ಬ್ರೇಕಿಂಗ್ ನ್ಯೂಸ್
16-04-22 07:56 pm HK Desk news ಕ್ರೈಂ
ಪಾಲಕ್ಕಾಡ್, ಎ.16: ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಎಸ್ಡಿಪಿಐ ಮತ್ತು ಆರೆಸ್ಸೆಸ್ ಮುಯ್ಯಿಗೆ ಮುಯ್ಯಿ ಎನ್ನುವಂತೆ ತಲವಾರು ಕಾಳಗದಲ್ಲಿ ತೊಡಗಿದೆ. ಶುಕ್ರವಾರ ಮಧ್ಯಾಹ್ನ ಎಸ್ಡಿಪಿಐ ಕಾರ್ಯಕರ್ತನ ಕೊಲೆ ನಡೆದಿತ್ತು. ಅದಕ್ಕೆ ಪ್ರತಿಯಾಗಿ ಶನಿವಾರ ಮಧ್ಯಾಹ್ನ ಹಾಡಹಗಲೇ ಆರೆಸ್ಸೆಸ್ ನಾಯಕರೊಬ್ಬರ ಹತ್ಯೆ ನಡೆದಿದೆ.
ಈ ಹಿಂದೆ ಆರೆಸ್ಸೆಸ್ ಶಾರೀರಿಕ ಶಿಕ್ಷಣ ಪ್ರಮುಖ್ ಆಗಿದ್ದ ಶ್ರೀನಿವಾಸನ್ ಕೊಲೆಯಾದವರು. ಮೇಲ್ಮುರಿ ಎಂಬಲ್ಲಿ ಶ್ರೀನಿವಾಸನ್ ಇಂದು ಮಧ್ನಾಹ್ನ ಒಂದು ಗಂಟೆ ಸುಮಾರಿಗೆ ತನ್ನ ಅಂಗಡಿಯಲ್ಲಿದ್ದಾಗ, ಮೂರು ಬೈಕುಗಳಲ್ಲಿ ಬಂದ ಐವರು ಹಂತಕರು ಯದ್ವಾತದ್ವಾ ತಲವಾರು ಬೀಸಿ ಭೀಕರ ಕೊಲೆ ಮಾಡಿದ್ದಾರೆ. ಸ್ಥಳದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಒಯ್ದರೂ ಬದುಕುಳಿಯಲಿಲ್ಲ.
ಬಿಜೆಪಿ ನಾಯಕರು, ಕೊಲೆಯ ಹಿಂದೆ ಎಸ್ಡಿಪಿಐ ಮತ್ತು ಪಿಎಫ್ಐ ಕಾರ್ಯಕರ್ತರಿದ್ದಾರೆ, ಅವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಶುಕ್ರವಾರ ನಡೆದ ಕೊಲೆಗೆ ಪ್ರತೀಕಾರ ರೂಪದಲ್ಲಿ ಘಟನೆ ನಡೆದಿದ್ದು, ಎಸ್ಡಿಪಿಐ ಕಾರ್ಯಕರ್ತರೇ ಕೃತ್ಯ ನಡೆಸಿದ್ದಾರೆ ಎನ್ನಲಾಗುತ್ತಿದೆ. ಶುಕ್ರವಾರ ಮಧ್ಯಾಹ್ನ ಎಲಪ್ಪಳ್ಳಿ ಎಂಬಲ್ಲಿ ಮಸೀದಿಗೆ ಕಾರಿನಲ್ಲಿ ಬಂದಿದ್ದ ಸುಬೈರ್ ಎಂಬ ಎಸ್ಡಿಪಿಐ ಕಾರ್ಯಕರ್ತನ ಕೊಲೆ ಆಗಿತ್ತು. ಕಾರಿಗೆ ಹಿಂದಿನಿಂದ ಡಿಕ್ಕಿಯಾಗಿದ್ದ ತಂಡ, ತಂದೆಯ ಎದುರಲ್ಲೇ ಸುಬೇರ್ ನನ್ನು ಕೊಲೆಗೈದಿತ್ತು. ಸಂಜೆ ವೇಳೆಗೆ ಸುಬೇರ್ ಅಂತ್ಯಕ್ರಿಯೆ ನಡೆದಿದ್ದು, ಅದಾಗಿ 20 ಗಂಟೆ ಕಳೆಯುವಷ್ಟರಲ್ಲಿ ಮತ್ತೊಂದು ಹೆಣ ಬಿದ್ದಿದೆ. ಘಟನೆ ಹಿನ್ನೆಲೆಯಲ್ಲಿ ಪಾಲಕ್ಕಾಡ್ ಜಿಲ್ಲೆಯಾದ್ಯಂತ ಪೊಲೀಸ್ ಭದ್ರತೆ ಬಿಗಿಗೊಳಿಸಲಾಗಿದೆ.
ಈ ಹಿಂದೆ ಆರೆಸ್ಸೆಸ್ ನಾಯಕರಾಗಿದ್ದ ಶ್ರೀನಿವಾಸನ್(47), ಈಗ ಹಳೆಯದನ್ನು ಬಿಟ್ಟು ಆಟೋ ಗ್ಯಾರೇಜ್ ನಡೆಸುತ್ತಿದ್ದರು. ಇಂದು ಮಧ್ಯಾಹ್ನ ತನ್ನ ಪಾಡಿಗೆ ಕೆಲಸ ಮಾಡುತ್ತಿದ್ದಾಗಲೇ ಸುಲಭದಲ್ಲಿ ಹಂತಕರ ಕೈಗೆ ಸಿಕ್ಕಿದ್ದಾರೆ. ಶುಕ್ರವಾರದ ಕೊಲೆ ಪ್ರಕರಣದಲ್ಲಿ ಬಿಜೆಪಿಯಾಗಲೀ, ಆರೆಸ್ಸೆಸ್ ಆಗಲಿ ಶಾಮೀಲು ಹೊಂದಿಲ್ಲ. ನಮ್ಮ ಕೈವಾಡ ಇಲ್ಲ ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದರು.
A local RSS leader was hacked to death in Kerala’s Palakkad district on Saturday, barely a day after a PFI leader was murdered in the area. The BJP’s district leadership in Palakkad said the PFI and its political wing, the Social Democratic Party of India, were behind Saturday’s murder.
10-01-25 11:01 pm
Bangalore Correspondent
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
Ramnagara Accident, KSRTC: KSRTC ಬಸ್ - ಬೈಕ್ ನ...
09-01-25 07:04 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
10-01-25 11:14 pm
Mangalore Correspondent
Mini Olympics, Mangalore- Uudpi: ಜ.17ರಿಂದ 23...
10-01-25 06:23 pm
Wenlock Hospital, Mangalore, organ harvesting...
10-01-25 03:31 pm
Mangalore crime, Misfire, Police; ಪಿಎಫ್ಐ ಒಳಸಂ...
09-01-25 07:50 pm
ಜನವರಿ 11-12 ; 'ಮಂಗಳೂರು ಲಿಟ್ ಫೆಸ್ಟ್' ಏಳನೇ ಆವೃತ...
08-01-25 09:51 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm