ಬ್ರೇಕಿಂಗ್ ನ್ಯೂಸ್
18-04-22 11:30 am HK Desk news ಕ್ರೈಂ
ಕಲಬುರಗಿ, ಎ.17: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ಬಗ್ಗೆ ಸಿಐಡಿ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದು ಗಂಭೀರ ಆರೋಪ ಎದುರಿಸುತ್ತಿರುವ ಕಲಬುರಗಿಯ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಮನೆಗೆ ದಾಳಿ ನಡೆಸಿದ್ದಾರೆ. ಆದರೆ ದಿವ್ಯಾ ಹಾಗರಗಿ ಅಧಿಕಾರಿಗಳ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದಾರೆ.
ಕಲಬುರಗಿಯಲ್ಲಿ ಬೀಡುಬಿಟ್ಟು ತನಿಖೆ ನಡೆಸುತ್ತಿರುವ ಸಿಐಡಿ ಎಸ್‌ಪಿ ರಾಘವೇಂದ್ರ ಹೆಗಡೆ, ಡಿವೈಎಸ್‌ಪಿ ಶಂಕರಗೌಡ ಪಾಟೀಲ್, ಪ್ರಕಾಶ ರಾಠೋಡ್ ಮತ್ತು ತಂಡದವರು ತನಿಖೆ ತೀವ್ರಗೊಳಿಸಿದ್ದಾರೆ.
ತಲಾ 40 ರಿಂದ 60 ಲಕ್ಷ ಕ್ಕೆ ಡೀಲ್
ಪಿಎಸ್ಐ ನೇಮಕಾತಿ ಪರೀಕ್ಷಾ ಕೇಂದ್ರವಾಗಿದ್ದ ಕಲಬುರಗಿಯ ಜ್ಞಾನಜ್ಯೋತಿ ಪರೀಕ್ಷಾ ಕೇಂದ್ರವೇ ಅಕ್ರಮಕ್ಕೆ ಮೂಲ ಎನ್ನಲಾಗುತ್ತಿದೆ. ಈ ಶಾಲೆ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರಿಗೆ ಸೇರಿದ್ದು ಅಲ್ಲಿಂದಲೇ ಅಕ್ರಮ ನಡೆದಿದೆ. ಪ್ರತಿ ಅಭ್ಯರ್ಥಿಯಿಂದ 40 ರಿಂದ 60 ಲಕ್ಷ ರೂ. ವಸೂಲಿ ಮಾಡಿದ್ದಾರೆ ಎನ್ನಲಾಗಿದ್ದು ಓಎಂಆರ್ ಶೀಟ್‌ನಲ್ಲಿ ಉತ್ತರ ಬರೆಯುವಲ್ಲಿ ಖಾಲಿ ಬಿಟ್ಟು ಮೇಲ್ವಿಚಾರಕರಿಂದಲೇ ಬರೆಸಿ ಪಾಸ್ ಮಾಡಿಸಲಾಗಿದೆ ಎನ್ನುವ ಆರೋಪಗಳಿವೆ.
ಜ್ಞಾನಜ್ಯೋತಿ ಶಾಲಾ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳ ಪೈಕಿ 11 ಅಭ್ಯರ್ಥಿಗಳು PSI ಹುದ್ದೆಗೆ ನೇಮಕ ಆಗಿದ್ದಾರೆ. ಆ ಪೈಕಿ ನಾಲ್ವರು ಅಕ್ರಮ ನಡೆಸಿಯೇ ಆಯ್ಕೆಯಾಗಿದ್ದು ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಇಬ್ಬರು ನ್ಯಾಯಯುತ ನೆಲೆಯಲ್ಲೇ ಪರೀಕ್ಷೆ ಬರೆದು ಪಾಸಾಗಿದ್ದು ಐವರು ಸಿಐಡಿ ತನಿಖೆಗೆ ಹೆದರಿ ಪರಾರಿಯಾಗಿದ್ದಾರೆ. ಇವರು ಪತ್ತೆಯಾದಲ್ಲಿ ಇನ್ನಷ್ಟು ಮಾಹಿತಿಗಳು ಹೊರಬರಲಿವೆ.
ಅಭ್ಯರ್ಥಿಗಳು ಖಚಿತವಾಗಿ ಗೊತ್ತಿದ್ದ ಉತ್ತರಗಳನ್ನು ಮಾತ್ರ ಟಿಕ್ ಮಾಡುತ್ತಿದ್ದರು. ಎಲ್ಲಾ ಅಭ್ಯರ್ಥಿಗಳು OMR ಶೀಟ್ ಕೊಟ್ಟುಹೋದ ನಂತರ ಲಂಚ ಕೊಟ್ಟಿದ್ದ ನಿರ್ದಿಷ್ಟ ಅಭ್ಯರ್ಥಿಗಳ ಓಎಂಆರ್ ಶೀಟ್ ಗಳಲ್ಲಿ ಸರಿ ಉತ್ತರಗಳನ್ನು ಪರೀಕ್ಷಾ ಮೇಲ್ವಿಚಾರಕರೇ ಆಯ್ಕೆ ಮಾಡುತ್ತಿದ್ದರು.
ಅಕ್ರಮದ ರುವಾರಿಗಳು ಅಭ್ಯರ್ಥಿ ಬಳಿಯ ಕಾರ್ಬನ್ ಶೀಟ್ ಗಳನ್ನು ಪರೀಕ್ಷೆ ಮುಗಿಯುತ್ತಿದ್ದಂತೆಯೇ ಪಡೆದುಕೊಂಡು ತಮ್ಮ ಬಳಿ ಇಟ್ಟುಕೊಳ್ಳುತ್ತಿದ್ದರು. ಆದರೆ ಸೇಡಂನ ವೀರೇಶ ಎನ್ನುವ ಅಭ್ಯರ್ಥಿ ಫಿಜಿಕಲ್ ಟೆಸ್ಟಿಂಗ್ ಸಮಯದಲ್ಲಿ ಈ ಓ.ಎಂ.ಆರ್ ಶೀಟಿನ ಕಾರ್ಬನ್ ಪ್ರತಿಯನ್ನು ತೆಗೆದುಕೊಂಡು ಬಂದಿದ್ದ. ಇದನ್ನು ಗಮನಿಸಿದ ಬೇರೊಬ್ಬ ಅಭ್ಯರ್ಥಿಯೊಬ್ಬರು, ಅದರ ಫೋಟೋ ತೆಗೆದಿದ್ದರು. ಆದರೆ ವೀರೇಶ್ ಪಿಎಸ್ಐ ಹುದ್ದೆಗೆ ನೇಮಕಗೊಂಡ ವೇಳೆ ಕೇವಲ ಇಪ್ಪತ್ತೇ ಪ್ರಶ್ನೆಗೆ ಉತ್ತರಿಸಿದ ವ್ಯಕ್ತಿ ಆಯ್ಕೆಯಾಗಿದ್ದು ಹೇಗೆ ಎಂದು ಅನುಮಾನದಲ್ಲಿ ಗೃಹ ಸಚಿವರಿಗೆ ದೂರು ನೀಡಿದ್ದರು. ತನಿಖೆ ನಡೆಸಿದಾಗ ಅಕ್ರಮ ಬಯಲಿಗೆ ಬಂದಿತ್ತು.
ಪೊಲೀಸರ ಪುತ್ರರದ್ದೇ ಅಕ್ರಮ !
ಅಕ್ರಮದಲ್ಲಿ ಮೊದಲು ಪತ್ತೆಯಾಗಿದ್ದೇ ಸೇಡಂನ ವೀರೇಶ್. ಈತ ಕಲಬುರಗಿಯ ಪೊಲೀಸ್ ಒಬ್ಬರ ಪುತ್ರ. ವಿಶೇಷ ಅಂದರೆ, ಅಕ್ರಮದಲ್ಲಿ ಭಾಗಿಯಾದ ಅಭ್ಯರ್ಥಿಗಳಲ್ಲಿ ಹೆಚ್ಚಿನವರು ಪೊಲೀಸರ ಪುತ್ರರು, ಅವರ ಸಂಬಂಧಿಕರೇ ಇರುವುದು ಪತ್ತೆಯಾಗಿದೆ.
ಶಾಲೆಯ ಅಧ್ಯಕ್ಷೆ ಬಿಜೆಪಿ ನಾಯಕಿ ದಿವ್ಯಾ, ಮುಖ್ಯೋಪಾಧ್ಯಾಯ ನಾಪತ್ತೆ !
ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಒಡೆತನದ ಕಲಬುರಗಿಯ ಜ್ಞಾನ ಜ್ಯೋತಿ ಶಾಲೆಯ ಮೂವರು ಪರೀಕ್ಷಾ ಮೇಲ್ವಿಚಾರಕರನ್ನು ಸಿಐಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶಾಲೆಯ ಅಧ್ಯಕ್ಷೆ ದಿವ್ಯಾ ಹಾಗರಗಿ ವಿಚಾರಣೆಗಾಗಿ ಸಿಐಡಿ ಅಧಿಕಾರಿಗಳು ಮನೆಯನ್ನು ಶೋಧಿಸಿದ್ದಾರೆ. ಆದರೆ ದಿವ್ಯಾ ಹಾಗರಗಿ ತಲೆಮರೆಸಿಕೊಂಡಿದ್ದಾರೆ. ಅವರ ಪತಿ ಜಗದೀಶನನ್ನು ವಿಚಾರಣೆ ನಡೆಸಿದೆ. ದಿವ್ಯಾ ಹಾಗರಗಿ ಮಾತ್ರವಲ್ಲ, ಜ್ಞಾನ ಜ್ಯೋತಿ ಶಾಲೆಯ ಮುಖ್ಯೋಪಾಧ್ಯಾಯ, ಇಬ್ಬರು ಶಿಕ್ಷಕಿಯರೂ ಸಹ ನಾಪತ್ತೆ ಆಗಿರುವುದು ಸಂಶಯ ಮೂಡಿಸಿದೆ. ದಿವ್ಯಾ ಹಾಗರಗಿ ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ಸೇರಿದಂತೆ ಬಿಜೆಪಿ ನಾಯಕರ ಆಪ್ತೆಯಾಗಿದ್ದು, ಪ್ರಕರಣದ ತನಿಖೆ ಯಾವ ದಿಕ್ಕಿನಲ್ಲಿ ಹೋಗುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ.
A CID investigation into the illegal recruitment of a police sub-inspector (PSI) has intensified. Police have already arrested several persons and have come forward to attack the house of the woman BJP leader of the district BJP in Kalaburagi today (Sunday).The CID is investigating allegations of massive irregularities in the recruitment of 545 PSI posts in the state. A team led by CID DYSP Sankara Gowda today visited the home of BJP leader and Hindu activist Divya
10-01-25 11:01 pm
Bangalore Correspondent
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
Ramnagara Accident, KSRTC: KSRTC ಬಸ್ - ಬೈಕ್ ನ...
09-01-25 07:04 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
10-01-25 11:14 pm
Mangalore Correspondent
Mini Olympics, Mangalore- Uudpi: ಜ.17ರಿಂದ 23...
10-01-25 06:23 pm
Wenlock Hospital, Mangalore, organ harvesting...
10-01-25 03:31 pm
Mangalore crime, Misfire, Police; ಪಿಎಫ್ಐ ಒಳಸಂ...
09-01-25 07:50 pm
ಜನವರಿ 11-12 ; 'ಮಂಗಳೂರು ಲಿಟ್ ಫೆಸ್ಟ್' ಏಳನೇ ಆವೃತ...
08-01-25 09:51 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm