ಬ್ರೇಕಿಂಗ್ ನ್ಯೂಸ್
20-04-22 02:39 pm Mangalore Correspondent ಕ್ರೈಂ
ಮಂಗಳೂರು, ಎ.20: ಮಹಿಳಾ ಪ್ರಾಧ್ಯಾಪಕಿಯೊಬ್ಬರ ಬಗ್ಗೆ ಅಶ್ಲೀಲ ಮತ್ತು ಅವಹೇಳನಕಾರಿ ಚಿತ್ರಿಸಿ ಪತ್ರ ಬರೆದು ಮಾನಸಿಕ ಹಿಂಸೆ ನೀಡಿದ ಘಟನೆ ಬೆಳಕಿಗೆ ಬಂದಿದ್ದು ಪ್ರಕರಣ ಸಂಬಂಧಿಸಿ ಮಂಗಳೂರು ಪೊಲೀಸರು ಬಂಟ್ವಾಳದ ಪ್ರತಿಷ್ಠಿತ ಎಸ್ ವಿಎಸ್ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಮತ್ತು ಇಬ್ಬರು ಉಪನ್ಯಾಸಕರನ್ನು ಬಂಧಿಸಿದ್ದಾರೆ.
ಎಸ್ ವಿಎಸ್ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ, ಲಾಯ್ಲ ನಿವಾಸಿ ಪ್ರಕಾಶ್ ಶೆಣೈ(44), ಅದೇ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ, ಸಿದ್ಧಕಟ್ಟೆ ನಿವಾಸಿ ಪ್ರದೀಪ್ ಪೂಜಾರಿ(36) ಮತ್ತು ಅದೇ ಕಾಲೇಜಿನ ಇನ್ನೊಬ್ಬ ಉಪನ್ಯಾಸಕ ಹೆಬ್ರಿ ನಾಡ್ಪಾಲು ನಿವಾಸಿ ತಾರಾನಾಥ ಬಿ.ಎಸ್, ಶೆಟ್ಟಿ (32) ಬಂಧಿತರು. ಸಾಹಿತಿ, ಕವಯತ್ರಿ, ಲೇಖಕಿಯಾಗಿ ಹೆಸರು ಮಾಡಿರುವ, ಸದ್ಯ ಮಂಗಳೂರಿನ ರಥಬೀದಿಯ ದಯಾನಂದ ಪೈ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ನಾಗವೇಣಿ ಮಂಚಿ ಆರೋಪಿಗಳಿಂದ ಕಿರುಕುಳಕ್ಕೆ ಒಳಗಾದ ಸಂತ್ರಸ್ತ ಮಹಿಳೆ.
20 ವರ್ಷಗಳ ಕಾಲ ಎಸ್ ವಿಎಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ ನಾಗವೇಣಿ ಅವರು ಅಲ್ಲಿನ ಕೆಲವು ಸಹೋದ್ಯೋಗಿಗಳು ಮತ್ತು ಆಡಳಿತ ಮಂಡಳಿ ಕಾರ್ಯದರ್ಶಿಯ ಕಿರುಕುಳದಿಂದಾಗಿ ಐದು ವರ್ಷಗಳ ಹಿಂದೆ ಕಾಲೇಜು ಬಿಟ್ಟು ಡೆಪ್ಯುಟೇಶನ್ ಮೇಲೆ ರಥಬೀದಿಯ ಪ್ರಥಮ ದರ್ಜೆ ಕಾಲೇಜು ಸೇರಿದ್ದರು. ಈ ನಡುವೆ, ಕಳೆದ ಒಂದು ವರ್ಷದಿಂದ ನಾಗವೇಣಿ ಅವರ ಬಗ್ಗೆ ಅಶ್ಲೀಲವಾಗಿ ಬರೆದಿದ್ದ ಅನಾಮಧೇಯ ಪತ್ರಗಳು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಕಾಲೇಜುಗಳಿಗೂ, ಅಲ್ಲಿನ ಪ್ರಾಂಶುಪಾಲರಿಗೆ ಮತ್ತು ಇತರ ಉಪನ್ಯಾಸಕರಿಗೆ ಬರತೊಡಗಿದ್ದವು. ಈ ಬಗ್ಗೆ ಆಯಾ ಕಾಲೇಜಿನ ಪ್ರಾಧ್ಯಾಪಕರು ನಾಗವೇಣಿ ಅವರ ಗಮನಕ್ಕೂ ತಂದಿದ್ದರು. ಇದರಿಂದ ತೀವ್ರ ಮಾನಸಿಕ ಹಿಂಸೆಯನ್ನೂ ಅನುಭವಿಸಿದ್ದರು.
500 ರೂ.ಗೆ ಸಿಗ್ತೀರಂತೆ ಎಂದು ಹೇಳಿ ಕರೆ
ಇದರ ನಡುವೆಯೇ ಕಳೆದ ಡಿಸೆಂಬರ್ ತಿಂಗಳಲ್ಲಿ ನಾಗವೇಣಿ ಅವರಿಗೆ ಅನಾಮಧೇಯ ಕರೆಗಳು ಬರತೊಡಗಿದ್ದವು. ಶಿವಮೊಗ್ಗ, ಮೂಡಿಗೆರೆ, ಚಿಕ್ಕಮಗಳೂರು, ಮಡಿಕೇರಿ ಹೀಗೆ ನಾನಾ ಕಡೆಗಳಿಂದ ಕರೆಗಳನ್ನು ಮಾಡಿ, ನೀವು 500 ರೂ.ಗೆ ಸಿಗ್ತೀರಂತೆ. ಎಲ್ಲಿ ಸಿಗುತ್ತೀರಿ ಎಂದು ಕೇಳುತ್ತಿದ್ದರು. ದಿನವೂ ರಾತ್ರಿ ಹಗಲೆನ್ನದೆ ಕರೆಗಳು ಬರುತ್ತಿದ್ದರಿಂದ ತೀವ್ರ ಮಾನಸಿಕ ಹಿಂಸೆಗೊಳಗಾಗಿದ್ದ ಮಹಿಳೆ ಘಟನೆ ಬಗ್ಗೆ ಕಳೆದ ಫೆಬ್ರವರಿ ತಿಂಗಳಲ್ಲಿ ಮಂಗಳೂರು ಪೊಲೀಸ್ ಕಮಿಷನರನ್ನು ಭೇಟಿಯಾಗಿ ವೇದನೆ ಹೇಳಿಕೊಂಡಿದ್ದರು. ಕೆಲವೊಬ್ಬರು ಫೋನ್ ಮಾಡಿ, ನೀವು ಮತ್ತು ನಿಮ್ಮ ಮಗಳನ್ನು ಅಪಹರಿಸಿ ರೇಪ್ ಮಾಡ್ತೀವಿ. ಕೊಲೆ ಮಾಡುತ್ತೇವೆ ಎಂದೂ ಬೆದರಿಸಿದ್ದರು. ಇವೆಲ್ಲದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಇಂಥವರೇ ಈ ಕೃತ್ಯ ಮಾಡಿಸುತ್ತಿದ್ದಾರೆ ಎನ್ನುವುದರ ಬಗ್ಗೆ ಯಾವುದೇ ಸಾಕ್ಷ್ಯ ಇರಲಿಲ್ಲ.
ಪೊಲೀಸರು ಮಡಿಕೇರಿ, ಸುಬ್ರಹ್ಮಣ್ಯ, ಚಿಕ್ಕಮಗಳೂರು, ಮೂಡಿಗೆರೆ, ಎನ್,ಆರ್.ಪುರ, ಸಂಪಾಜೆ ಹೀಗೆ ವಿವಿಧ ಕಡೆಗಳಲ್ಲಿ ಪರಿಶೀಲನೆ ನಡೆಸಿದಾಗ, ಅಲ್ಲಿನ ಬಸ್ ನಿಲ್ದಾಣದ ಶೌಚಾಲಯದಲ್ಲಿ ಪೋಸ್ಟರ್ ರೀತಿ ಮಾಡಿ ಕಾಗದ ಪತ್ರಗಳನ್ನು ಅಂಟಿಸಿದ್ದು ಕಂಡುಬಂದಿದೆ. ಅದರಲ್ಲಿ ಮೊಬೈಲ್ ನಂಬರ್ ಮತ್ತು ಇ-ಮೇಲ್ ಐಡಿ ಕೊಟ್ಟು ಮಹಿಳೆಯಿಂದ ಫ್ರೀ ಮಸಾಜ್, ಸಂಪರ್ಕಿಸಿ ಎಂದು ಹೇಳಿ ಬರೆಯಲಾಗಿತ್ತು. ಇದರಿಂದ ಅಪರಿಚಿತರು ಮಹಿಳೆಗೆ ಕರೆ ಮಾಡಿ, ಅಸಭ್ಯವಾಗಿ ಮಾತನಾಡುತ್ತಿದ್ದರು. ಅಲ್ಲದೆ, ನಿಮ್ಮ ಮೊಬೈಲ್ ನಂಬರ್ ಶೌಚಾಲಯದಲ್ಲಿ ಸಿಕ್ಕಿತ್ತು. ಅಲ್ಲಿ ಈ ರೀತಿ ಬರೆಯಲಾಗಿದೆ ಎಂದು ಮಾಹಿತಿ ನೀಡಿದ್ದರು. ಇದೇ ಮಾಹಿತಿ ಆಧರಿಸಿ ಪೊಲೀಸರು ಕಳೆದ ಎರಡು ತಿಂಗಳ ಪರ್ಯಂತ ತನಿಖೆ ನಡೆಸಿದ್ದು, ಹಲವಾರು ತಾಂತ್ರಿಕ ಸಾಕ್ಷ್ಯಗಳನ್ನು ಮುಂದಿಟ್ಟು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸಾಕ್ಷ್ಯ ಕಲೆಹಾಕಿದ ಬಳಿಕವೇ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗುವುದು. ಪ್ರಕರಣದಲ್ಲಿ ಇನ್ನಷ್ಟು ಮಂದಿ ಇರುವ ಮಾಹಿತಿಗಳಿದ್ದು, ತನಿಖೆ ನಡೆಸುತ್ತೇವೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಬೇರೆ ಬೇರೆ ಕಾಲೇಜುಗಳ ಪ್ರಾಂಶುಪಾಲರಿಗೆ ಅಂಚೆಗಳಲ್ಲಿ ಪತ್ರಗಳು ಬರುತ್ತಿದ್ದವು. ಅದರಲ್ಲಿ ಮಾನಹಾನಿಕರ ಮತ್ತು ಅಶ್ಲೀಲವಾಗಿ ಬರಹಗಳನ್ನು ಟೈಪ್ ಮಾಡಿ ಪತ್ರಗಳನ್ನು ಕಳಿಸಿಕೊಡುತ್ತಿದ್ದರು. ಹಲವಾರು ಅಪರಿಚಿತರು ಮಾಡಿದ್ದ ಕರೆಗಳು ಮಹಿಳೆಯ ಮೊಬೈಲಿನಲ್ಲಿ ರೆಕಾರ್ಡ್ ಆಗಿದ್ದವು. ಕೆಲವು ಕರೆಗಳಲ್ಲಿ ಎಸ್ ವಿಎಸ್ ಕಾಲೇಜಿನ ಆರೋಪಿಗಳ ದುಷ್ಪ್ರೇರಣೆಯಿಂದ ಉದ್ದೇಶಪೂರ್ವಕ ಮಾತನಾಡುತ್ತಿದ್ದುದು ಕಂಡುಬಂದಿತ್ತು. ಇವೆಲ್ಲ ತಾಂತ್ರಿಕ ಸಾಕ್ಷ್ಯಗಳನ್ನು ಪರಿಗಣಿಸಿ, ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಮೊಬೈಲ್, ಕಂಪ್ಯೂಟರ್ ಪರಿಶೀಲನೆ ನಡೆಸಿದಾಗ, ಅವರಲ್ಲಿ ಈ ರೀತಿ ಬರೆದಿರುವ ಪತ್ರಗಳು, ನಾಗವೇಣಿ ಅವರ ಫೋಟೋಗಳು ಕಂಡುಬಂದಿದ್ದವು. ಅದೇ ಫೋಟೋಗಳು ಅಶ್ಲೀಲವಾಗಿ ಬರೆದು ಪೋಸ್ಟ್ ಮಾಡಿದ್ದ ಪತ್ರಗಳಲ್ಲಿದ್ದವು.
ಆತ್ಮಹತ್ಯೆಗೆ ಮುಂದಾಗಿದ್ದ ನಾಗವೇಣಿ ದಂಪತಿ
ತೀವ್ರ ಮಾನಸಿಕ ಹಿಂಸೆಗೆ ಒಳಗಾಗಿದ್ದ ನಾಗವೇಣಿ ಮತ್ತು ಅವರ ಪತಿ ಒಂದು ಹಂತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುಂದಾಗಿದ್ದರು. ದಿನವೂ ಬರುತ್ತಿದ್ದ ಅಪರಿಚಿತರ ಕರೆಗಳು, ಸಹೋದ್ಯೋಗಿಗಳಿಗೆ ಬರುತ್ತಿದ್ದ ಪತ್ರಗಳಿಂದಾಗಿ ರೋಸಿಹೋಗಿದ್ದ ನಾಗವೇಣಿ ದಂಪತಿ ಪೊಲೀಸರಿಗೆ ದೂರು ನೀಡಿದ್ದರೂ, ಪತ್ತೆ ಆದೀತು ಅನ್ನುವ ನಿರೀಕ್ಷೆ ಕಳಕೊಂಡಿದ್ದರು. ದೂರು ಕೊಟ್ಟು ಎರಡು ತಿಂಗಳಾದ್ರೂ ಏನೂ ಆಗಿಲ್ಲವೆಂದು ನೊಂದುಕೊಂಡಿದ್ದರು. ಆದರೆ ಪೊಲೀಸರು ನಿಗೂಢವಾಗಿಯೇ ಕಾರ್ಯಾಚರಣೆ ನಡೆಸಿ, ಮೂವರನ್ನು ಬಲೆಗೆ ಕೆಡವಿದ್ದಾರೆ. ಇದಕ್ಕಾಗಿ ಪೊಲೀಸ್ ಕಮಿಷನರ್ ಶಶಿಕುಮಾರ್ ಮತ್ತು ತಂಡವನ್ನು ನಾಗವೇಣಿ ಕೈಮುಗಿದು ಅಭಿನಂದಿಸಿದ್ದಾರೆ.
ಡಿಸೆಂಬರ್ ವೇಳೆಗೆ ಅಪರಿಚಿತ ಕರೆಗಳು
ಈ ಬಗ್ಗೆ ನಾಗವೇಣಿ ಅವರಲ್ಲಿ ಮಾಹಿತಿ ಕೇಳಿದಾಗ, ಅನಾಮಧೇಯ ಪತ್ರಗಳು ಮೊದಲೇ ಬಂದಿದ್ದರೂ, ಡಿಸೆಂಬರ್ ವೇಳೆಗೆ ಅಪರಿಚಿತ ಕರೆಗಳು ಬರತೊಡಗಿದ್ದವು. ಆಗ ಆನ್ಲೈನ್ ಕ್ಲಾಸ್ ಇದ್ದುದರಿಂದ ಕ್ಲಾಸ್ ಮಾಡುವುದಕ್ಕೂ ಕಷ್ಟವಾಗಿತ್ತು. ಮೊಬೈಲ್ ಬದಿಗಿಟ್ಟು ದೂರ ಇರುವುದಕ್ಕೂ ಸಾಧ್ಯವಾಗದ ಸ್ಥಿತಿ ಇತ್ತು. ಕೆಲವರು ಫೋನ್ ಮಾಡಿ, ಬೆದರಿಕೆ ಒಡ್ಡುತ್ತಿದ್ದರು. ಮಕ್ಕಳ ಬಗ್ಗೆಯೂ ರೇಪ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು. ತೀವ್ರ ಮಾನಸಿಕ ಹಿಂಸೆ ಅನುಭವಿಸಿದ್ದೆ. ಆದರೆ ಏನೂ ಮಾಡುವಂತಿರಲಿಲ್ಲ. ಪೊಲೀಸ್ ಕಮಿಷನರ್ ಗೆ ಬಂದು ಹೇಳಿದ್ದೆ. ತನ್ನಲ್ಲಿದ್ದ ಎಲ್ಲ ಸಾಕ್ಷ್ಯಗಳನ್ನೂ ಕೊಟ್ಟಿದ್ದೆ. ಕೊನೆಗೂ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ಅದಕ್ಕಾಗಿ ತುಂಬು ಹೃದಯದಿಂದ ಅಭಿನಂದಿಸುತ್ತೇನೆ ಎಂದರು.
ಎಸ್ ವಿಎಸ್ ಕಾಲೇಜಿನಲ್ಲಿ 22 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಕಳೆದ ಐದು ವರ್ಷಗಳಿಂದ ರಥಬೀದಿ ಸರಕಾರಿ ಕಾಲೇಜಿನಲ್ಲಿದ್ದೇನೆ. ಈಗಿನ ಕಾಲೇಜಿನ ಶಿಕ್ಷಕ ವೃಂದದವರು, ಸ್ನೇಹಿತರು ನನಗೆ ಸಪೋರ್ಟ್ ಮಾಡಿದ್ದಾರೆ. ನೊಂದು ಆತ್ಮಸ್ಥೈರ್ಯ ಕಳಕೊಂಡಾಗ, ಧೈರ್ಯ ಹೇಳಿದ್ದಾರೆ. ಪೊಲೀಸರು ಈ ಹಿಂದೆ ನನ್ನ ಸಹೋದ್ಯೋಗಿ ಆಗಿದ್ದವರನ್ನು ಆರೋಪಿಗಳೆಂದು ಪತ್ತೆ ಮಾಡಿದ್ದು, ವಿದ್ಯಾವಂತರೇ ಈ ರೀತಿ ಮಾಡಿದ್ದಾರೆ ಅನ್ನುವುದನ್ನು ತಿಳಿದು ನಾಚಿಕೆ ಆಗುತ್ತಿದೆ. ನಾನು ಎಂಟು ಪುಸ್ತಕ ಬರೆದಿದ್ದೇನೆ. ಹಲವಾರು ಪ್ರಶಸ್ತಿಗಳು ಬಂದಿವೆ. ನನಗೆ 58 ವರ್ಷವಾಗಿದ್ದು ಈ ಪ್ರಾಯದಲ್ಲಿ ನನಗೆ ಈ ರೀತಿ ಕಿರುಕುಳ ಕೊಟ್ಟಿದ್ದಾರೆ. ಅವರನ್ನು ಹಾಗೇ ಬಿಡಬಾರದು ಎಂದು ನಾಗವೇಣಿ ಹೇಳಿದರು. ಯಾಕಾಗಿ ಈ ರೀತಿ ಕಿರುಕುಳ ಕೊಟ್ಟಿದ್ದಾರೆ ಎನ್ನುವುದು ಪತ್ತೆಯಾಗಿಲ್ಲ. ನಾಗವೇಣಿ ಕನ್ನಡ ಅಧ್ಯಯನ ಮಂಡಳಿ ಸದಸ್ಯೆಯಾಗಿರುವುದು, ಪಠ್ಯಪುಸ್ತಕ ರಚನಾ ಸಮಿತಿಯಲ್ಲಿರುವುದಕ್ಕೆ ಆಕ್ಷೇಪಿಸಿ ಈ ರೀತಿ ಮಾಡಿದ್ದರು ಎನ್ನಲಾಗುತ್ತಿದೆ.
Briefing the media persons during a press meet Police Commissioner N Shashi Kumar said * Police have arrested three persons in a harassment case where a woman was being harassed since a year, by posting derogatory comments and posting pamphlets abusing her as a prostitute etc. The arrested persons are Tharanath Shetty, Pradeep Poojary and Prakash Shenoy, all three Lecturers at SVS college in Bantwal where the Victim Ms Nagaveni was also a lecturer there..
10-01-25 11:01 pm
Bangalore Correspondent
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
Ramnagara Accident, KSRTC: KSRTC ಬಸ್ - ಬೈಕ್ ನ...
09-01-25 07:04 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
10-01-25 11:14 pm
Mangalore Correspondent
Mini Olympics, Mangalore- Uudpi: ಜ.17ರಿಂದ 23...
10-01-25 06:23 pm
Wenlock Hospital, Mangalore, organ harvesting...
10-01-25 03:31 pm
Mangalore crime, Misfire, Police; ಪಿಎಫ್ಐ ಒಳಸಂ...
09-01-25 07:50 pm
ಜನವರಿ 11-12 ; 'ಮಂಗಳೂರು ಲಿಟ್ ಫೆಸ್ಟ್' ಏಳನೇ ಆವೃತ...
08-01-25 09:51 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm