ರಿಕ್ಷಾದಲ್ಲಿ ಕೇರಳದಿಂದ ಅಕ್ರಮ  ದನದ ಮಾಂಸ ಸಾಗಣೆ ಪತ್ತೆ ;  ಆರೋಪಿ ಕೊಣಾಜೆ ಪೊಲೀಸರ ವಶಕ್ಕೆ 

18-04-22 10:48 pm       Mangalore Correspondent   ಕ್ರೈಂ

ಕೇರಳದಿಂದ‌ ಮಂಗಳೂರಿಗೆ ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ  ರಿಕ್ಷಾವೊಂದನ್ನು ಕೊಣಾಜೆ ಪೊಲೀಸರು ಅಸೈಗೋಳಿಯಲ್ಲಿ ತಡೆದು‌ ನಿಲ್ಲಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. 

ಉಳ್ಳಾಲ, ಎ.18 : ಕೇರಳದಿಂದ‌ ಮಂಗಳೂರಿಗೆ ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ  ರಿಕ್ಷಾವೊಂದನ್ನು ಕೊಣಾಜೆ ಪೊಲೀಸರು ಅಸೈಗೋಳಿಯಲ್ಲಿ ತಡೆದು‌ ನಿಲ್ಲಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. 

ಕೇರಳ ರಾಜ್ಯದ ಮಚ್ಚಂಪಾಡಿ ನಿವಾಸಿ ಮಹಮ್ಮದ್ ರಿಯಾಝ್ (32) ಬಂಧಿತ ಆರೋಪಿ. ಆರೋಪಿ ರಿಯಾಝ್ ಕೇರಳದಿಂದ ಮಂಗಳೂರು ಭಾಗದಲ್ಲಿ ಮಾರಾಟ ಮಾಡಲು ಸುಮಾರು‌ 365 ಕೆ.ಜಿ. ದನದ ಮಾಂಸವನ್ನು ಅಕ್ರಮವಾಗಿ ಸಾಗಿಸುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಕೊಣಾಜೆ ಪೊಲೀಸರು ಅಸೈಗೋಳಿ ಬಳಿ ಆಟೋ ರಿಕ್ಷಾವನ್ನು‌ ತಡೆದು ನಿಲ್ಲಿಸಿ ಪರಿಶೀಲಿಸಿದಾಗ ದನದ ಮಾಂಸ ಪತ್ತೆಯಾಗಿದೆ. ಆರೋಪಿ ಹಾಗು ಆಟೋ ರಿಕ್ಷಾವನ್ನು ವಶಕ್ಕೆ ಪಡೆದ ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Mangalore Beef meet transported illegally to kerala, driver arrested by Konaje Police. The arrested has been identified as Mohammad Riaz (32).