್ಯಾಂಕ್ ಕಡೆಯಿಂದಲೇ ಅಪ್ ಡೇಟ್ ಕೇಳ್ತಿದ್ದಾರೆಂದು ನಂಬಿದ್ದ ಇನ್ಸ್ ಪೆಕ್ಟರ್ ನಾಗಭೂಷಣ್ ತನ್ನ ಪಾನ್ ನಂಬರ್, ಆಧಾರ್, ಮೊಬೈಲ್ ನಂಬರ್ ಎಲ್ಲವನ್ನೂ ಕೊಟ್ಟಿದ್ದರು.‌ ಎಲ್ಲಾ ದಾಖಲೆಗಳು ಅಪ್ ಡೇಟ್ ಆಗ್ತಿದ್ದಂತೆ ಓಟಿಪಿ ನಂಬರ್ ಬಂದಿದ್ದು ಅದನ್ನು ಪಡೆದು ಅಕೌಂಟಿನಲ್ಲಿದ್ದ 3 ಲಕ್ಷ 66 ಸಾವಿರ ರೂ.ವನ್ನು ಕ್ಷಣಾರ್ಧದಲ್ಲಿ ಎಗರಿಸಿದ್ದಾರೆ. ಪ್ರಕರಣ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ನಾಗಭೂಷಣ್ ಪ್ರಕರಣ ದಾಖಲಿಸಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Bangalore Police inspector at city crime record looses Rs 3 lakhs for cyber crime.