ಬ್ರೇಕಿಂಗ್ ನ್ಯೂಸ್
18-04-22 10:08 pm Bengaluru Correspondent ಕ್ರೈಂ
ಬೆಂಗಳೂರು, ಎ.18 : ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಮತ್ತೊಂದು ಬಹುಕೋಟಿ ವಂಚನೆ ಎಸಗಿರುವ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಶೇರ್ ಶಾ ಅಪ್ಲಿಕೇಷನ್ ಹೆಸರಿನಲ್ಲಿ ಹೂಡಿಕೆದಾರರಿಗೆ ಭಾರೀ ವಂಚನೆ ಎಸಗಲಾಗಿದೆ.
ಗ್ರಾಹಕರಿಗೆ ಕ್ರಿಪ್ಟೋ ಮೈನಿಂಗ್ ಯಂತ್ರ ನೀಡೋದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚನೆ ಎಸಗಿದ್ದು ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಬರೋಬ್ಬರಿ 44 ಬ್ಯಾಂಕ್ ಅಕೌಂಟ್ ನಲ್ಲಿದ್ದ 15 ಕೋಟಿ ರೂ. ಹಣ, 1 ಕೆಜಿ 650 ಗ್ರಾಂ ಚಿನ್ನ , 78 ಲಕ್ಷ ನಗದು ಸೇರಿ 17 ಕೋಟಿ ರೂಪಾಯಿ ವಶಕ್ಕೆ ಪಡೆಯಲಾಗಿದೆ.
ಕೋವಿಡ್ 2ನೇ ಲಾಕ್ಡೌನ್ ವೇಳೆ ಸಾಮಾಜಿಕ ಜಾಲತಾಣ ಮೂಲಕ HNT (HELIEAM CRIPTO TOKEN) ಕ್ರಿಪ್ಟೋ ಕರೆನ್ಸಿ ನೀಡೋದಾಗಿ ನಂಬಿಸಿ ಆರೋಪಿಗಳು ವಂಚನೆ ಎಸಗಿದ್ದಾರೆ. ಬೆಂಗಳೂರು ಸೇರಿ ವಿವಿಧ ರಾಜ್ಯಗಳಲ್ಲಿ ನೊಂದಾಯಿತ ಕಂಪನಿಗಳ ಮೂಲಕ ಗ್ರಾಹಕರು ಹಣ ಹೂಡಿಕೆ ಮಾಡಿದ್ದರು.
![]()
ಆದರೆ 2022 ರ ಜನವರಿ ತಿಂಗಳಲ್ಲಿ ಶೇರ್ ಷಾ ಅಪ್ಲಿಕೇಷನ್ ದೋಷಪೂರಿತವಾಗಿದೆ, ಅದನ್ನ ಅಪ್ಡೇಟ್ ಮಾಡಬೇಕು ಎಂದು ಗ್ರಾಹಕರಿಗೆ ಸಂದೇಶ ರವಾನಿಸಲಾಗಿತ್ತು. ಅಲ್ಲದೆ, ಹೊಸ ಅಪ್ಲಿಕೇಷನ್ 2.0 ಬಿಡುಗಡೆ ಮಾಡ್ತಿವಿ ಎಂದು ನಂಬಿಸಿದ್ದರು.
ಆದರೆ ಹೇಳಿದ ಸಮಯಕ್ಕೆ ಅಪ್ಲಿಕೇಷನ್ ಅಪ್ಡೇಟ್ ಆಗದೇ ಇದ್ದುದು ಸಂಶಯ ಬರುವಂತಾಗಿತ್ತು. ಹೂಡಿಕೆದಾರರಿಗೆ ಯಾವುದೇ ರಿಟರ್ನ್ ನೀಡದೆ, ಆದಾಯವನ್ನೂ ನೀಡದೆ ಕ್ರಿಪ್ಟೋ ಮೈನಿಂಗ್ ಯಂತ್ರವನ್ನೂ ನೀಡದೆ ವಂಚನೆ ಎಸಗಿದ್ದಾಗಿ ಹೇಳಲಾಗುತ್ತಿದೆ.
1 ಕೇಜಿ 650 ಗ್ರಾಂ ಗೋಲ್ಡ್ , 78ಲಕ್ಷ ಹಣ, 44 ಡಿಎಸ್ ಸಿ (digital signature certificate), ವಿವಿಧ ಕಂಪನಿಗಳ ಹೆಸರಿನ ಸೀಲ್, ಮೊಬೈಲ್ ಫೋನ್, ಲ್ಯಾಪ್ ಟ್ಯಾಪ್ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು ಎಷ್ಟು ಕೋಟಿ ವಂಚನೆಯಾಗಿದೆ ಎನ್ನುವ ಕುರಿತಾಗಿ ಮಾಹಿತಿ ಕಲೆಹಾಕಲಾಗುತ್ತಿದೆ.
A multi-crore money laundering case has come to light in the name of crypto currency. Police have arrested four people for allegedly defrauding an application. There have been multiple frauds in the name of the Sher Shaw app. Allegations of crypto mining are believed to have been imposed on millions of rupees.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:46 am
HK News Staffer
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm