ಬ್ರೇಕಿಂಗ್ ನ್ಯೂಸ್
20-04-22 12:09 pm Bengaluru Correspondent ಕ್ರೈಂ
ಬೆಂಗಳೂರು, ಎ.20: ಜುವೆಲ್ಲರಿ ಮೇಲ್ಗಡೆಯ ಮಹಡಿಯಲ್ಲಿ ಬಾಡಿಗೆ ಪಡೆದಿದ್ದ ತಂಡವೊಂದು ಜುವೆಲ್ಲರಿಗೆ ಕನ್ನ ಹಾಕಿದ್ದಲ್ಲದೆ, 5 ಕೇಜಿ ಚಿನ್ನಾಭರಣ ದೋಚಿಕೊಂಡು ಹೋಗಿರುವ ಘಟನೆ ನಡೆದಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು 15 ಜನರ ವಿಶೇಷ ತಂಡವನ್ನು ರಚಿಸಿದ್ದಾರೆ.
ಜೆಪಿ ನಗರ ಠಾಣೆ ವ್ಯಾಪ್ತಿಯ ಪ್ರಿಯದರ್ಶಿನಿ ಜುವೆಲ್ಲರ್ಸ್ ನಲ್ಲಿ ಕಳವು ನಡೆದಿದ್ದು, ಆರೋಪಿಗಳು ವ್ಯವಸ್ಥಿತವಾಗಿ ಕಳ್ಳತನ ನಡೆಸಿದ್ದಾರೆ. ಒಂದು ತಿಂಗಳ ಹಿಂದೆ ದೆಹಲಿಯ ನಕಲಿ ವಿಳಾಸವನ್ನು ನೀಡಿ, ಮೂವರು ವ್ಯಕ್ತಿಗಳು ಜುವೆಲ್ಲರಿ ಕಟ್ಟಡದ ಮೂರನೇ ಮಹಡಿಯಲ್ಲಿ ಬಾಡಿಗೆ ಕೋಣೆ ಪಡೆದಿದ್ದರು. ಕೆಳಗಿನ ಎರಡು ಮಹಡಿಯಲ್ಲಿ ಜುವೆಲ್ಲರಿ ಇದ್ದು, ಮೇಲಿನ ಮೂರನೇ ಮಹಡಿ ಖಾಲಿ ಇತ್ತು. ಅಲ್ಲಿ ಬಾಡಿಗೆ ಪಡೆದು ಒಂದು ತಿಂಗಳ ಕಾಲ ಜುವೆಲ್ಲರಿ ದರೋಡೆಗೆ ಆರೋಪಿಗಳು ಸ್ಕೆಚ್ ಹಾಕಿದ್ದಾರೆ.

ಜುವೆಲ್ಲರಿಯ ಇಂಚಿಂಚು ಮಾಹಿತಿ ಸಂಗ್ರಹಿಸಿದ ಬಳಿಕ ಮೊನ್ನೆ ರಜಾದಿನವಾದ ಭಾನುವಾರ ಕಳವು ಕೃತ್ಯ ನಡೆಸಿದ್ದಾರೆ. ಮೂರನೇ ಮಹಡಿಯಿಂದ ಕೆಳಗಿನ ಭಾಗಕ್ಕೆ ಕಾಂಕ್ರೀಟನ್ನು ಕೊರೆದು ಸುರಂಗ ತೋಡಿದ್ದು ಅಲ್ಲಿಂದ ಜುವೆಲ್ಲರಿ ಒಳಕ್ಕಿಳಿದು ಚಿನ್ನಾಭರಣ ಕಳವು ಮಾಡಿದ್ದಾರೆ. ಮಂಗಳವಾರ ಬೆಳಗ್ಗೆ ಮಾಲೀಕರು ಬಂದು ಜುವೆಲ್ಲರಿ ಓಪನ್ ಮಾಡಿದಾಗ ಕಳವು ಕೃತ್ಯ ಬೆಳಕಿಗೆ ಬಂದಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಒಟ್ಟು 2.5 ಕೋಟಿ ಮೌಲ್ಯದ ಚಿನ್ನಾಭರಣ ಕಳವಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಕೊಠಡಿ ಬಾಡಿಗೆ ಪಡೆಯುವ ವೇಳೆ ವಿಳಾಸದ ಗುರುತಿಗಾಗಿ ಆಧಾರ್ ಕಾರ್ಡ್ ನೀಡಿದ್ದು, ಅದು ನಕಲಿಯೆಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಸಂಜೆ ವರೆಗೂ ವ್ಯಾಪಾರ ಮಾಡಿದ್ದ ಮಾಲೀಕರು ರಾತ್ರಿ ವೇಳೆಗೆ ಬಂದ್ ಮಾಡಿ ಹೋಗಿದ್ದರು. ಅದೇ ದಿನ ರಾತ್ರಿ 2 ಗಂಟೆಯ ವೇಳೆಗೆ ಜುವೆಲ್ಲರಿಗೆ ಕನ್ನ ಕೊರೆಯಲಾಗಿದೆ. ಗ್ಯಾಸ್ ಕಟರ್ ಬಳಸಿ ಕನ್ನ ಹಾಕಿರುವುದು ಕಂಡುಬಂದಿದ್ದು, ಒಳಕ್ಕಿಳಿದು ಕಪಾಟು ಒಡೆದು ಚಿನ್ನ ದೋಚಿದ್ದಾರೆ.
Bangalore Robbers break Priyadarshini Jewellers at JP Nagar, escape with five kilos of gold. A 15 member police team has been formed to nab the robbers. JP Nagar police are now investigating the case.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:46 am
HK News Staffer
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm